ಬಸವಕಲ್ಯಾಣ: ಸರ್ದಾರ ಪಟೇಲ್ ಚೌಕ್ ಗಣೇಶ ಮಂಡಳ 75 ವರ್ಷ ಪೊರೈಸಿದಕ್ಕಾಗಿ ಆಕರ್ಷಕ ಮಹಾದ್ವಾರ ಮತ್ತು ಅರಮನೆ ಸಿದ್ಧಪಡಿಸಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಹೀಗಾಗಿ ಅಪಾರ ಭಕ್ತರನ್ನು ಇದು ಆಕರ್ಷಿಸುತ್ತಿದೆ.

ನಗರದಲ್ಲಿ ಕೆಲ ಸ್ಥಳಗಳಲ್ಲಿ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ದೊರೆತ ತಕ್ಷಣದಿಂದ ಗಣೇಶನ ಪ್ರತಿಷ್ಠಾಪನೆ ಆಗುತ್ತಿದೆ. ಅವುಗಳಲ್ಲಿ ಸರ್ದಾರ್ ಪಟೇಲ್ ಚೌಕ್‌ನ ಗಣಪತಿ ಪ್ರಮುಖವಾದದ್ದು.

ಈ ಭಾಗವನ್ನು ಹೈದರಾಬಾದ್ ನಿಜಾಮ್ ಆಡಳಿತದಿಂದ ಮುಕ್ತಗೊಳಿಸುವುದಕ್ಕಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸೇನಾ ಕಾರ್ಯಾಚರಣೆ ನಡೆಸಿದ್ದರು. ಅವರ ಮೇಲಿನ ಅಭಿಮಾನದಿಂದ ವೃತ್ತಕ್ಕೆ ಅವರ ಹೆಸರಿಟ್ಟು ಅಂದಿನಿಂದೂ ಗಣೇಶ ಹಬ್ಬ ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಈ ಸಲ ಪ್ರತಿಷ್ಠಾಪನೆಯ ಅಮೃತ ಮಹೋತ್ಸವವಿದೆ. ಆದ್ದರಿಂದ ಪ್ರತಿಷ್ಠಾಪನೆಯ ದಿನದಂದು ವಾದ್ಯ ಮೇಳಗಳೊಂದಿಗೆ 2 ಕಿ.ಮೀ ಮೆರವಣಿಗೆ ನಡೆಸಲಾಗಿತ್ತು. ಶಾಸಕ ಶರಣು ಸಲಗರ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹಾಗೂ ಇತರೆ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಭವಾನಿ ಮಂದಿರದ ಶಿಖರ ಹಿನ್ನೆಲೆಯಲ್ಲಿ ಎದ್ದು ಕಾಣುವಂತೆ ಆಕರ್ಷಕ ಮಹಾದ್ವಾರ ನಿರ್ಮಿಸಲಾಗಿದೆ. ಅದರೊಳಗೆ ಪ್ರವೇಶಿಸಿ ಮಂದಿರದ ಬಲಕ್ಕೆ ಹೋದರೆ ಅಲ್ಲಿನ ವಿಶಾಲವಾದ ಕೊಠಡಿಯಲ್ಲಿ ಥರ್ಮಾಕೋಲ್ ಹಾಗೂ ಇತರೆ ಸಾಮಗ್ರಿ ಬಳಸಿ ಅರಮನೆಯ ಮಾದರಿಯಲ್ಲಿ ಮಂಟಪ ಸಿದ್ಧಪಡಿಸಲಾಗಿದೆ. ಅದರಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿ ಎತ್ತರದ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.

‘ಗಣೇಶ ಹಬ್ಬಕ್ಕೆ ಮೊದಲಿನಿಂದಲೂ ಪ್ರತಿವರ್ಷವೂ ಇಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವ ಕಾರಣ ಹೆಚ್ಚಿನ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ' ಎಂದು ಹಿರಿಯರಾದ ಸುಧಾಕರ ಗುರ್ಜರ್ ತಿಳಿಸಿದ್ದಾರೆ.

ಗಣೇಶನಿಗೆ ಸೋಮವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಹ ಜರುಗಿದವು. ಮಂಡಳದ ಪ್ರಮುಖರಾದ ಅನೂಪ ಗುರ್ಜರ್, ಉದಯ ಗರ್ಜೆ, ಅಕ್ಷಯ ಗರ್ಜೆ, ಕಿರಣ ಆರ್ಯ, ವಿಜೇಷ ಗುರ್ಜರ್, ಅಶ್ವಿನ ರಂಗದಾಳ, ಯಶ್ ರಂಗದಾಳ, ರೋಹಿತ ಕಠಾರೆ, ಅಕ್ಷಯ ಗುರ್ಜರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.