ಭಾನುವಾರ, ನವೆಂಬರ್ 1, 2020
20 °C

ಬಸವಕಲ್ಯಾಣಕ್ಕೆ ಬರುತ್ತಿರುವ ಶಾಸಕ ಬಿ.ನಾರಾಯಣರಾವ್‌ ಪಾರ್ಥಿವ ಶರೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ಶಾಸಕ ಬಿ.ನಾರಾಯಣರಾವ್‌ ಪಾರ್ಥಿವ ಶರೀರ ಅಂಬುಲೆನ್ಸ್‌ ಮೂಲಕ ಹೈದರಾಬಾದ್‌ ಮಾರ್ಗವಾಗಿ ಬಸವಕಲ್ಯಾಣ ಬರುತ್ತಿದೆ.

ಅಂಬುಲೆನ್ಸ್‌ ಈಗಾಗಲೇ ಸಂಗಾರೆಡ್ಡಿ ದಾಟಿದ್ದು, ಹುಮನಾಬಾದ್‌ ಮಾರ್ಗವಾಗಿ ಮಧ್ಯಾಹ್ನ 12 ಗಂಟೆಯ ವೇಳೆಗೆ ಬಸವಕಲ್ಯಾಣ ತಲುಪಲಿದೆ.

ಇಂದು (ಶುಕ್ರವಾರ) ಮಧ್ಯಾಹ್ನ 12 ಗಂಟೆಗೆ ಬಸವಕಲ್ಯಾಣದ ಸಸ್ತಾಪುರ ಬಂಗ್ಲಾ ಸಮೀಪದ ಬೊಕ್ಕೆ ಲೇಔಟ್‌ನಲ್ಲಿ ನಡೆಯಲಿದೆ. ಬೊಕ್ಕೆ ಲೇಔಟ್‌ ನಗರದ ಹೊರವಲಯದಲ್ಲಿ ಮುಡಬಿ ಕ್ರಾಸ್‌ನಲ್ಲಿ ಇದೆ. 

ಸಕಲ ಸರ್ಕಾರಿ ಗೌರವಗಳೊಂದಿಗೆ ಕನಿಷ್ಠ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಕೋವಿಡ್ 19 ಸರ್ಕಾರಿ ಮಾರ್ಗಸೂಚಿಗಳನ್ನು ಪಾಲಿಸಿ ಅಂತ್ಯಕ್ರಿಯೆ ನೆರವೇರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲಾಡಳಿತ ಬಿ.ನಾರಾಯಣರಾವ್‌ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಹಾಗೂ ಮೆರವಣಿಗೆಗೆ ಅವಕಾಶ ಕಲ್ಪಿಸಿಲ್ಲ. ಎಲ್ಲರೂ ಮನೆಯಲ್ಲೇ ಇದ್ದು ಶಾಸಕರಿಗೆ ಗೌರವ ಸಲ್ಲಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.