ಬೀದರ್: ಕೇಂದ್ರಿಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸಂಸ್ಥೆ (ಸಿಪೆಟ್), ಬೀದರ್ ವಿಶ್ವವಿದ್ಯಾಲಯದಲ್ಲಿ ವೃತ್ತಿಪರ ಕೌಶಲ ತರಬೇತಿ ಕೇಂದ್ರ ಸ್ಥಾಪಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬೀದರ್ ವಿ.ವಿ. ಕುಲಪತಿ ಪ್ರೊ.ಬಿ.ಎಸ್.ಬಿರಾದರ್ ತಿಳಿಸಿದ್ದಾರೆ.
ಬೀದರ್ ವಿಶ್ವವಿದ್ಯಾಲಯದಲ್ಲಿ ಸಿಪೆಟ್ ನಿಂದ ಹಮ್ಮಿಕೊಳ್ಳುವ ತರಬೇತಿ ಕಾರ್ಯಕ್ರಮದಿಂದ ಈ ಭಾಗದ ಯುವಕ/ಯುವತಿಯರು, ನಿರುದ್ಯೋಗಿಗಳು ಸ್ವಾವಲಂಬಿಯಾಗಲು ಸಹಾಯವಾಗಲಿದೆ. ಈ ಸಂಸ್ಥೆಯಿಂದ ಪ್ಲಾಸ್ಟಿಕ್ ಪ್ರೊಸೆಸಿಂಗ್, ಇಂಜೆಕ್ಸನ್ ಮೌಲ್ಡಿಂಗ್, ಪ್ರೋಗ್ರಾಮ ಮೌಲ್ಡ್ ಡಿಸೈನ್ ಸೇರಿದಂತೆ ಇತರೆ ಉಪಯುಕ್ತ ತರಬೇತಿಗಳು ನಡೆಯುತ್ತವೆ. ಉಚಿತ ತರಬೇತಿ, ಊಟ, ವಸತಿ ಹಾಗೂ ಉದ್ಯೋಗಾವಕಾಶಕ್ಕೆ ನೆರವು ಸಿಗಲಿದೆ ಎಂದರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಪರಮೇಶ್ವರ ನಾಯಕ, ರವೀಂದ್ರನಾಥ್ ವಿ. ಗಬಾಡಿ, ಕೆ.ಮುನಿಬಾಬು, ಆರ್. ಮಣಿಕಂದ, ಸದಾಶಿವಪ್ಪ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.