ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ 21 ಮನೆಗಳು ಭಾಗಶಃ ಕುಸಿತ

ಜಿಲ್ಲೆಯ ಕಮಠಾಣ ಹೋಬಳಿಯಲ್ಲಿ ಗರಿಷ್ಠ ಮಳೆ
Last Updated 10 ಜುಲೈ 2022, 12:42 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಭಾನುವಾರವೂ ಜಿಟಿ ಜಿಟಿ ಮಳೆ ಸುರಿದಿದೆ. 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 32.7 ಮಿ.ಮೀ. ಮಳೆಯಾಗಿದೆ. ಕಮಠಾಣಾ ಹೋಬಳಿಯಲ್ಲಿ ಅತಿ ಹೆಚ್ಚು 74 ಮಿ.ಮೀ ಮಳೆಯಾಗಿದೆ. ಮಳೆಗೆ 21 ಮನೆಗಳು ಭಾಗಶಃ ಕುಸಿದಿವೆ.

ಔರಾದ್‌, ಭಾಲ್ಕಿ ತಾಲ್ಲೂಕಿನಲ್ಲಿ ತಲಾ ನಾಲ್ಕು, ಬೀದರ್‌, ಹುಮನಾಬಾದ್‌ ಹಾಗೂ ಚಿಟಗುಪ್ಪ ತಾಲ್ಲೂಕಿನಲ್ಲಿ ತಲಾ ಮೂರು ಬಸವಕಲ್ಯಾಣ, ಕಮಲನಗರದಲ್ಲಿ ತಲಾ ಎರಡು ಮನೆಗಳು ಭಾಗಶಃ ಬಿದ್ದಿವೆ. ಮೂರು ಮನೆಗಳ ಮಾಲೀಕರಿಗೆ ತಹಶೀಲ್ದಾರರು ಪರಿಹಾರ ವಿತರಿಸಿದ್ದಾರೆ. ಉಳಿದ 18 ಮನೆಗಳ ಪರಿಹಾರ ವಿತರಣೆಗೆ ಪರಿಶೀಲನೆ ನಡೆದಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.

ಮಳೆ ಬೆಳಗಿನ ಜಾವ ಜೋರಾಗಿಯೇ ಸುರಿದಿದೆ. ಬೆಳಿಗ್ಗೆ ಎರಡು ತಾಸು ಹಾಗೂ ಮಧ್ಯಾಹ್ನ ಎರಡು ತುಸು ಬಿಡುವು ನೀಡಿತ್ತು. ದಿನವಿಡೀ ಮೋಡ ಕವಿದ ವಾತಾವರಣ ಇತ್ತು. ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೂ ನಗರ ಪ್ರದೇಶದಲ್ಲಿ ವಿದ್ಯುತ್‌ ಇರಲಿಲ್ಲ. ಸಂಜೆ ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ಗ್ರಾಹಕರು ಕಿರಿಕಿರಿ ಅನುಭವಿಸಬೇಕಾಯಿತು.

ಬೀದರ್‌ ತಾಲ್ಲೂಕಿನಲ್ಲಿ ಸರಾಸರಿ 40.70 ಮಿ.ಮೀ, ಭಾಲ್ಕಿ ತಾಲ್ಲೂಕಿನಲ್ಲಿ 30.40 ಮಿ.ಮೀ, ಔರಾದ್‌ ತಾಲ್ಲೂಕಿನಲ್ಲಿ 45.77 ಮಿ.ಮೀ, ಬಸವಕಲ್ಯಾಣ ತಾಲ್ಲೂಕಿನಲ್ಲಿ 21 ಮಿ.ಮೀ, ಹುಮನಾಬಾದ್‌ ತಾಲ್ಲೂಕಿನಲ್ಲಿ 27.43 ಮಿ.ಮೀ. ಚಿಟಗುಪ್ಪ ತಾಲ್ಲೂಕಿನಲ್ಲಿ 34.46 ಮಿ.ಮೀ, ಕಮಲನಗರದಲ್ಲಿ 34.47 ಮಿ.ಮೀ ಹಾಗೂ ಹುಲಸೂರಿನಲ್ಲಿ 21.40 ಮಿ.ಮೀ ಮಳೆ ಸುರಿದಿದೆ.

ಔರಾದ್‌ನಲ್ಲಿ 51.50 ಮಿ.ಮೀ, ಚಿಂತಾಕಿಯಲ್ಲಿ 47.20 ಮಿ.ಮೀ, ಸಂತಪುರದಲ್ಲಿ 38.60 ಮಿ.ಮೀ, ಬೀದರ್‌ ನಗರದಲ್ಲಿ 18.40 ಮಿ.ಮೀ, ಬಗದಲ್‌ನಲ್ಲಿ 65.40 ಮಿ.ಮೀ, ಬೀದರ್‌ ದಕ್ಷಿಣದಲ್ಲಿ 22.40 ಮಿ.ಮೀ, ಜನವಾಡದಲ್ಲಿ 38.50 ಮಿ.ಮೀ, ಕಮಠಾಣದಲ್ಲಿ 70.10 ಮಿ.ಮೀ, ಮನ್ನಳ್ಳಿಯಲ್ಲಿ 25.40 ಮಿ.ಮೀ, ಭಾಲ್ಕಿ ಪಟ್ಟಣದಲ್ಲಿ 25.40 ಮಿ.ಮೀ, ಹಲಬರ್ಗಾದಲ್ಲಿ 25.80 ಮಿ.ಮೀ, ಖಟಕಚಿಂಚೋಳಿಯಲ್ಲಿ 38 ಮಿ.ಮೀ, ಲಖನಗಾಂವದಲ್ಲಿ 29.40 ಮಿ.ಮೀ, ನಿಟ್ಟೂರ(ಬಿ)ದಲ್ಲಿ 40.20 ಮಿ.ಮೀ, ಸಾಯಿಗಾಂವದಲ್ಲಿ 23.60 ಮಿ.ಮೀ ಮಳೆ ಬಿದ್ದಿದೆ.

ಬಸವಕಲ್ಯಾಣ ನಗರದಲ್ಲಿ 22.40 ಮಿ.ಮೀ, ಕೊಹಿನೂರಲ್ಲಿ 20.40 ಮಿ.ಮೀ, ಮಂಠಾಳದಲ್ಲಿ 21 ಮಿ.ಮೀ, ಮುಡಬಿಯಲ್ಲಿ 22 ಮಿ.ಮೀ, ರಾಜೇಶ್ವರದಲ್ಲಿ 20.60 ಮಿ.ಮೀ, ಹುಮನಾಬಾದ್ ಪಟ್ಟಣದಲ್ಲಿ 32.10 ಮಿ.ಮೀ, ದುಬಲಗುಂಡಿಯಲ್ಲಿ 25 ಮಿ.ಮೀ, ಹಳ್ಳಿಖೇಡ(ಬಿ)ದಲ್ಲಿ 25.20 ಮಿ.ಮೀ, ಚಿಟಗುಪ್ಪ ಪಟ್ಟಣದಲ್ಲಿ 24 ಮಿ.ಮೀ, ಬೇಮಳಖೇಡದಲ್ಲಿ 45 ಮಿ.ಮೀ, ನಿರ್ಣಾದಲ್ಲಿ 35 ಮಿ.ಮೀ, ಕಮಲನಗರದಲ್ಲಿ 34.10 ಮಿ.ಮೀ, ದಾಬಕಾದಲ್ಲಿ 33.30 ಮಿ.ಮೀ, ಠಾಣಾಕುಶನೂರಿನಲ್ಲಿ 36 ಮಿ.ಮೀ ಹಾಗೂ ಹುಲಸೂರಿನಲ್ಲಿ 21.40 ಮಿ.ಮೀ ಮಳೆಯಾಗಿದೆ.

ಇಂಟರ್‌ನೆಟ್‌ ದುರ್ಬಲ: ಮೂರು ದಿನಗಳಿಂದ ಜಿಲ್ಲೆಯಲ್ಲಿ ಇಂಟರ್‌ನೆಟ್‌ ದುರ್ಬಲಗೊಂಡಿದೆ. ಬಿಎಸ್‌ಎನ್‌ಎಲ್‌ ಅಕ್ಷರಶಃ 2ಜಿ ಆಗಿ ಪರಿವರ್ತನೆಯಾಗಿದೆ. ವಾಟ್ಸ್‌ಆ್ಯಪ್‌ ಸಂದೇಶಗಳು ಹೋಗುತ್ತಿಲ್ಲ. ಕರೆಗಳೂ ಅರ್ಧಕ್ಕೆ ಕಡಿತಗೊಳ್ಳುತ್ತಿವೆ. ಏರ್‌ಟೆಲ್‌ ನೆಟ್ ದುರ್ಬಲಗೊಂಡಿದೆ. ಜಿಯೊ ನೆಟ್‌ವರ್ಕ್‌ ಸಹ ಕೈಕೊಟ್ಟಿದೆ. ಮನೆಯಿಂದ ಕಚೇರಿ ಕೆಲಸ ಮಾಡುವವರು ಹೆಚ್ಚು ತೊಂದರೆ ಅನುಭವಿಸಬೇಕಾಯಿತು.

ಇಂಟರ್‌ನೆಟ್‌ ಸಮಸ್ಯೆಯಿಂದ ಗ್ರಾಹಕರು ಅನೇಕ ಕಡೆ ಎಟಿಎಂಗಳಲ್ಲಿ ಹಣ ಪಡೆದುಕೊಳ್ಳಲಾಗದೇ ತೊಂದರೆ ಅನುಭವಿಸಿದರು. ಫೋನ್‌ಪೇ, ಗೂಗಲ್‌ ಪೇ ಮೂಲಕವು ವ್ಯವಹಾರ ಸಾಧ್ಯವಾಗಲಿಲ್ಲ. ಇಂಟರ್‌ನೆಟ್‌ ಸಮಸ್ಯೆ ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT