ಸೋಮವಾರ, ಡಿಸೆಂಬರ್ 5, 2022
19 °C

ಪೌರ ಕಾರ್ಮಿಕರಿಗೆ ಹಣ್ಣು ವಿತರಿಸಿ ಜನ್ಮದಿನ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ನಗರಸಭೆ ಸದಸ್ಯ ನಿತಿನ್ ಕರ್ಪೂರ ನಗರದಲ್ಲಿ ಪೌರ ಕಾರ್ಮಿಕರಿಗೆ ಹಣ್ಣು ವಿತರಿಸಿ ತಮ್ಮ 42ನೇ ಜನ್ಮದಿನ ಆಚರಿಸಿಕೊಂಡರು.

ನಗರಸಭೆಯ ಹಳೆಯ ಕಚೇರಿಯಲ್ಲಿ ಒಟ್ಟು 125 ಪೌರ ಕಾರ್ಮಿಕರಿಗೆ ಹಣ್ಣಿನ ಬ್ಯಾಸ್ಕೆಟ್‍ಗಳನ್ನು ವಿತರಿಸಿದರು.
ನಗರ ಸ್ವಚ್ಛತೆ ಹಾಗೂ ಸೌಂದರ್ಯೀಕರಣದಲ್ಲಿ ಪೌರ ಕಾರ್ಮಿಕರ ಪಾತ್ರ ಬಹಳ ಮಹತ್ವದ್ದಾಗಿದೆ. ಹೀಗಾಗಿ ಅವರನ್ನು ಗೌರವಿಸಲು ಅವರೊಂದಿಗೆ ಜನ್ಮದಿನ ಆಚರಿಸಿಕೊಂಡಿದ್ದೇನೆ ಎಂದು ನಿತಿನ್ ಕರ್ಪೂರ ತಿಳಿಸಿದರು.

ನಗರಸಭೆ ಆಯುಕ್ತ ಪ್ರಬುದ್ಧ ಕಾಂಬಳೆ, ಪರಿಸರ ಎಂಜಿನಿಯರ್ ರವೀಂದ್ರ ಕಾಂಬಳೆ, ಡಾ. ಸುಭಾಷ್ ಕರ್ಪೂರ, ಪ್ರಮುಖರಾದ ಕೈಲಾಸ ಧೂಪೆ, ನಾಗರಾಜ ಕರ್ಪೂರ, ಮಾಣಿಕ ಕರ್ಪೂರ, ಸಿದ್ಧರಾಮೇಶ್ವರ ಶೆಟಕಾರ್, ಪ್ರವೀಣ ಕರ್ಪೂರ, ನಿಶಾಂತ ಕರ್ಪೂರ, ಸತೀಶ ಸ್ವಾಮಿ, ನಿತಿನ್ ನವಲಕಿಲೆ, ರವೀಂದ್ರ ವಟಗೆ, ಆಕಾಶ ಕರ್ಪೂರ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.