ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಯಾಣ ಕ್ರಾಂತಿ ವಿಜಯೋತ್ಸವ ಕರಪತ್ರ ಬಿಡುಗಡೆ

Published : 2 ಅಕ್ಟೋಬರ್ 2024, 15:59 IST
Last Updated : 2 ಅಕ್ಟೋಬರ್ 2024, 15:59 IST
ಫಾಲೋ ಮಾಡಿ
Comments

ಭಾಲ್ಕಿ: ‘12ನೇ ಶತಮಾನದಲ್ಲಿ ಬಸವಾದಿ ಶರಣರು ನೀಡಿರುವ ಕೊಡುಗೆಯನ್ನು ಸ್ಮರಿಸುವುದು ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವದ ಮೂಲ ಧ್ಯೇಯವಾಗಿದೆ’ ಎಂದು ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಬುಧವಾರ ಆಯೋಜಿಸಿದ್ದ ಮರಣವೇ ಮಹಾನವಮಿ, ಕಲ್ಯಾಣ ಕ್ರಾಂತಿ ವಿಜಯೋತ್ಸವ ಕರಪತ್ರ ಬಿಡುಗಡೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ಪಟ್ಟಣದ ಚನ್ನಬಸವಾಶ್ರಮದಲ್ಲಿ ಹಿರೇಮಠ ಸಂಸ್ಥಾನದಿಂದ ಅಕ್ಕನ ಬಳಗದ ಸಹಯೋಗದಲ್ಲಿ ಒಂಬತ್ತು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮ ಜರುಗಲಿವೆ. ಗುರುವಾರ ಸಂಜೆ 5.30ಕ್ಕೆ ಡಾ.ಶೈಲಜಾ ಅನಿಲ್ ತಳವಾಡೆ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರತಿದಿನ ಉಪನ್ಯಾಸ ನಡೆಯಲಿದ್ದು, ಮಹಿಳಾ ಸಾಹಿತಿಗಳು, ಉಪನ್ಯಾಸಕರು ಬಸವಾದಿ ಶರಣೆಯರ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.

ಇದರೊಂದಿಗೆ ಧರ್ಮಗ್ರಂಥ ಪಾರಾಯಣ, ಹಿರಿಯ ಸಾಧಕರ ಸನ್ಮಾನ, ಸಂಗೀತ ಸೇರಿ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳು ನೆರವೇರಲಿವೆ. ಪ್ರತಿದಿನ ಸಂಜೆ 5.30ರಿಂದ 7 ಗಂಟೆ ವರೆಗೆ ಕಾರ್ಯಕ್ರಮ ನಡೆಯಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು‌ ಎಂದು ಮನವಿ ಮಾಡಿದರು.

ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದರು. ಮರಣವೇ ಮಹಾನವಮಿ, ಕಲ್ಯಾಣ ಕ್ರಾಂತಿ ವಿಜಯೋತ್ಸವ ಸಮಿತಿ ಅಧ್ಯಕ್ಷೆ ಚಂದ್ರಕಲಾ ಡಿಗ್ಗೆ ಅವರು ಕರಪತ್ರ ಬಿಡುಗಡೆಗೊಳಿಸಿದರು.

ತಾಲ್ಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ, ಪ್ರಮುಖರಾದ ಸುನಿತಾ ಮಮ್ಮಾ, ನಿರ್ಮಲಾ ಜಮಾದಾರ್, ಪಾರ್ವತಿ ಧೂಮ್ಮನಸೂರೆ, ರೇಖಾ ಮಹಾಜನ್, ಪ್ರಿಯಾ ದಶಮುಖೆ, ಅಂಬಿಕಾ ಬೆಲ್ದಾಳ, ಸವಿತಾ ಭೂರೆ, ಪ್ರಭಾ ಚನ್ನಪ್ಪ ಕರಕಾಳೆ, ಜಗದೇವಿ ಶಿವಕುಮಾರ ಮೂಲಗೆ, ರೂಪಾ ಸಂಜೀವಕುಮಾರ ಬಿಡವೆ ಸೇರಿದಂತೆ ಹಲವರು ಇದ್ದರು.

ತತ್ವ ನಿಷ್ಠೆಗಾಗಿ ಪ್ರಾಣ ತ್ಯಾಗ ಮಾಡಿದ ಶರಣರ ಕೊಡುಗೆಯನ್ನು ಸ್ಮರಿಸಲು ಮರಣವೇ ಮಹಾನವಮಿ ಕಲ್ಯಾಣ ಕ್ರಾಂತಿ ವಿಜಯೋತ್ಸವ ಆಚರಿಸಲಾಗುತ್ತಿದೆ.
–ಬಸವಲಿಂಗ ಪಟ್ಟದ್ದೇವರು, ಹಿರೇಮಠ ಸಂಸ್ಥಾನ ಭಾಲ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT