ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಟಗುಪ್ಪ | ಮಂಗ ಕಚ್ಚಿ ಐವರಿಗೆ ಗಾಯ

Published 7 ಜುಲೈ 2024, 14:32 IST
Last Updated 7 ಜುಲೈ 2024, 14:32 IST
ಅಕ್ಷರ ಗಾತ್ರ

ಚಿಟಗುಪ್ಪ: ಪಟ್ಟಣದ ನಾಲ್ಕು ಹಾಗೂ ತಾಲ್ಲೂಕಿನ ಇಟಗಾ ಗ್ರಾಮದ ಒಬ್ಬ ವ್ಯಕ್ತಿ ಸೇರಿದಂತೆ ಐವರ ಮೇಲೆ ಮಂಗ ದಾಳಿ ಮಾಡಿದೆ. ಮೂವರು ಹಿರಿಯರು, ಇಬ್ಬರು ಮಕ್ಕಳನ್ನು ಕಚ್ಚಿ ಮಂಗ‌ ಗಾಯಗೊಳಿಸಿದೆ.

ಮಂಗ ಎಲ್ಲೆಂದರಲ್ಲಿ ಜಿಗಿಯುತ್ತ ಜನರಿಗೆ ಕಚ್ಚಿ ಗಾಯಗೊಳಿಸುತ್ತಿದೆ. ಗಾಯಾಳುಗಳಾದ ಪುನೀತ (38), ರುಕ್ಮಿಣಿ (60), ಪ್ರೇರಣಾ (22), ರೋಹಿತ್‌ (11) ಹಾಗೂ ಜೇಸಿಕಾ ( 7) ಪಟ್ಟಣ ಸಮುದಾಯ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಗಾಯಗೊಂಡವರು ಒಂದೆರಡು ದಿನಗಳಲ್ಲಿ ‌ಗುಣವಾಗುತ್ತಾರೆ ಎಂದು ವೈದ್ಯಾಧಿಕಾರಿ ಡಾ.ವಿಜಯಕುಮಾರ ಹಿರಾಸ್ಕರ ತಿಳಿಸಿದ್ದಾರೆ.

ಶನಿವಾರ ಮಧ್ಯಾಹ್ನ ಮೂವರಿಗೆ, ಭಾನುವಾರ ಇಬ್ಬರಿಗೆ ಮಂಗ ಕಚ್ಚಿದೆ. ‘ಅರಣ್ಯ ಇಲಾಖೆ ಸಿಬ್ಬಂದಿ ಮಂಗ‌ವನ್ನು ಹಿಡಿದು ಆಸ್ಪತ್ರೆಗೆ ತರುವವರಿದ್ದಾರೆ. ಆಗ ಪರೀಕ್ಷೆ ನಡೆಸಿ‌ ಮಂಗ ಕಚ್ಚುತ್ತಿರುವುದರ ಬಗ್ಗೆ ನಿಖರ ಕಾರಣ ತಿಳಿದುಕೊಳ್ಳಬಹುದು’ ಎಂದು ಪಟ್ಟಣದ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಎಸ್.ಬಿ.ಗೋಪಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT