ಗುರುವಾರ , ಸೆಪ್ಟೆಂಬರ್ 16, 2021
29 °C

ಬೀದರ್‌ ನಗರಸಭೆ ಉಪ ಚುನಾವಣೆ: ಕಾಂಗ್ರೆಸ್‌, ಜೆಡಿಎಸ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ಇಲ್ಲಿಯ ನಗರಸಭೆಗೆ ನಡೆದ ಉಪ ಚುನಾವಣೆಯಲ್ಲಿ 26ನೇ ವಾರ್ಡ್‌ನಿಂದ ಕಾಂಗ್ರೆಸ್‌ನ ನಸ್ರೀನ್‌ಬೇಗಂ ಮಹಮ್ಮದ್‌ ಶೌಕತ್‌ ಹಾಗೂ 32ನೇ ವಾರ್ಡ್‌ನಿಂದ ರೋಹಿನಾಯಾಸ್ಮಿನ್‌ ಮೊಹ್ಮದ್ ನವಾಜ್ ಖಾನ್ ಗೆಲುವು ಸಾಧಿಸಿದ್ದಾರೆ.

ನಸ್ರೀನ್‌ಬೇಗಂ ಅವರು ತಮ್ಮ ಸಮೀಪ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಜುಬೇದಾಬಿ ವಾಹೇದ್ ಅವರನ್ನು 98 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ಕಾಂಗ್ರೆಸ್‌ನ ನಸ್ರೀನ್‌ಬೇಗಂ ಮಹಮ್ಮದ್‌ ಶೌಕತ್‌ 1,590, ಪಕ್ಷೇತರ ಅಭ್ಯರ್ಥಿ ಜುಬೇಬಾಬಿ ವಾಹೇದ್ 1,492, ಬಿಜೆಪಿಯ ಸಂತೋಷಿ ಲಕ್ಷ್ಮಣ 515, ಜೆಡಿಎಸ್‌ನ ಲಕ್ಷ್ಮೀ ರಾಜಕುಮಾರ 85, ಪಕ್ಷೇತರ ಅಭ್ಯರ್ಥಿಗಳಾದ ಸಹೀದಾ ಮೋಸಿನಾ 139, ಶಹಜಹಾನ್‌ ಬೇಗಂ ಮಹಮ್ಮದ್ ಸಲೀಂ 43 ಹಾಗೂ ಉಮಾವತಿ ಅರುಣಕುಮಾರ 18  ಮತಗಳನ್ನು ಪಡೆದಿದ್ದಾರೆ. 27 ಮತದಾರರು ನೋಟಾ ಚಲಾಯಿಸಿದ್ದಾರೆ.

32ನೇ ವಾರ್ಡ್‌ನಲ್ಲಿ ಜೆಡಿಎಸ್‌ನ ರೋಹಿನಾಯಾಸ್ಮಿನ್‌ ಮೊಹ್ಮದ್ ನವಾಜ್ ಖಾನ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಜ್ಯೋತಿ ಶಿವರಾಜ್ ಅವರನ್ನು 170 ಮತಗಳ ಅಂತರದಿಂದ ಸೋಲಿಸಿದ್ದಾರೆ.

ರೋಹಿನಾಯಾಸ್ಮಿನ್‌ ಮೊಹ್ಮದ್ ನವಾಜ್ ಖಾನ್ 1345, ಜ್ಯೋತಿ ಶಿವರಾಜ್ 1175, ಬಿಎಸ್‌ಪಿಯ ಸುಮಿತ್ರಾ ದುಂಡಪ್ಪ 363, ಸಂಗೀತಾ ಭೆಂಡೆಕರಿಕರ್ 25 ಹಾಗೂ ಜಯ್ ಅಲ್ಬರ್ಟ್ 52 ಮತಗಳನ್ನು ಪಡೆದಿದ್ದಾರೆ.  12 ಮತದಾರರು ನೋಟಾ ಚಲಾಯಿಸಿದ್ದಾರೆ ಎಂದು ತಹಶೀಲ್ದಾರ್‌ ಮಹಮ್ಮದ್‌ ಶಕೀಲ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು