ಶುಕ್ರವಾರ, ಡಿಸೆಂಬರ್ 4, 2020
21 °C

ನಾಳೆಯಿಂದ ಬೀದರ್-ಯಶವಂತಪುರ ರೈಲು ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಬೀದರ್-ಯಶವಂತಪುರ ರೈಲು ಸೇವೆ ಮಂಗಳವಾರ (ನ.17) ದಿಂದ ಪುನರಾರಂಭವಾಗಲಿದೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರಿಗೆ ತಾವು ಮಾಡಿದ ಮನವಿ ಹಿನ್ನೆಲೆಯಲ್ಲಿ 17 ರಂದು ಯಶವಂತಪುರ- ಬೀದರ್ (ಸಂಖ್ಯೆ 06271) ಹಾಗೂ 18 ರಂದು ಬೀದರ್-ಯಶವಂತಪುರ (ವಾರಕ್ಕೆ ನಾಲ್ಕು ದಿನ) ರೈಲು (ಸಂಖ್ಯೆ 06272) ಸಂಚಾರ ಶುರುವಾಗಲಿದೆ.

06583 ಯಶವಂತಪುರ-ಲಾತೂರ್ ವಯಾ ಬೀದರ್ ಹಾಗೂ 06584 ಬೀದರ್ ಯಶವಂತಪುರ ವಯಾ ಬೀದರ್ (ವಾರಕ್ಕೆ ಮೂರು ದಿನ) ರೈಲು ಓಡಲಿದೆ. ಈ ಮೂಲಕ ರೈಲು ಇಡೀ ವಾರ ಮೊದಲಿನ ಸಮಯದಂತೆ ಸಂಚರಿಸಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.