ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್ ಗುಣ ಸಾಧ್ಯ: ಡಾ. ಗೋಯಲ್

ರೋಟರಿ ಕ್ಲಬ್‍ನಿಂದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
Last Updated 28 ಸೆಪ್ಟೆಂಬರ್ 2020, 15:46 IST
ಅಕ್ಷರ ಗಾತ್ರ

ಬೀದರ್: ಮಹಾಮಾರಿಗಳಲ್ಲಿ ಒಂದಾಗಿರುವ ಕ್ಯಾನ್ಸರ್ ಗುಣಪಡಿಸಲು ಸಾಧ್ಯವಿದೆ. ಅನೇಕರು ಕ್ಯಾನ್ಸರ್ ವಿರುದ್ಧ ಹೋರಾಡಿ ಜಯಿಸಿದ್ದಾರೆ ಎಂದು ಹೈದರಾಬಾದ್‍ನ ಕೇರ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ವಿಪಿನ್ ಗೋಯಲ್ ಹೇಳಿದರು.

ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ನಗರದ ಐಎಂಎ ಹಾಲ್‍ನಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾಗಿದ್ದರೂ, ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು ಎಂದು ತಿಳಿಸಿದರು.

ಎಷ್ಟೋ ಬಾರಿ ಕ್ಯಾನ್ಸರ್ ಲಕ್ಷಣಗಳು ರೋಗಿ ಅರಿವಿಗೆ ಬರುವುದಿಲ್ಲ. ಗೊತ್ತಾದಾಗ ತಡವಾಗಿರುತ್ತದೆ. ಚಿಕಿತ್ಸಾ ಹಂತವನ್ನು ಮೀರಿರುತ್ತದೆ. ಹೀಗಾಗಿ ಏನಾದರೂ ದೈಹಿಕ ಬದಲಾವಣೆ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ಮಾಡಿದರು.

ಭಾರತೀಯ ಜೀವ ವಿಮಾ ನಿಗಮದ ಬೀದರ್ ಶಾಖೆ ವ್ಯವಸ್ಥಾಪಕ ರಮೇಶ ಗೈಬಾ, ನಿಗಮದ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಕ್ಲಬ್ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಿತಿನ್ ಕರ್ಪೂರ್, ಡಾ. ನಾಗೇಶ ಪಾಟೀಲ, ಸುಧೀಂದ್ರ, ಡಾ.ನಿತೇಶಕುಮಾರ ಬಿರಾದಾರ, ಜಯೇಶ್ ಪಟೇಲ್, ಆಕಾಶ ನಾಗಮಾರಪಳ್ಳಿ, ಪ್ರವೀಣ ಗೋಯಲ್ ಉಪಸ್ಥಿತರಿದ್ದರು.

ಕ್ಲಬ್ ಕಾರ್ಯದರ್ಶಿ ಡಾ. ಕಪಿಲ್ ಪಾಟೀಲ ಸ್ವಾಗತಿಸಿದರು. ಖಜಾಂಚಿ ರಿತೇಶ್ ಸುಲೆಗಾಂವ್ ನಿರೂಪಿಸಿದರು. ಸತೀಶ್ ಸ್ವಾಮಿ ವಂದಿಸಿದರು.

ಕಾರ್ಯಕ್ರಮವನ್ನು ಫೇಸ್‍ಬುಕ್‍ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಅನೇಕರು ಝೂಮ್ ಆ್ಯಪ್ ಬಳಸಿಯೂ ಕಾರ್ಯಕ್ರಮ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT