ಬುಧವಾರ, ಮೇ 25, 2022
24 °C

ಬೀದರ್‌: ತಹಶೀಲ್ದಾರ್‌ ಮೇಲೆ ಬಿಎಸ್‌ಪಿ ಕಾರ್ಯಕರ್ತರ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ಮನವಿ ಸ್ವೀಕರಿಸಲು ಬರಲಿಲ್ಲ ಎಂದು ಆಕ್ರೋಶಗೊಂಡು ಪ್ರತಿಭಟನಾನಿರತ ಬಹುಜನ ಸಮಾಜ ಪಾರ್ಟಿಯ (ಬಿಎಸ್‌ಪಿ) ಕಾರ್ಯಕರ್ತರು ಶುಕ್ರವಾರ ಹುಮನಾಬಾದ್ ತಹಶೀಲ್ದಾರ್‌ ಕಚೇರಿಗೆ ನುಗ್ಗಿ ಕುರ್ಚಿಗಳನ್ನು ಧ್ವಂಸಗೊಳಿಸಿ ತಹಶೀಲ್ದಾರ್ ಪ್ರದೀಪ ಹಿರೇಮಠ ಮೇಲೆ ಹಲ್ಲೆ ನಡೆಸಿದ್ದಾರೆ.

ಗಣರಾಜ್ಯೋತ್ಸವ ಸಮಾರಂಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹುಮನಾಬಾದ್‌ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಬಿಎಸ್‌ಪಿ ಕಾರ್ಯಕರ್ತರು ತಹಶೀಲ್ದಾರರು ಮನವಿಪತ್ರ ಸ್ವೀಕರಿಸಲು ಸ್ಥಳಕ್ಕೆ ಬರುವಂತೆ ಮನವಿ ಮಾಡಿದರು. 

ಆಹಾರ ಇಲಾಖೆ ಅಧಿಕಾರಿಗಳ ಸಭೆ ನಡೆಸುತ್ತಿದ್ದರಿಂದ ತಹಶೀಲ್ದಾರರು ಕಚೇರಿ ಸಿಬ್ಬಂದಿಯನ್ನು ಮನವಿಪತ್ರ ಸ್ವೀಕರಿಸಲು ಪ್ರತಿಭಟನಾನಿರತರ ಬಳಿ ಕಳಿಸಿದರು. ಇದರಿಂದ ಕೆರಳಿದ ಕಾರ್ಯಕರ್ತರು ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಅಂಕುಶ್ ಗೋಖಲೆ ನೇತೃತ್ವದಲ್ಲಿ ತಹಶೀಲ್ದಾರ್‌ ಕಚೇರಿ ಸಭಾಂಗಣಕ್ಕೆ ನುಗ್ಗಿ ಕುರ್ಚಿಗಳನ್ನು ಎತ್ತಿ ಬಿಸಾಡಿದರು. ತಹಶೀಲ್ದಾರ್‌ ಮೇಲೆ ಹಲ್ಲೆ ನಡೆಸಿದರು. ಕಚೇರಿ ಸಿಬ್ಬಂದಿ ಭಯದಿಂದ ಹೊರಗೆ ಓಡಿ ಹೋದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು