ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ ವಿಶ್ವವಿದ್ಯಾಲಯ; ಸ್ನಾತಕ ಪದವಿ ಫಲಿತಾಂಶ ಘೋಷಣೆ

Published 12 ಜೂನ್ 2024, 16:18 IST
Last Updated 12 ಜೂನ್ 2024, 16:18 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ವಿಶ್ವವಿದ್ಯಾಲಯವು ಮಾರ್ಚ್‌–ಏಪ್ರಿಲ್‌ನಲ್ಲಿ ನಡೆಸಿದ ಸ್ನಾತಕ ಪದವಿಯ ಮೊದಲ ಸೆಮಿಸ್ಟರ್‌ನ ಫಲಿತಾಂಶವನ್ನು ಬುಧವಾರ ಘೋಷಿಸಿದೆ.

ಕುಲಪತಿ ಪ್ರೊ.ಬಿ.ಎಸ್‌. ಬಿರಾದಾರ, ಕುಲಸಚಿವ (ಮೌಲ್ಯಮಾಪನ) ಪರಮೇಶ್ವರ ನಾಯಕ ಟಿ. ಅವರು ಫಲಿತಾಂಶ ಘೋಷಿಸಿದರು.

‘ಮಾರ್ಚ್‌–ಏಪ್ರಿಲ್‌ನಲ್ಲಿ ಸ್ನಾತಕ ಪದವಿಗಳಾದ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ ಮೊದಲ ಸೆಮಿಸ್ಟರ್‌ ಪರೀಕ್ಷೆ ನಡೆಸಲಾಗಿತ್ತು. ಒಟ್ಟು 11 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಸಿಬ್ಬಂದಿ ಕೊರತೆ, ಸಂಪನ್ಮೂಲದ ಕೊರತೆ ನಡುವೆಯೂ ಸಕಾಲಕ್ಕೆ ಫಲಿತಾಂಶ ಘೋಷಿಸಲಾಗಿದೆ’ ಎಂದು ಪರಮೇಶ್ವರ ನಾಯಕ ಟಿ. ತಿಳಿಸಿದರು.

ಸಿಂಡಿಕೇಟ್ ಸದಸ್ಯರಾದ ನಾಗಭೂಷಣ್‌ ಮಡೆಪ್ಪ ಕಮಠಾಣೆ, ಶಾಂತಲಿಂಗ ಸಾವಳಗಿ, ಕುಲಸಚಿವ ಮಹಮ್ಮದ್‌ ಶಕೀಲ್, ವಿಶೇಷಾಧಿಕಾರಿ ರವೀಂದ್ರನಾಥ ಗಬಾಡಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT