ಬಿಎಸ್‌ಎಸ್‌ಕೆ ಲೀಸ್ ಮೇಲೆ ಕೊಡುವುದರ ಬಗ್ಗೆ ಸಚಿವ ಶಿವಾನಂದ ಪಾಟೀಲ ಅವರೊಂದಿಗೆ ಚರ್ಚಿಸುತ್ತೇನೆ. ಬಿಎಸ್‌ಎಸ್‌ಕೆ ಇಂದಿನ ಸ್ಥಿತಿಗತಿಗೆ ಹಿಂದಿನ ಸರ್ಕಾರದ ಪಾಪದ ಕೆಲಸ ಕಾರಣ. ನಮ್ಮ ತಂದೆ (ಭೀಮಣ್ಣ ಖಂಡ್ರೆ) ಬಿಎಸ್‌ಎಸ್‌ಕೆ ಪ್ರಾರಂಭಿಸಿದ್ದರು. ಹತ್ತು ವರ್ಷ ನಾನು ಅದರ ಅಧ್ಯಕ್ಷನಾಗಿದ್ದೆ. ನಾನು ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವಾಗ ₹30 ಕೋಟಿ ಸಾಲ ಅದರ ಮೇಲಿತ್ತು. ಆನಂತರ ಅದು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಯಿತು ಎಂದು ಹೇಳಿದರು.