ಕುಕನೂರು: ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆ ಕುಕನೂರು ಹಾಗೂ ಯಲಬುರ್ಗಾ ಪಟ್ಟಣದ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ಸೋಮವಾರ ನೆರವೇರಲಿದೆ.

ರಾಷ್ಟ್ರೀಯ ಹೆದ್ದಾರಿ ಭಾನಾಪುರ-ಗದ್ದನಕೇರಿ ಎನ್ಎಚ್-367 ಕುಕನೂರು-ಯಲಬುರ್ಗಾ-ಗಜೇಂದ್ರಗಡ ಬೈಪಾಸ್ ರಸ್ತೆಗೆ ಫೆ.8, 2023ರಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಿ ₹ 333.96 ಕೋಟಿ ಅನುದಾನ ನೀಡಿದೆ. ಕುಕನೂರು ಬೈಪಾಸ್ 6.88 ಕಿ.ಮೀ., ಯಲಬುರ್ಗಾ 4.76 ಕಿ.ಮೀ., ಗಜೇಂದ್ರಗಡ 5.63 ಕಿ.ಮೀ. ಸೇರಿ ಒಟ್ಟು 17.256 ಕಿ.ಮೀ. ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ. ಬೈಪಾಸ್ ರಸ್ತೆಯ ಸಂಚಾರಕ್ಕೆ ತೊಂದರೆಯಾಗದಂತೆ ಎರಡು ಫ್ಲೈ ಓವರ್ ನಿರ್ಮಿಸಲಾಗುತ್ತಿದೆ.

ಕುಕನೂರಿನ ಗುದ್ನೇಪ್ಪನಮಠ ರೋಡ್ ಹತ್ತಿರ ಒಂದು, ಯಲಬುರ್ಗಾದ ಮೂಧೋಳ ರಸ್ತೆಗೆ ಇನ್ನೊಂದು ಪ್ಲೈ ಓವರ್ ನಿರ್ಮಿಸಲಾಗುತ್ತಿದೆ. 16 ಮೈನರ್ ಜಂಕ್ಷನ್, 10 ಮೇಜರ್ ಜಂಕ್ಷನ್, 7 ಹೊಸ ಬ್ರಿಡ್ಜ್, 6.8 ಕಿ.ಮೀ. ಡ್ರೇನ್, 2 ಬಾಕ್ಸ್ ಕನ್ವರ್ಟ್, 19 ಪೈಪ್ ಕನ್ವರ್ಟ್, 18 ಸ್ಲಾಬ್ ಕನ್ವರ್ಟ್, 43 ಕ್ರಾಸ್ ಕನ್ವರ್ಟ್ ನಿರ್ಮಿಸಲಾಗುತ್ತಿದೆ. ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಪರಿಹಾರ ಜಮೆಯಾಗುತ್ತಿದ್ದು, ಇನ್ನೂ ಶೇ 20ರಷ್ಟು ಭೂ ಸ್ವಾಧೀನ ಹಣ ಜಮೆ ಪ್ರಕ್ರಿಯೆ ಉಳಿದಿದೆ. ಸದ್ಯ ₹ 35 ಕೋಟಿ ರೈತರ ಖಾತೆಗೆ ಜಮೆಯಾಗಿದೆ. ಕುಕನೂರಿನಲ್ಲಿ ಬೈಪಾಸ್ಗೆ 73 ಎಕರೆ, ಯಲಬುರ್ಗಾದಲ್ಲಿ 53 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ.

ಕುಕನೂರಿನ ಬೈಪಾಸ್ ಕೊಪ್ಪಳ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ನಿಂದ ಆರಂಭವಾಗಿ ರಾಜೂರು ಸಮೀಪದವರೆಗೆ, ಯಲಬುರ್ಗಾ ಬೈಪಾಸ್ ನೂತನ ಅಗ್ನಿಶಾಮಕ ಕಚೇರಿ ನಂತರ ಆರಂಭವಾಗಿ ಮೂಧೋಳ ರಸ್ತೆ ವರೆಗೆ ನಿರ್ಮಾಣವಾಗಲಿದೆ. ಇದರಿಂದ ಕುಕನೂರು, ಯಲಬುರ್ಗಾ ಪಟ್ಟಣದಲ್ಲಿ ಸಂಚರಿಸುವ ಭಾರಿ ಗಾತ್ರದ ವಾಹನ ಪಟ್ಟಣದ ಹೊರವಲಯದಲ್ಲಿಯೇ ಸಂಚರಿಸಲಿವೆ.

2014ರಲ್ಲಿ ಯುಪಿಎ ಸರ್ಕಾರದಲ್ಲಿ ಅಂದಿನ ಕೇಂದ್ರ ಭೂಸಾರಿಗೆ ಮಂತ್ರಿಗಳಾಗಿದ್ದ ಆಸ್ಕರ್ ಫರ್ನಾಂಡೀಸ್ ಅವರ ಸಹಕಾರದಿಂದ ಭಾನಾಪುರದಿಂದ ಕುಕನೂರು, ಯಲಬುರ್ಗಾ, ಗಜೇಂದ್ರಗಡ ಮಾರ್ಗವಾಗಿ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿವರೆಗೂ ರಾಷ್ಟ್ರೀಯ ಹೆದ್ದಾರಿ 367ನ್ನು ಮಂಜೂರು ಮಾಡಿಸಿದ್ದೆ. ನಂತರದ ದಿನಗಳಲ್ಲಿ ಕುಕನೂರು, ಯಲಬುರ್ಗಾ, ಗಜೇಂದ್ರಗಡ ಪಟ್ಟಣಗಳಿಗೆ ಬೈಪಾಸ್ ರಸ್ತೆಗಳ ಮಂಜೂರಾಗಿವೆ. ಇಂದು ಅದೇ ಬೈಪಾಸಗಳ ಭೂಮಿ ಪೂಜೆ ನೇರವೇರಿಸಲಿದ್ದೇವೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಬೈಪಾಸ್ ರಸ್ತೆಯ ಭೂಮಿ ಖರೀದಿ ಪ್ರಕ್ರಿಯೆ ಶೇ 80 ಮುಗಿದಿದ್ದು ಎರಡು ವರ್ಷಗಳಲ್ಲಿ ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ.
–ಎಂ.ಕೃಷ್ಣಮೂರ್ತಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.