ಭಾಲ್ಕಿ: ತಾಲ್ಲೂಕಿನ ಭಾತಂಬ್ರಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ರವೀಂದ್ರ ಗಾಮಾ, ಉಪಾಧ್ಯಕ್ಷರಾಗಿ ಸಂತೋಷ ಬಟನಾಪೂರೆ ಆಯ್ಕೆಯಾಗಿದ್ದಾರೆ.

ಗ್ರಾಮದ ಪಿಕೆಪಿಎಸ್ ಕಚೇರಿಯಲ್ಲಿ ಸೋಮವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ರವೀಂದ್ರ ಗಾಮಾ, ಸೋಮನಾಥ ಟೋಕರೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಂತೋಷ ಬಟನಾಪೂರೆ, ನಾಗನ್ನಾಥ ಖರಾಬೆ ನಾಮಪತ್ರ ಸಲ್ಲಿಸಿದ್ದರು.

ಅಂತಿಮವಾಗಿ ರವೀಂದ್ರ ಗಾಮಾ ಮತ್ತು ನಾಗನ್ನಾಥ ಖರಾಬೆ ಅವರು ತಲಾ 08 ಮತ ಪಡೆದು ಕ್ರಮವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಪಿಕೆಪಿಎಸ್ ನಿರ್ದೇಶಕರಾದ ಅನಿಲ್ ದಾಡಗೆ, ಶಂಕರ ಟೋಕರೆ, ಸುರೇಶ ಘಾಳೆ, ಝರೇಪ್ಪ ವಗ್ಗೆ, ಸಂದ್ಯಾಪನ ಘೋಗರೆ, ಗ್ರಾ.ಪಂ ಅಧ್ಯಕ್ಷ ಮಹಾಂತೇಶ ಪಾಟೀಲ, ಸದಸ್ಯರಾದ ಜೈರಾಜ ಪಾಟೀಲ, ವಿಜಯಕುಮಾರ ಗಾಮಾ, ಶೀಲ ಭಂಡಾರೆ, ವಿಶ್ವ ಹೂಗಾರ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಸತೀಶ ಬಿರಾದಾರ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.