ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ; ಏಪ್ರಿಲ್ 18ರಿಂದ ವಚನ ಜಾತ್ರೆ

Last Updated 3 ಏಪ್ರಿಲ್ 2023, 14:23 IST
ಅಕ್ಷರ ಗಾತ್ರ

ಬೀದರ್: ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಏಪ್ರಿಲ್ 18 ರಿಂದ 23 ರ ವರೆಗೆ ಬಸವ ಜಯಂತಿ, ಡಾ. ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಹಾಗೂ ವಚನ ಜಾತ್ರೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.
ನಗರದ ಡಾ. ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ನಡೆದ ವಚನ ಜಾತ್ರೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಈ ಬಾರಿ ವಿನೂತನ ರೀತಿಯಲ್ಲಿ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ಏಪ್ರಿಲ್ 23 ರಂದು ಐದು ಸಾವಿರ ಮಕ್ಕಳು ಬಾಲ ಬಸವ ಪಾತ್ರಧಾರಿಗಳಾಗಿ ಪ್ರದರ್ಶನ ನೀಡಲಿದ್ದಾರೆ. ಒಂದು ಸಾವಿರ ಶರಣ, ಶರಣೆಯರಿಂದ ವಚನ ಪಠಣ ನಡೆಯಲಿದೆ. ಚಿಂತನ ಗೋಷ್ಠಿಗಳು ಜರುಗಲಿವೆ ಎಂದು ತಿಳಿಸಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ವಚನ ಜಾತ್ರೆಯನ್ನು ವೈಭವಯುತವಾಗಿ ಆಯೋಜಿಸಲಾಗುವುದು. ಜಾತ್ರೆ ಯಶಸ್ಸಿಗೆ ಎಲ್ಲರೂ ತನು, ಮನ, ಧನದಿಂದ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮಕ್ಕೆ ತಲಾ ರೂ. 51 ಸಾವಿರ ದೇಣಿಗೆ ಕೊಡಲಾಗುವುದು ಎಂದು ಉದ್ಯಮಿಗಳಾದ ಜೈರಾಜ ಖಂಡ್ರೆ ಹಾಗೂ ಚಂದ್ರಶೇಖರ ಹೆಬ್ಬಾಳೆ ಘೋಷಿಸಿದರು.
ಭಾರತೀಯ ಬಸವ ಬಳಗದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಮಾತನಾಡಿದರು. ಮಹಾಲಿಂಗ ದೇವರು ಸಮ್ಮುಖ ವಹಿಸಿದ್ದರು.
ಪ್ರಮುಖರಾದ ಸಿದ್ದಯ್ಯ ಕಾವಡಿಮಠ, ಮಲ್ಲಿಕಾರ್ಜುನ ಹುಡಗೆ, ಮಹಾಲಿಂಗಪ್ಪ ಬೆಲ್ದಾಳೆ, ಸಂಗ್ರಾಮ ಎಂಗಳೆ, ಶಿವಕುಮಾರ ಭಾಲ್ಕೆ, ವಿಶ್ವನಾಥ ಗಂದಿಗುಡೆ, ಸಂಗ್ರಾಮಪ್ಪ ಬಿರಾದಾರ, ಗುರುನಾಥ ಬಿರಾದಾರ, ಶರಣಪ್ಪ ಚಿಮಕೋಡೆ, ಲಕ್ಷ್ಮೀಬಾಯಿ ಮಾಳಗೆ, ಶಕುಂತಲಾ ಖಂಡ್ರೆ, ಮಲ್ಲಿಕಾರ್ಜುನ ಖಂಡ್ರೆ, ಸುವರ್ಣಾ ಚಿಮಕೋಡೆ, ಕಸ್ತೂರಿಬಾಯಿ ಬಿರಾದಾರ, ಶಶಿಧರ ಕೋಸಂಬೆ, ಪ್ರೇಮಾ ಘಾಳೆಪ್ಪ, ಡಾ. ವೈಜಿನಾಥ ಬಿರಾದಾರ ಇದ್ದರು.
ಶ್ರೀಕಾಂತ ಬಿರಾದಾರ ವಚನ ಗಾಯನ ಮಾಡಿದರು. ಉಮಾಕಾಂತ ಮೀಸೆ ನಿರೂಪಿಸಿದರು. ಪ್ರಸಾದ ನಿಲಯದ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT