ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾನವ ಕಲ್ಯಾಣಕ್ಕೆ ಶರಣರ ಬಲಿದಾನ’

ಮುಧೋಳ(ಬಿ): ಬಸವ ಜ್ಯೋತಿ ಕಾರ್ಯಕ್ರಮ
Last Updated 24 ಏಪ್ರಿಲ್ 2022, 6:56 IST
ಅಕ್ಷರ ಗಾತ್ರ

ಕಮಲನಗರ: 12ನೇ ಶತಮಾನದಲ್ಲಿ ಬಸವಾದಿ ಶರಣರ ತ್ಯಾಗ ಬಲಿದಾನಗಳು ಹೊನ್ನು, ಮಣ್ಣಿಗಾಗಿ ನಡೆದಂತವುಗಳಲ್ಲ. ಬದಲಿಗೆ ಮಾನವ ಕುಲದ ಸರ್ವಾಂಗೀಣ ವಿಕಸಕ್ಕಾಗಿ, ಸಕಲ ಜೀವಾತ್ಮರ ಉದ್ಧಾರಕ್ಕಾಗಿ ನಡೆದಿವೆ ಎಂದು ಸಂಗಮ ನೀಲಾಂಬಿಕಾ ಆಶ್ರಮದ ಮಹಾದೇವಮ್ಮ ತಾಯಿ ತಿಳಿಸಿದರು.

ತಾಲ್ಲೂಕಿನ ಮುಧೋಳ(ಬಿ) ಗ್ರಾಮದ ಬಸವ ಮಂಟಪದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 166ನೇ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖಂಡ ಬಾಬುರಾವ ಗುಡ್ಡಾ ಮಾತನಾಡಿ, ವಚನಗಳಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ನೈತಿಕ ಹಾಗೂ ಶೈಕ್ಷಣಿಕಕ್ಕೆ ಸಂಬಂಧಿಸಿದ ಮೌಲ್ಯಗಳಿವೆ. ವಚನಗಳನ್ನು ಓದಿ ಅವುಗಳ ಸಂದೇಶ ಪಾಲಿಸಬೇಕು ಎಂದರು.

ಶಿಕ್ಷಕರ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ಬಸವರಾಜ ಪಾಟೀಲ, ನಂದಕುಮಾರ, ಹೌಗಿರಾವ ವಟಗೆ, ನಾಗಯ್ಯ ಸ್ವಾಮಿ, ಶಿವಕುಮಾರ ಕುಂಬಾರ, ರಾಜಕುಮಾರ ಕುಂಬಾರ, ಪ್ರಕಾಶ ಕುಶನೂರೆ, ಶೋಭಾ ಕುಶನೂರೆ, ಭಾಗ್ಯವಂತಿ ಖೇಳಗೆ ಇದ್ದರು.

ನಾಗನಾಥ ಶಂಕು ನಿರೂಪಿಸಿದರು. ಬಸವರಾಜ ಖೇಳಗೆ ಸ್ವಾಗತಿಸಿದರು. ಬಸವರಾಜ ಒಚಿಟೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT