ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ತಹಶೀಲ್ದಾರ್‌ ಕಚೇರಿಯಲ್ಲಿ ಶಿರಸ್ತೆದಾರಗೆ ಚಾಕು ಇರಿತ: ಇಬ್ಬರ ಬಂಧನ

Published 11 ಜುಲೈ 2024, 15:07 IST
Last Updated 11 ಜುಲೈ 2024, 15:07 IST
ಅಕ್ಷರ ಗಾತ್ರ

ಬೀದರ್‌: ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ಆಹಾರ ಶಿರಸ್ತೆದಾರಗೆ ಚಾಕು ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಇಬ್ಬರು ಸಹೋದರರನ್ನು ಘಟನೆ ನಡೆದ ನಾಲ್ಕು ಗಂಟೆಗಳಲ್ಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ನಗರದ ಎಮ್‌.ಡಿ. ಅಮನ್‌, ಮೊಹಮ್ಮದ್‌ ಜಿಶಾನ್‌ ಬಂಧಿತರು. ಇರಿತಕ್ಕೊಳಗಾದ ಶಿರಸ್ತೆದಾರ ಅನಿಲ್‌ ಕುಮಾರ್‌ ಅರ್ಜುನ್‌ ಕಾಂಬಳೆ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದ್ದು, ಪ್ರಾಣಾಪಾಯದಿಂದ ಹೊರಬಂದಿದ್ದಾರೆ.

‘ತಹಶೀಲ್ದಾರ್ ಕಚೇರಿಯ ಆಹಾರ ವಿಭಾಗದಲ್ಲಿ ಅನಿಲ್‌ಕುಮಾರ್‌ ಅರ್ಜುನ್‌ ಕಾಂಬಳೆ ಅವರೊಂದಿಗೆ ಬಂಧಿತ ಎಮ್‌.ಡಿ. ಅಮನ್‌ ಅವರ ಪತ್ನಿ ಕೆಲಸ ನಿರ್ವಹಿಸುತ್ತಾರೆ. ಪತ್ನಿಯೊಂದಿಗೆ ಅನಿಲ್‌ ಕುಮಾರ್‌ ಆತ್ಮೀಯರಾಗಿದ್ದಾರೆ ಎಂಬ ಅನುಮಾನದ ಮೇರೆಗೆ ಗುರುವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಅಮನ್‌ ಹಾಗೂ ಆತನ ಸಹೋದರ ಮೊಹಮ್ಮದ್‌ ಜಿಶಾನ್‌ ಕಚೇರಿಯೊಳಗೆ ಹೋಗಿ, ಅನಿಲ್‌ಕುಮಾರ್ ಅವರ ಕೆಲಸಕ್ಕೆ ಅಡ್ಡಿಪಡಿಸಿ, ಜಾತಿ ನಿಂದನೆ ಮಾಡಿ, ಚಾಕುವಿನಿಂದ ಎಡಗೈ ರಟ್ಟೆಗೆ ಇರಿದು ಪರಾರಿಯಾಗಿದ್ದಾರೆ. ಇಬ್ಬರನ್ನು ಘಟನೆ ನಡೆದ ನಾಲ್ಕು ಗಂಟೆಗಳ ಒಳಗೆ ಜಿಲ್ಲೆಯಲ್ಲಿಯೇ ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ತಿಳಿಸಿದ್ದಾರೆ. ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT