ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಟ್ನಾದಲ್ಲಿ ಬೌದ್ಧರ ಸಭೆ; ಕರಪತ್ರ ಬಿಡುಗಡೆ

Published : 13 ಸೆಪ್ಟೆಂಬರ್ 2024, 14:39 IST
Last Updated : 13 ಸೆಪ್ಟೆಂಬರ್ 2024, 14:39 IST
ಫಾಲೋ ಮಾಡಿ
Comments

ಬೀದರ್‌: ಬಿಹಾರದ ಪಟ್ನಾ ಅಶೋಕ ಮೈದಾನದಲ್ಲಿ ಸೆ. 17ರಂದು ನಡೆಯಲಿರುವ ಬೌದ್ಧರ ಸಭೆ ಮತ್ತು ಶಾಂತಿಯಾತ್ರೆಯ ಕರಪತ್ರಗಳನ್ನು ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಶುಕ್ರವಾರ ವಿವಿಧ ಬೌದ್ಧ ಸಂಘಟನೆಗಳ ಮುಖಂಡರು ಬಿಡುಗಡೆಗೊಳಿಸಿದರು.

ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಸಂವಿಧಾನ ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ‌ ಅನಿಲಕುಮಾರ್‌ ಬೇಲ್ದಾರ್‌ ಮಾತನಾಡಿ, ಅಖಿಲ ಭಾರತ ಬೌದ್ಧ ವೇದಿಕೆ ಮತ್ತು ಎಲ್ಲ ಬೌದ್ಧ ಸಂಘಟನೆಗಳ ಸಹಯೋಗದಲ್ಲಿ ಭೋದಿಸತ್ವ ಅನಗಾರಿಕ ಧಮ್ಮಪಾಲ್  ಅವರ 160ನೇ ಜನ್ಮ ದಿನಾಚರಣೆ1949ರ ಬಿ.ಟಿ. ಕಾಯ್ದೆ ವಿರೋಧಿಸಿ ಸೆ. 17ರಂದು ಪಟ್ನಾದಲ್ಲಿ ಬೌದ್ಧರ ಸಭೆ ಮತ್ತು ಶಾಂತಿಯಾತ್ರೆ ನಡೆಯಲಿದೆ. ಇದರಲ್ಲಿ 5ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ಬೌದ್ಧ ಉಪಾಸಕ/ಉಪಾಸಕಿಯರು ಹಾಗೂ ಬುದ್ಧನ ಅನುಯಾಯಿಗಳು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಈ ಸಭೆಗೆ ಬರುವ ಬುದ್ಧನ ಅನುಯಾಯಿಗಳು ಸೆ. 15ರಂದು ಬೆಳಿಗ್ಗೆ 11ಕ್ಕೆ ಬೀದರ್‌ ನಗರದ ರೈಲು ನಿಲ್ದಾಣಕ್ಕೆ ಬರಬೇಕೆಂದು ಹೇಳಿದರು.

ಭಂತೆ ಜ್ಞಾನಸಾಗರ, ಮುಖಂಡರಾದ ರಮೇಶ ಡಾಕುಳಗಿ, ಬಾಬುರಾವ್‌ ಪಾಸ್ವಾನ್‌, ಬಸವರಾಜ ಮಾಳಗೆ, ಶ್ರೀಪತರಾವ್‌ ದೀನೆ, ಶಿವಕುಮಾರ ನೀಲಿಕಟ್ಟಿ, ರಾಜಕುಮಾರ ಬನ್ನೇರ್‌, ಪ್ರಕಾಶ ಮಾಳಗೆ, ಶಾಲಿವಾನ ಬಡಿಗೇರ್‌, ರಘುನಾಥ ಗಾಯಕವಾಡ, ರಾಜಕುಮಾರ ಗಾದಗಿ, ರಮೇಶ ಮಂದಕನಳ್ಳಿ, ಪ್ರದೀಪ ನಾಟೆಕರ್‌, ಸಂದೀಪ ಕಾಂಟೆ, ವಿನೋದ ಬಂದನಗೆ, ಬಾಬುರಾವ್‌ ಮಿಠಾರೆ, ದಶರಥ ಹೊಸಮನಿ, ಲಕ್ಕಿ ಭೀಮನಗರ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT