ಶನಿವಾರ, ಫೆಬ್ರವರಿ 4, 2023
28 °C
ವಿಶ್ವ ಕನ್ನಡಿಗರ ಸಂಸ್ಥೆಯಿಂದ ರಾಜ್ಯೋತ್ಸವ ಆಚರಣೆ

110 ಜನರಿಗೆ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ವತಿಯಿಂದ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 67 ಜನರಿಗೆ ಕರ್ನಾಟಕ ರಾಜ್ಯೋತ್ಸವ ಹಾಗೂ 43 ಮಂದಿಗೆ ಕಲ್ಯಾಣ ಕರ್ನಾಟಕ ಕಾಯಕ ರತ್ನ ಸೇರಿ 110 ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಲೇಖಕ ಸುಬ್ಬಣ್ಣ ಕರಕನಳ್ಳಿ ರಚಿತ ಕ್ರಾಂತಿಯ ಬೆಳಕು ಕೃತಿ ಬಿಡುಗಡೆಗೊಳಿಸಲಾಯಿತು. ಕ್ರಾಂತಿಯ ಬೆಳಕು ಕೃತಿ ಅನುಭವದ ಕೃತಿಯಾಗಿದೆ ಎಂದು ಕೃತಿ ಬಿಡುಗಡೆ ಮಾಡಿದ ಮಹೇಶ್ವರ ತಾತಾ ತಾವರಗೇರಾ ನುಡಿದರು.
ಕನ್ನಡ ರಾಜ್ಯೋತ್ಸವ ಆಚರಣೆಯು ಕನ್ನಡಿಗರಿಗೆ ಹೆಮ್ಮೆ, ಅಭಿಮಾನ, ಸ್ವಾಭಿಮಾನದ ಸಂಗತಿಯಾಗಿದೆ ಎಂದು ಹೇಳಿದರು.
ಕರ್ನಾಟಕ ಪರ ಸಂಘಟನೆಗಳ ರಾಜ್ಯ ಅಧ್ಯಕ್ಷ ಡಾ. ವಿಶ್ವನಾಥ ಜಿ.ಪಿ. ಮಾತನಾಡಿದರು.
ಚಿತ್ರನಟಿ ಲಕ್ಷಿತಾ ಅವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವೀರ ಕನ್ನಡಿಗರ ಸೇನೆ ರಾಜ್ಯ ಅಧ್ಯಕ್ಷ ಅಮೃತ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಸಂಘಟನೆಗಳ ಪ್ರಮುಖರಾದ ಎ.ಜೆ. ಖಾನ್, ಅಭಿ ಗೌಡ, ರವಿ ವಂಟಿ, ಪ್ರಸನ್ನಕುಮಾರ ಸ್ವಾಮಿ, ಮುಕೇಶ ಶಹಾಗಂಜ್, ಸಂದೀಪ್ ಚಾಂಬೋಳ್, ಬಸವರಾಜ ಜಡಿಗೆ, ಚಂದ್ರಕಾಂತ ದೇವಕೆ, ಮಹೇಂದ್ರ ಸಿಂಗ್ ಪಾಟೀಲ, ಅಶೋಕ ವಗ್ಗೆ ಇದ್ದರು.
ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕದ ರಾಜ್ಯ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಸ್ವಾಗತಿಸಿದರು. ಮಲ್ಲಯ್ಯ ಅತ್ತನೂರು, ಅವಿನಾಶ ಪಕ್ಕಲವಾಡ, ಸಿದ್ಧಾರೂಢ ರಂಜೋಳಕರ್ ನಿರೂಪಿಸಿದರು. ಅಜೀತ್ ನೇಳಗೆ ವಂದಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು