ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿವಿಧೆಡೆ ಹರ್ ಘರ್ ತಿರಂಗಾ ಬೈಕ್‌ ರ್‍ಯಾಲಿ

Published 13 ಆಗಸ್ಟ್ 2024, 15:52 IST
Last Updated 13 ಆಗಸ್ಟ್ 2024, 15:52 IST
ಅಕ್ಷರ ಗಾತ್ರ

ಬೀದರ್‌: ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬೀದರ್‌ ನಗರ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಬೈಕ್‌ ರ್‍ಯಾಲಿ ನಡೆಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ‌ಸೋಮನಾಥ ಪಾಟೀಲ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ ಅವರು ಬೈಕ್‌ ರ್‍ಯಾಲಿಗೆ ಚಾಲನೆ ನೀಡಿ, ಬಿಜೆಪಿ ದೇಶದಾದ್ಯಂತ ಬೈಕ್‌ ರ್‍ಯಾಲಿ ನಡೆಸುತ್ತಿದ್ದು, ಅದರ ಭಾಗವಾಗಿ ನಗರದಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪ ಔರಾದೆ, ಕಿರಣ್ ಪಾಟೀಲ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ರೆಡ್ಡಿ, ಪ್ರಧಾನ ಕಾರ್ಯದರ್ಶಿ ವೀರೇಶ್ ಸ್ವಾಮಿ, ನಗರ ಯುವ ಮೋರ್ಚಾ ಅಧ್ಯಕ ಸಂದೀಪ ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪಕಕುಮಾರ ಬಿ. ಜಾಧವ, ಬಸವ ಮೂಲಗೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಉಲ್ಲಾಸಿನಿ ವಿಕ್ರಂ ಮುದ್ದಾಳೆ, ಮುಖಂಡರಾದ ಈಶ್ವರ ಸಿಂಗ್‌ ಠಾಕೂರ್, ಮಹೇಶ್ವರ ಸ್ವಾಮಿ, ರಾಜಶೇಖರ ನಾಗಮೂರ್ತಿ, ಮಹೇಶ ಪಾಲಂ, ಸುಭಾಷ ಮಡಿವಾಳ, ಗಣೇಶ ಭೋಸ್ಲೆ, ಸುನೀಲ ಗೌಳಿ,  ರೋಷನ್ ವರ್ಮಾ, ನಿತಿನ್ ಎನ್., ಸಂಗಮೇಶ ಗುಮ್ಮಾ, ವಿಕ್ರಮ್ ಮುದ್ದಾಳೆ, ರಘು ಚಿದ್ರೆ,  ಸಾಯಿನಾಥ್ ಮಂಗಲಗಿ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT