ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಂಭದಲ್ಲೇ ಪತ್ತೆ ಹಚ್ಚಿದರೆ ಕ್ಯಾನ್ಸರ್ ಗುಣ

ಜ್ಞಾನಸುಧಾದಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
Last Updated 28 ಜನವರಿ 2023, 14:57 IST
ಅಕ್ಷರ ಗಾತ್ರ

ಬೀದರ್: ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಕ್ಯಾನ್ಸರ್‌ನಿಂದ ಗುಣಮುಖರಾಗಬಹುದು ಎಂದು ಖ್ಯಾತ ಕ್ಯಾನ್ಸರ್ ತಜ್ಞ ಡಾ. ವಿಪಿನ್ ಗೋಯಲ್ ಹೇಳಿದರು.

ನಗರದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ಆಯೋಜಿಸಿದ್ದ ಗರ್ಭ ಕಂಠ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಯಾನ್ಸರ್ನ ವಿಧಗಳಲ್ಲಿ ಮಹಿಳೆಯರನ್ನು ಕಾಡುವ ಗರ್ಭ ಕಂಠದ ಕ್ಯಾನ್ಸರ್ ಒಂದು. ಲಸಿಕೆ ಪಡೆಯುವ ಮೂಲಕ ಇದನ್ನು ತಡೆಗಟ್ಟಬಹುದು. 13 ರಿಂದ 26 ವರ್ಷದ ಒಳಗಿನ ಯುವತಿಯರು ಲಸಿಕೆ ಪಡೆಯಬೇಕು ಎಂದು ಸಲಹೆ ಮಾಡಿದರು.
ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂ. ಪೂರ್ಣಿಮಾ ಜಿ. ಮಾತನಾಡಿ, ಮಹಿಳೆಯರು ಕ್ಯಾನ್ಸರ್ ಬಗ್ಗೆ ಅರಿಯಬೇಕು. ಕ್ಯಾನ್ಸರ್ ತಡೆಗೆ ಲಸಿಕೆ ತೆಗೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ನಿರ್ದೇಶಕ ಮುನೇಶ್ವರ ಲಾಖಾ ಮಾತನಾಡಿ, ಡಾ. ವಿಪಿನ್ ಗೋಯಲ್ ಬೀದರ್‍ನವರು. ದೇಶ, ವಿದೇಶದಲ್ಲಿ ಜನ ಮನ್ನಣೆ ಪಡೆದ ಕ್ಯಾನ್ಸರ್ ತಜ್ಞರಲ್ಲಿ ಒಬ್ಬರು. ಅವರು ತವರು ಜಿಲ್ಲೆಯ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಜ್ಞಾನಸುಧಾ ವಿದ್ಯಾಲಯದ ಪ್ರಾಚಾರ್ಯೆ ಸುನೀತಾ ಸ್ವಾಮಿ ಇದ್ದರು. ಸಂಸ್ಥೆಯ ಮಹಿಳಾ ಸಿಬ್ಬಂದಿ, ಜ್ಞಾನಸುಧಾ ವಿದ್ಯಾಲಯ, ಪದವಿಪೂರ್ವ ಕಾಲೇಜು, ಜ್ಞಾನಸುಧಾ ಕಾಲೇಜ್ ಆಫ್ ನರ್ಸಿಂಗ್ ಹಾಗೂ ಜ್ಞಾನಸುಧಾ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT