ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧ ಧರ್ಮ ಶಾಂತಿಯ ಪ್ರತೀಕ: ಭಂತೆ ಭೋದಿರತ್ನ

ಬಳತ (ಬಿ): ಸಾಮ್ರಾಟ ಅಶೋಕ ವಿಹಾರದಲ್ಲಿ ಬುದ್ಧನ ಮೂರ್ತಿ ಅನಾವರಣ
Last Updated 8 ಮೇ 2022, 12:12 IST
ಅಕ್ಷರ ಗಾತ್ರ

ಕಮಲನಗರ: ‘ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾದರೆ ಬುದ್ಧನ ತತ್ವ ಅನುಸರಿಸಬೇಕು. ನಮ್ಮ ನಡೆ ಬುದ್ಧನ ಕಡೆಗೆ ಸಾಗಬೇಕು’ ಎಂದು ಹಿಪ್ಪಳಗಾಂವ್ ಬುದ್ಧ ವಿಹಾರದ ಭಂತೆ ಭೋದಿರತ್ನ ಹೇಳಿದರು.

ತಾಲ್ಲೂಕಿನ ಬಳತ (ಬಿ) ಗ್ರಾಮದ ಸಾಮ್ರಾಟ ಅಶೋಕ ಬುದ್ಧ ವಿಹಾರದಲ್ಲಿ ನಡೆದ ಬುದ್ಧನ ಮೂರ್ತಿ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಬುದ್ಧ ಮತ್ತು ಬೌದ್ಧ ಧರ್ಮದ ಕುರಿತು ಬರೀ ಮಾತನಾಡಿದರೇ ಸಾಲದು. ಬುದ್ಧನ ವಿಚಾರಗಳ ಪ್ರಚಾರ ಅಗತ್ಯ ಎಂದರು.

ಬುದ್ಧನ ವೈಜ್ಞಾನಿಕ ತತ್ವಗಳನ್ನು ಅರಿತ ಅಶೋಕ, ಹರ್ಷ ಹಾಗೂ ಕನಿಷ್ಕ ಬೌದ್ಧ ಧರ್ಮ ಸ್ವೀಕರಿಸಿದರು. ಗ್ರೀಕ್‍ನಲ್ಲಿ ಅಲೆಕ್ಸಾಂಡರ್‌ನ ಮೊಮ್ಮಗ ಕೂಡ ಬೌದ್ಧ ಧರ್ಮಕ್ಕೆ ಸೇರಿದರು ಎಂದು ತಿಳಿಸಿದರು.

ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರಾಜಪ್ಪ ಗೋನ್ನಳ್ಳಿ ಮಾತನಾಡಿ,‘ಬೌದ್ಧ ಧರ್ಮ ಭಾರತೀಯ ಧರ್ಮವಾಗಿದೆ. ಬುದ್ಧ ಮತ್ತು ಆತನ ಬೌದ್ಧ ಧರ್ಮದ ಕುರಿತು ಡಾ.ಬಿ.ಆರ್.ಅಂಬೇಡ್ಕರ್ ಆಳವಾಗಿ ಚಿಂತಿಸಿಯೇ ಬೌದ್ಧ ಧರ್ಮ ಸ್ವೀಕರಿಸಿದರು. ದೇಶದ ಏಕತೆ, ಒಗ್ಗಟ್ಟಿಗಾಗಿಯೇ ಅಂಬೇಡ್ಕರ್ ನಮ್ಮದೇ ನೆಲದ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಬೌದ್ಧ ಧರ್ಮ ಶಾಂತಿಯ ಪ್ರತೀಕ. ಶಾಂತಿ ಅಳವಡಿಸಿಕೊಂಡರೆ ಸುಖ, ಸಮೃದ್ಧಿ ಸಾಧಿಸಬಹುದಾಗಿದೆ’ ಎಂದರು.

ಧಮ್ಮ ಪ್ರವಚನ ನೀಡಿದ ಅಣದೂರಿನ ಬುದ್ಧ ವಿಹಾರದ ಭಂತೆ ಜ್ಞಾನ ಸಾಗರ ಮಾತನಾಡಿ,‘ಬೌದ್ಧ ಧರ್ಮ ಪ್ರವೇಶಕ್ಕೆ ಯಾವುದೇ ಬಾಗಿಲು ಇಲ್ಲ. ನೈತಿಕ ಜೀವನವೇ ಬೌದ್ಧ ಧರ್ಮ’ ಎಂದರು.

ಡಾ. ಬಾಬುರಾವ ಅಣದೂರೆ, ಸಿದ್ರಾಮ ಸೋಬಾನೆ, ಮಲಶೇಟ್ಟಿ ಚಿದ್ರೆ, ಸುದಾಮ ಭಾಸ್ಕರೆ, ಕುಪೇಂದ್ರ. ಕೆ.ಹಣಮಂತ, ಕಲ್ಲಪ್ಪ ಕೈವಲ್ಯ, ಯುವರಾಜ ಚಿದ್ರೆ, ಪ್ರದೀಪ, ಮನೋಜ ಅಣದೂರೆ, ಅತೀಷ ಚಿದ್ರೆ, ಸಚಿನ ಅಣದೂರೆ, ಅರ್ಜುನ ಸಗರ, ರಾಹುಲ ಚಿದ್ರೆ, ಸಂದೀಪ ಸಿಂಗೆ ಹಾಗೂ ಪ್ರದೀಪ ಚಿದ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT