ಬೀದರ್: 2025ನೇ ಸಾಲು ಬೀದರ್ ಜಿಲ್ಲೆಯ ಪಾಲಿಗೆ ಮಳೆಯ ವರ್ಷ ಎಂದೇ ಹೇಳಬಹುದು.

ವರ್ಷದ ಹೆಚ್ಚಿನ ದಿನಗಳು ಜಿಲ್ಲೆಯ ಬಹುತೇಕ ಭಾಗಗಳು ಮಳೆಗೆ ಸಾಕ್ಷಿಯಾದವು.

ಈ ವರ್ಷ ಏಪ್ರಿಲ್ನಲ್ಲಿ ಶುರುವಾದ ಮಳೆ ಅಕ್ಟೋಬರ್ವರೆಗೆ ಸುರಿಯಿತು. ಏಪ್ರಿಲ್, ಮೇ ತಿಂಗಳಲ್ಲೂ ಉತ್ತಮ ಮಳೆಯಾದ ಕಾರಣ ಜನರಿಗೆ ಬೇಸಿಗೆ ಕಾಲದ ಬಿಸಿಲಿನ ಅನುಭವ ಹೆಚ್ಚೇನೂ ಆಗಲಿಲ್ಲ.

ಆದರೆ, ಜೂನ್ನಲ್ಲಿ ಜಿಲ್ಲೆಗೆ ಆಗಮಿಸಿದ ವರುಣ ಅಕ್ಟೋಬರ್ ವರೆಗೆ ತಳವೂರಿದ. ನಿರಂತರವಾಗಿ ಸುರಿದ ಭಾರಿ ಮಳೆ ಹಾಗೂ ನೆರೆಯ ಮಹಾರಾಷ್ಟ್ರದ ಧನೆಗಾಂವ್ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಿದ ಪರಿಣಾಮ ಮಾಂಜ್ರಾ, ಕಾರಂಜಾ ನದಿಗಳು ತನ್ನ ವ್ಯಾಪ್ತಿ ಮೀರಿ ಹರಿದವು. ಜಿಲ್ಲೆಯ ಭಾಲ್ಕಿ ಹಾಗೂ ಹುಲಸೂರ ತಾಲ್ಲೂಕಿನ ಅನೇಕ ಗ್ರಾಮಗಳು ಕೆಲವು ದಿನಗಳವರೆಗೆ ದ್ವೀಪಗಳಾಗಿ ಮಾರ್ಪಟ್ಟಿದ್ದವು. ಹಲವು ದಿನಗಳವರೆಗೆ ಸಂಪರ್ಕ ಕಡಿತಗೊಂಡಿತ್ತು. ಔರಾದ್, ಕಮಲನಗರ ಹಾಗೂ ಬೀದರ್ ತಾಲ್ಲೂಕಿನ ಹಲವು ಗ್ರಾಮಗಳಿಗೆ ಇದರ ಬಿಸಿ ತಟ್ಟಿತು.

ಜನವರಿಯಿಂದ ಡಿಸೆಂಬರ್ವರೆಗೆ ಜಿಲ್ಲೆಯಲ್ಲಿ ಸರಾಸರಿಗಿಂತ ಅಧಿಕ ಮಳೆಯಾಯಿತು. ಬೆವರು ಸುರಿಸಿ ಬೆಳೆದ ಬೆಳೆ ರೈತರ ಕಣ್ಣುದುರಲ್ಲೇ ಮಣ್ಣು ಪಾಲಾಯಿತು. ಅವರ ಬೆಳೆಯೊಂದಿಗೆ ಜಮೀನಿನ ಫಲವತ್ತಾದ ಮಣ್ಣು ಕೂಡ ಕೊಚ್ಚಿ ಹೋಯಿತು. ಸೇತುವೆಗಳು, ವಿದ್ಯುತ್ ಕಂಬಗಳು, ರಸ್ತೆಗಳು, ಕೆರೆ ಕಟ್ಟೆಗಳು ಒಡೆದ ಪರಿಣಾಮ ಜಿಲ್ಲೆಯ ಮೂಲಸೌಕರ್ಯಕ್ಕೆ ದೊಡ್ಡ ಪೆಟ್ಟು ಬಿದ್ದಿತು. ಜಾನುವಾರುಗಳು ಕೊಚ್ಚಿ ಹೋದವು. ಹಿರಿಯ ರೈತರ ಪ್ರಕಾರ, ಮೂರು ದಶಕಗಳ ನಂತರ ಇಷ್ಟೊಂದು ಭಾರಿ ಮಳೆಯಾಗಿದೆ. ಇದರ ಪರಿಣಾಮ ಒಂದು ಅಂದಾಜಿನ ಪ್ರಕಾರ, ₹ 500 ಕೋಟಿಗೂ ಹೆಚ್ಚು ಹಾನಿ ಸಂಭವಿಸಿತು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾದ 1,86,426 ರೈತರ ಖಾತೆಗಳಿಗೆ 17 ಹಂತಗಳಲ್ಲಿ ಒಟ್ಟು ₹ 261.43 ಕೋಟಿ ಪರಿಹಾರ ರಾಜ್ಯ ಸರ್ಕಾರ ವಿತರಿಸಿ, ಸಂಕಷ್ಟಕ್ಕೀಡಾದ ರೈತರಿಗೆ ಸ್ಪಂದಿಸುವ ಕೆಲಸ ಮಾಡಿತು. ಆದರೆ, ಅತಿವೃಷ್ಟಿ ರೈತರಿಗೆ ಎಳೆದ ಬರೆ ದೀರ್ಘಕಾಲ ಉಳಿಯುವಂತೆ ಮಾಡಿತು.

ಎಲ್ಲದಕ್ಕೂ ರೈತರ ಹೋರಾಟ:

ಅತಿವೃಷ್ಟಿಯ ಪರಿಹಾರಕ್ಕೆ ಸತತ ಆಗ್ರಹ, ಹೋರಾಟ ನಡೆಸಿದ ರೈತರು ಕಬ್ಬಿನ ಬೆಂಬಲ ಬೆಲೆಗಾಗಿ ಪಟ್ಟು ಹಿಡಿದು ಹೋರಾಡಿದರು. ಇತರೆ ಜಿಲ್ಲೆಗಳಂತೆ ಕಬ್ಬಿಗೆ ಬೆಲೆ ಸಿಗಲಿಲ್ಲ. ಆದರೆ, ಅವರ ಹೋರಾಟದಿಂದ ಸಕ್ಕರೆ ಕಾರ್ಖಾನೆಗಳು ಅಂತಿಮವಾಗಿ ಪ್ರತಿ ಟನ್ ಕಬ್ಬಿಗೆ ₹ 2,950 ಕೊಡಲು ಒಪ್ಪಿದವು. ಇದು ರೈತರ ಹೋರಾಟಕ್ಕೆ ಸಿಕ್ಕ ದೊಡ್ಡ ಜಯ.

ಈ ವಿಷಯದಲ್ಲಿ ವಿರೋಧ ಪಕ್ಷಗಳು ರೈತರ ಬೆನ್ನಿಗೆ ನಿಂತವು. ಆದರೆ, ರೈತರು ರಾಜಕಾರಣದಿಂದ ದೂರವೇ ಉಳಿದು ಅವರ ಹಕ್ಕಿಗಾಗಿ ಹೋರಾಟ ನಡೆಸಿದರು. ಆಯಾ ಸಂದರ್ಭಗಳಿಗಷ್ಟೇ ರೈತರಲ್ಲಿ ಕ್ಷಣಿಕ ಒಗ್ಗಟ್ಟು ಕಂಡು ಬಂತು. ಆದರೆ, ಸಂಘಟಿತ ಹೋರಾಟದ ಕೊರತೆ ಎದ್ದು ಕಂಡಿತು.

ಬೆಚ್ಚಿಬೀಳಿಸಿದ ಎಟಿಎಂ ದರೋಡೆ ಘಟನೆ

ಬೀದರ್ನ ಜಿಲ್ಲಾ ನ್ಯಾಯಾಲಯ ಸಮೀಪದ ಎಸ್ಬಿಐ ಬ್ಯಾಂಕಿನ ಎದುರು ಜನವರಿ 16ರಂದು ನಡೆದ ದರೋಡೆ ಪ್ರಕರಣವು ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿತ್ತು. ಇಬ್ಬರು ದರೋಡೆಕೋರರು ಸಿನಿಮೀಯ ಶೈಲಿಯಲ್ಲಿ ಗುಂಡಿನ ದಾಳಿ ನಡೆಸಿ ಕೊಲೆಗೈದು ಹಣ ದರೋಡೆ ಮಾಡಿದ್ದರು. ಬೆಳಿಗ್ಗೆ 10.30ರ ಸುಮಾರಿಗೆ ಈ ಘಟನೆ ನಡೆದಿತ್ತು. ಸಿಎಂಎಸ್ ಕಂಪನಿಯ ‘ಕ್ಯಾಶ್ ಕಸ್ಟೋಡಿಯನ್’ಗಳಾಗಿದ್ದ ಚಿದ್ರಿ ನಿವಾಸಿ ಗಿರಿ ವೆಂಕಟೇಶ ಸ್ಥಳದಲ್ಲೇ ಗುಂಡೇಟಿಗೆ ಮೃತಪಟ್ಟಿದ್ದರು. ಲಾಡಗೇರಿಯ ನಿವಾಸಿ ಶಿವಕುಮಾರ ಅವರು ಗಾಯಗೊಂಡಿದ್ದರು. ಎಟಿಎಂಗಳಿಗೆ ಹಣ ಜಮೆ ಮಾಡಲು ಎಸ್ಬಿಐ ಬ್ಯಾಂಕಿನಿಂದ ಟ್ರಂಕ್ ತೆಗೆದುಕೊಂಡು ಜೀಪಿನೊಳಗೆ ಇರಿಸುತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತರು ಅವರ ಮೇಲೆ ಎರಗಿ ಕಣ್ಣಿಗೆ ಖಾರದ ಪುಡಿ ಎರಚಿ ಗುಂಡಿನ ದಾಳಿ ನಡೆಸಿದ್ದರು. ಬಳಿ ಟ್ರಂಕ್ ಸಮೇತ ಬೈಕ್ ಮೇಲೆ ಕುಳಿತು ಗಾಳಿಯಲ್ಲಿ ಗುಂಡು ಹಾರಿಸಿ ಸ್ಥಳದಿಂದ ನಿರ್ಗಮಿಸಿದ್ದರು. ದರೋಡೆಕೋರರ ಬಂಧನಕ್ಕೆ ಜಿಲ್ಲಾ ಪೊಲೀಸರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ ಇದುವರೆಗೆ ಯಶ ಸಿಕ್ಕಿಲ್ಲ.

ಖಂಡ್ರೆ–ಖೂಬಾ ಕೆಸರೆರೆಚಾಟ

ಬೀದರ್ ಜಿಲ್ಲೆಯಲ್ಲಿ ಬದ್ಧ ರಾಜಕೀಯ ವೈರಿಗಳೆಂದೇ ಗುರುತಿಸಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಕೇಂದ್ರದ ಮಾಜಿ ಸಚಿವ ಬಿಜೆಪಿ ಮುಖಂಡ ಭಗವಂತ ಖೂಬಾ ನಡುವಿನ ಕೆಸರೆರೆಚಾಟ 2025ನೇ ಸಾಲಿನುದ್ದಕ್ಕೂ ನಡೆಯಿತು. ಬೆಳೆ ವಿಮೆ ಅಭಿವೃದ್ಧಿ ರೈತರಿಗೆ ಪರಿಹಾರ ಕೊಡಿಸುವುದು ಸೇರಿದಂತೆ ಹಲವು ವಿಷಯಗಳಲ್ಲಿ ಇಬ್ಬರು ಪರಸ್ಪರ ಟೀಕೆ ಟಿಪ್ಪಣಿ ಮಾಡುತ್ತ ಚರ್ಚೆಯ ಕೇಂದ್ರವಾದರು. 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಭಗವಂತ ಖೂಬಾ ಅವರು ಈಶ್ವರ ಬಿ. ಖಂಡ್ರೆ ಅವರನ್ನು ಸೋಲಿಸಿದ್ದರು. 2024ರಲ್ಲಿ ನಡೆದ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಅವರು ತಮ್ಮ ಮಗ ಸಾಗರ್ ಖಂಡ್ರೆ ಅವರನ್ನು ಚುನಾವಣೆಗೆ ನಿಲ್ಲಿಸಿ ಭಗವಂತ ಖೂಬಾ ಅವರನ್ನು ಸೋಲಿಸಿ ಮುಯ್ಯಿ ತೀರಿಸಿಕೊಂಡರು.

- ಬಿಜೆಪಿ ಸಕ್ರಿಯ ಕಾಂಗ್ರೆಸ್–ಜೆಡಿಎಸ್ ನಿಷ್ಕ್ರಿಯ

2025ನೇ ಸಾಲಿನಲ್ಲಿ ರಾಜಕೀಯ ಪಕ್ಷಗಳಲ್ಲಿ ಬಿಜೆಪಿ ಹೆಚ್ಚು ಸಕ್ರಿಯವಾಗಿ ಕಾಣಿಸಿಕೊಂಡಿತು. ರಾಜ್ಯ ಸರ್ಕಾರದ ವೈಫಲ್ಯ ಜಿಲ್ಲಾ ಆಡಳಿತದ ವೈಫಲ್ಯ ಜಿಲ್ಲೆಯ ಇಬ್ಬರು ಸಚಿವರ ವಿರುದ್ಧ ಅನೇಕ ಹೋರಾಟಗಳನ್ನು ಸಂಘಟಿಸಿ ಬೀದಿಗಿಳಿಯಿತು. ಜಿಲ್ಲೆಯಲ್ಲಿ ನಡೆದ ಬಹುತೇಕ ವಿಷಯಗಳಿಗೆ ಬಿಜೆಪಿ ತನ್ನ ಹೋರಾಟದ ಅಸ್ತ್ರವಾಗಿ ಮಾಡಿಕೊಂಡಿತು. ಅತಿ ಹೆಚ್ಚು ಹೋರಾಟ ಪ್ರತಿಭಟನೆ ಪತ್ರಿಕಾಗೋಷ್ಠಿಗಳನ್ನು ನಡೆಸಿ ಬಿಜೆಪಿ ಇತರೆ ರಾಜಕೀಯ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದೆ ಇತ್ತು. ಆದರೆ ಈ ಚುರುಕುತನ ಕಾಂಗ್ರೆಸ್ ಜೆಡಿಎಸ್ ಹಾಗೂ ಇತರೆ ಪಕ್ಷಗಳಲ್ಲಿ ಕಾಣಿಸಲಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಹಾಗೂ ಇತರೆ ಜಿಲ್ಲೆಗಳಲ್ಲಿ ನಡೆದ ಹೋರಾಟಗಳನ್ನು ಗಮನಿಸಿದರೆ ಜಿಲ್ಲಾ ಕಾಂಗ್ರೆಸ್ ಬಹಳ ಹಿಂದೆ ಇದ್ದದ್ದು ಕಂಡು ಬಂತು. ಜೆಡಿಎಸ್ ಪಕ್ಷವಂತೂ ಅದರ ಮುಖಂಡರು ಜಿಲ್ಲೆಗೆ ಬಂದಾಗಲಷ್ಟೇ ಅದರ ಚಟುವಟಿಕೆಗಳು ನಡೆದವು.

ವರ್ಷದಲ್ಲಿ ಒಂದು ಬಂದ್

ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅಪಮಾನಿಸಿದ್ದಾರೆ ಎಂದು ಆರೋಪಿಸಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿ 2025ರ ಜನವರಿ 9ರಂದು ಸ್ವಾಭಿಮಾನಿ ಡಾ. ಬಿ.ಆರ್. ಅಂಬೇಡ್ಕರ್ವಾದಿಗಳ ಹೋರಾಟ ಸಮಿತಿ ಬೀದರ್ ಬಂದ್ಗೆ ಕರೆ ಕೊಟ್ಟಿತು. ವರ್ಷದಲ್ಲಿ ಬಂದ್ ಆಗಿದ್ದು ಇದೊಂದೇ ದಿನ. ಜಿಲ್ಲಾಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ಆ ದಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿತು. ಇನ್ನುಳಿದಂತೆ ಕಾರಂಜಾ ಸಂತ್ರಸ್ತರು ತಮ್ಮ ಹಕ್ಕಿಗಾಗಿ ಸುದೀರ್ಘ ಹೋರಾಟ ನಡೆಸಿ ಸರ್ಕಾರದ ಆಶ್ವಾಸನೆ ಬಳಿಕ ವರ್ಷಕ್ಕೂ ಹೆಚ್ಚು ದಿನ ನಡೆಸಿದ ಧರಣಿಯನ್ನು ಕೈಬಿಟ್ಟರು. ರೈತರು ಸಾಲ ಮನ್ನಾ ಕಬ್ಬಿಗೆ ಸೂಕ್ತ ಬೆಂಬಲ ಬೆಲೆಗೆ ಆಗ್ರಹಿಸಿ ಹೋರಾಟ ನಡೆಸಿದರು.

ಒಬ್ಬ ಸಚಿವರು ಚುರುಕು ಇನ್ನೊಬ್ಬರು ನಿಧಾನ

ರಾಜ್ಯದಲ್ಲಿ 2023ನೇ ಸಾಲಿನಲ್ಲಿ ಕಾಂಗ್ರೆಸ್ ನೇತೃತ್ವದ ಪಕ್ಷ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಿಂದ ಈಶ್ವರ ಬಿ. ಖಂಡ್ರೆ ಹಾಗೂ ರಹೀಂ ಖಾನ್ ಅವರು ಸಂಪುಟ ದರ್ಜೆ ಸಚಿವರಾದರು. ಅಂದಿನಿಂದ ಇಂದಿನವರೆಗೆ ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತ ಖಂಡ್ರೆ ಅವರು ಒಂದು ದಿನವೂ ವಿಶ್ರಮಿಸದೇ ರಾಜ್ಯದಾದ್ಯಂತ ಓಡಾಡಿ ಅರಣ್ಯ ಆಸ್ತಿ ಸಂರಕ್ಷಣೆ ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಂಡರು. ಜಿಲ್ಲೆಯಲ್ಲೂ ಅದೇ ಚುರುಕುತನ ಕಂಡು ಬಂತು. ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದಾಗಲೂ ಎಲ್ಲೆಡೆ ಓಡಾಡಿ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿಸಿದರು. ಪಕ್ಷ ಹಾಗೂ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಟೀಕಿಸಿದಾಗ ಇವರೊಬ್ಬರೇ ಅದಕ್ಕೆ ಕಾಲಕಾಲಕ್ಕೆ ಉತ್ತರ ಕೊಡುತ್ತ ಬಂದರು. ಮೇಲಿಂದ ಮೇಲೆ ಸಭೆಗಳು ಗಂಟೆಗಟ್ಟಲೇ ಸಭೆ ನಡೆಸಿ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿದರು. ಭಾಲ್ಕಿಗಂತೂ ಹಲವು ಯೋಜನೆಗಳನ್ನು ಮಂಜೂರು ಮಾಡಿಸಿ ತನ್ನ ಕ್ಷೇತ್ರಕ್ಕೆ ಅನುದಾನದ ಹೊಳೆ ಹರಿಸಿದರು. ಆದರೆ ಇದೇ ಚುರುಕುತನ ಸಚಿವ ರಹೀಂ ಖಾನ್ ಅವರಲ್ಲಿ ಕಂಡು ಬರಲಿಲ್ಲ. ಪೌರಾಡಳಿತ ಸಚಿವರಾದರೂ ಬೀದರ್ ಉತ್ತರ (ನಗರ ಪ್ರದೇಶ ಹೆಚ್ಚಿನ ವ್ಯಾಪ್ತಿ) ಕ್ಷೇತ್ರದಲ್ಲಿ ಹೆಚ್ಚಿನ ಕೆಲಸಗಳಾಗಲಿಲ್ಲ. ಹೆಚ್ಚಿನ ವಾರ್ಡ್ಗಳತ್ತ ಅವರು ತಿರುಗಿ ನೋಡಲಿಲ್ಲ. ಅಧಿಕಾರಿಗಳ ಸಭೆ ನಡೆಸಿದ್ದು ತೀರ ವಿರಳ. ಅಭಿವೃದ್ಧಿಯೇ ಇಚ್ಛಾಶಕ್ತಿಯೇ ಅವರಲ್ಲಿಲ್ಲ ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.