ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಸೌಕರ್ಯಗಳಿಂದ ವಂಚಿತ ಮಿರಕಲ್ ಗ್ರಾಮ

Published 4 ಜೂನ್ 2023, 4:19 IST
Last Updated 4 ಜೂನ್ 2023, 4:19 IST
ಅಕ್ಷರ ಗಾತ್ರ

ಗುರುಪ್ರಸಾದ ಮೆಂಟೆ

ಹುಲಸೂರ: ತಾಲ್ಲೂಕನಲ್ಲಿ ಅಂತರ್ಜಲಮಟ್ಟ ಕುಸಿದಿದ್ದು, ಸಾವಿರ ಅಡಿಗಳಷ್ಟು ಒಳಗಿನಿಂದ ಬರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸರ್ಕಾರದಿಂದ ನಿರ್ಮಾಣವಾಗಿದ್ದರೂ ಜನಸಾಮಾನ್ಯರಿಗೆ ಪ್ರಯೋಜನವಾಗುತ್ತಿಲ್ಲ ಎಂದು ಮೀರಕಲ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಹುಲಸೂರ ಸಮೀಪದ ಮಿರಕಲ್ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಎರಡು ವರ್ಷಗಳಿಂದ ದುರಸ್ತಿ ಕಂಡಿದ್ದು, ಸ್ಥಳೀಯ ನಿವಾಸಿಗಳು ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿಮಾರ್ಣವಾಗಿದೆ. ಕಳೆದ ಹಲವು ವರ್ಷಗಳಿಂದ ಅಂಬೇವಾಡಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಜನರು ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಲಕ್ಷಾನುಗಟ್ಟಲೆ ಹಣ ಖರ್ಚು ಮಾಡಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ತಕ್ಷಣವೇ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಲು ಮುಂದಾಗಬೇಕು ಎಂದು ಬಾಬು ಪಾಟೀಲ ತಿಳಿಸಿದರು.

ಗ್ರಾ.ಪಂ.ನವರು ಶುದ್ಧ ಘಟಕದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಯಂತ್ರಗಳು ದೂಳು ಹಿಡಿದು ಹಾಳಾಗುತ್ತಿವೆ. ಮನೆಗಳಲ್ಲಿನ ಮಕ್ಕಳು ಹಾಗೂ ಶಾಲಾ, ಕಾಲೇಜುಗಳಿಗೆ ಹೋಗುವ ಮಕ್ಕಳು ಬೇರೆ ಕೊಳವೆ ಬಾವಿ, ಜೆಜೆಎಂ ನೀರನ್ನು ಕುಡಿಯುವ ಕಾರಣ ನೆಗಡಿ, ಕೆಮ್ಮು, ಜ್ವರ ಮೊದಲಾದ ರೋಗಗಳ ಭಯ ಕಾಡುತ್ತಿದೆ. 6 ತಿಂಗಳಿಂದ ಕೆಟ್ಟು ನಿಂತಿರುವ ನೀರಿನ ಶುದ್ಧೀಕರಣ ಘಟಕ ಶೀಘ್ರ ಜನರ ಉಪಯೋಗಕ್ಕೆ ಬರುವಂತೆ ಸರಿಪಡಿಸಬೇಕೆಂದು ಒತ್ತಾಯಿಸಿದರು.

ಇನ್ನು ರಸ್ತೆಗೆ ಸಂಬಂಧಪಟ್ಟಂತೆ ಕಳೆದ ಮೂರು ತಿಂಗಳಿನಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿಯ ನಾಮಫಲಕ ಹಾಕದೆ ಕೆಲಸ ಮಾಡಿದ್ದಾರೆ. ಈ ವಿಳಂಬ ಕೆಲಸದಿಂದಾಗಿ ಸಾರ್ವಜನಿಕರಿಗೆ ಓಡಾಡಲು ತೊಂದರೆ ಉಂಟಾಗಿದೆ. ದೊಡ್ಡ ವಾಹನಗಳು ರಸ್ತೆಯ ಮೇಲಿಂದ ಸಂಚರಿಸುವುದರಿಂದ ದೂಳು ಬಿಟ್ಟು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಆರು ಬಾರಿ ಗ್ರಾಮದ ಹಿರಿಯ ನಾಗರಿಕರು ರಸ್ತೆ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಫೋಟೊ ಕ್ಯಾಪ್ಶನ್:- ಹುಲಸೂರ ತಾಲ್ಲೂಕಿನ ಮಿರಕಲ್ ಗ್ರಾಮದಿಂದ ಮಿರಾಕಲ್ ದಿಂದ - ಅಂಬೇವಾಡಿ ಕ್ರಾಸ್‌ ವರೆಗಿನ ರಸ್ತೆಯ ದುಸ್ಥಿತಿ.
ಫೋಟೊ ಕ್ಯಾಪ್ಶನ್:- ಹುಲಸೂರ ತಾಲ್ಲೂಕಿನ ಮಿರಕಲ್ ಗ್ರಾಮದಿಂದ ಮಿರಾಕಲ್ ದಿಂದ - ಅಂಬೇವಾಡಿ ಕ್ರಾಸ್‌ ವರೆಗಿನ ರಸ್ತೆಯ ದುಸ್ಥಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT