ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಯಲ ಬೆಳಕಿನ ವಚನಗಳು’ ಕೃತಿ ಬಿಡುಗಡೆ

Last Updated 4 ಜುಲೈ 2021, 6:44 IST
ಅಕ್ಷರ ಗಾತ್ರ

ಹುಮನಾಬಾದ್: ‘12ನೇ ಶತಮಾನದ ಶರಣರ ವಚನಗಳು ಇಂದಿನ ತಂತ್ರಜ್ಞಾನ ಯುಗದಲ್ಲೂ ಚಿಂತನೆಗಳಾಗಿ ಮುಂದುವರೆಯುತ್ತಿವೆ’ ಎಂದು ಸಾಹಿತಿ ಬಸವರಾಜ ದಯಾಸಾಗರ ತಿಳಿಸಿದರು.

ಪಟ್ಟಣದ ಪರಿಪೂರ್ಣ ಚಾರಿಟಬಲ್ ಟ್ರಸ್ಟ್‌ ಹಮ್ಮಿಕೊಂಡಿದ್ದ ಡಾ.ಜಯದೇವಿ ಗಾಯಕವಾಡ ಅವರ ‘ಬಯಲ ಬೆಳಕಿನ ವಚನಗಳು’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಪ್ರಚಲಿತ ವಿಷಯಗಳ ಬಗ್ಗೆ ಸಾಮಾಜಿಕ ವೈಚಾರಿಕ ನಿಲುವನ್ನು ಡಾ.ಜಯದೇವಿ ಗಾಯಕವಾಡ ಅವರು ಹೊಂದಿದ್ದಾರೆ. ಕಾವ್ಯ, ಗಜಲ್, ಕಾದಂಬರಿ ಸೇರಿದಂತೆ ಎಲ್ಲ ಬರಹಗಳಲ್ಲಿ ವೈಚಾರಿಕವಾಗಿ ಬರೆಯುವ ಕೆಲವೇ ಲೇಖಕರಲ್ಲಿ ಇವರ ಹೆಸರು ಎದ್ದು ಕಾಣುತ್ತದೆ’ ಎಂದರು.

ಲೇಖಕ ಉಮೇಶ ಮಾತನಾಡಿ, ‘ಇವರ ಬರಹದಲ್ಲಿ ಪ್ರಗತಿಪರ, ವೈಚಾರಿಕ, ವೈಜ್ಞಾನಿಕ ಹಾಗೂ ಸಾಮಾಜಿಕ ಬದ್ಧತೆಯ ಚಿಂತನೆಗಳು ಇರುವುದರಿಂದ ಓದುಗರ ಗಮನ ಸೆಳೆಯುತ್ತಾರೆ’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಿಪೂರ್ಣ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷೆ ವಿಜಯಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ, ಡಾ.ಪೀರಪ್ಪ ಸಜ್ಜನ್, ಚೈತ್ರಾ, ಪ್ರಿಯದರ್ಶಿನಿ, ಸೃಷ್ಠಿ, ಸಿದ್ಧಾರ್ಥ ಮಠದ, ಸಿದ್ಧಾರ್ಥ ಜಿ.ಸಾಕ್ಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT