ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜಿನತ್ತ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು

ವಿ.ಕೆ. ಇಂಟರ್‌ನ್ಯಾಷನಲ್ ಕಾಲೇಜಿನಲ್ಲಿ ಮಾಸ್ಕ್ ವಿತರಣೆ
Last Updated 18 ನವೆಂಬರ್ 2020, 1:52 IST
ಅಕ್ಷರ ಗಾತ್ರ

ಬೀದರ್: ಕೋವಿಡ್ ಸೋಂಕಿನಿಂದ ಸ್ಥಗಿತಗೊಂಡಿದ್ದ ಜಿಲ್ಲೆಯ ಪದವಿ ಕಾಲೇಜುಗಳ ತರಗತಿಗಳು ಮಂಗಳವಾರ ಪುನರಾರಂಭಗೊಂಡವು.

ಆನ್‍ಲೈನ್ ಮೂಲಕ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಸುದೀರ್ಘ ಅವಧಿಯಿಂದ ಮನೆಯಲ್ಲೇ ಇದ್ದ ವಿದ್ಯಾರ್ಥಿಗಳು ಕಾಲೇಜಿನತ್ತ ಹೆಜ್ಜೆ ಹಾಕಿದರು. ಮಾಸ್ಕ್ ಧರಿಸಿ, ಸುರಕ್ಷಿತ ಅಂತರ ಕಾಯ್ದುಕೊಂಡು ಹಾಕಲಾಗಿದ್ದ ಬೆಂಚ್‍ಗಳಲ್ಲಿ ಕುಳಿತು ಪಾಠ ಆಲಿಸಿದರು.

ನಗರದ ವಿವಿಧ ಕಾಲೇಜುಗಳಲ್ಲಿ ತರಗತಿ ಆರಂಭದ ಕಾರಣ ಕೋವಿಡ್ ನಿಯಮಗಳ ಪಾಲನೆಗೆ ಒತ್ತು ನೀಡಿದ್ದು ಕಂಡುಬಂದಿತು. ತರಗತಿಗಳು ಶುರುವಾದ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ಸಂತಸ ಮನೆ ಮಾಡಿತ್ತು.

ಮಾಸ್ಕ್ ಉಚಿತ ವಿತರಣೆ: ನಗರದ ವಿದ್ಯಾನಗರ ಕಾಲೊನಿಯಲ್ಲಿ ಇರುವ ವಿ.ಕೆ. ಇಂಟರ್‌ನ್ಯಾಷನಲ್ ಪದವಿ ಕಾಲೇಜು ಹಾಗೂ ಲಕ್ಷ್ಮೀಬಾಯಿ ಕಮಠಾಣೆ ಬಿ.ಇಡಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ್ ಉಚಿತವಾಗಿ ವಿತರಿಸಲಾಯಿತು.

ಕಾಲೇಜಿಗೆ ಬಂದ ವಿದ್ಯಾರ್ಥಿ ಗಳನ್ನು ಕಾಲೇಜು ಸಿಬ್ಬಂದಿ ಸ್ವಾಗತಿಸಿ ಬರಮಾಡಿ ಕೊಂಡರು. ಮಾಸ್ಕ್ ಇಲ್ಲದವರಿಗೆ ಸ್ಥಳದಲ್ಲೇ ಮಾಸ್ಕ್ ಒದಗಿಸಲಾಯಿತು. ಮಾಸ್ಕ್ ಧರಿಸಿರುವುದನ್ನು ಖಚಿತಪಡಿಸಿಕೊಂಡು, ಕೈಗೆ ಸ್ಯಾನಿಟೈಸರ್ ಹಾಕಿ ವಿದ್ಯಾರ್ಥಿಗಳನ್ನು ವರ್ಗ ಕೋಣೆಗೆ ಬಿಡಲಾಯಿತು.
ಮೂರು ಅಡಿ ಅಂತರದಲ್ಲಿ ಹಾಕಿದ್ದ ಬೆಂಚ್‍ಗಳ ಮೇಲೆ ತಲಾ ಒಬ್ಬರಿಗೆ ಮಾತ್ರ ಕೂಡಲು ಅವಕಾಶ ಕಲ್ಪಿಸಿ ಸುರಕ್ಷಿತ ಅಂತರ ಕಾಪಾಡಲಾಯಿತು.

ಕೋವಿಡ್‍ನಿಂದಾಗಿ ಫೆಬ್ರುವರಿ ಯಿಂದ ಶಾಲಾ, ಕಾಲೇಜುಗಳು ನಡೆದಿಲ್ಲ. ಉನ್ನತ ಶಿಕ್ಷಣ ಇಲಾಖೆ ಆದೇಶದ ಅನ್ವಯ ಇದೀಗ ಪದವಿ ಕಾಲೇಜು ತರಗತಿಗಳನ್ನು ಆರಂಭಿಸಲಾಗಿದೆ ಎಂದು ಲಕ್ಷ್ಮೀಬಾಯಿ ಕಮಠಾಣೆ ಬಿ.ಇಡಿ ಕಾಲೇಜು ಪ್ರಾಚಾರ್ಯ ಡಾ. ದಿಲೀಪ್ ಕಮಠಾಣೆ ತಿಳಿಸಿದರು.

ಕೋವಿಡ್ ತಡೆಗೆ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು, ಸುರಕ್ಷಿತ ಅಂತರ ಕಾಪಾಡುವುದು ಸೇರಿದಂತೆ ಕಾಲೇಜಿ ನಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಚಾಚೂತಪ್ಪದೇ ಪಾಲಿಸಲಾಗುವುದು ಎಂದು ಹೇಳಿದರು.

ಲಕ್ಷ್ಮೀಬಾಯಿ ಕಮಠಾಣೆ ಬಿ.ಇಡಿ ಕಾಲೇಜು ಉಪ ಪ್ರಾಚಾರ್ಯ ಧನರಾಜ ಪಾಟೀಲ, ವಿ.ಕೆ. ಇಂಟರ್‌ನ್ಯಾಷನಲ್ ಪದವಿ ಕಾಲೇಜು ಪ್ರಾಚಾರ್ಯೆ ಶಿವಲೀಲಾ ಟೊಣ್ಣೆ, ಆಡಳಿತಾಧಿಕಾರಿ ಜಿನ್ಸ್ ಕೆ. ಥಾಮಸ್, ಉಪನ್ಯಾಸಕರಾದ ರವೀಂದ್ರ ದೇವಾ, ನಾಗೇಶ ಬಿರಾದಾರ, ಪ್ರದೀಪ ಗಾಜುಲ್, ಝರಣಪ್ಪ ಹೊಸಳ್ಳಿ ಇದ್ದರು.

ಇದಕ್ಕೂ ಮುನ್ನ ಬಸವ ತತ್ವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೈಜಿನಾಥ ಕಮಠಾಣೆ ಅವರು ತರಗತಿ ಪ್ರಾರಂಭದ ನಿಮಿತ್ತ ಕಾಲೇಜಿನಲ್ಲಿ ಮಾಡಿಕೊಳ್ಳಲಾದ ಸಿದ್ಧತೆಗಳನ್ನು ಪರಿಶೀಲಿಸಿದರು. ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸುವಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.

ಸರ್ಕಾರದ ಆದೇಶದಂತೆ ಪಾಲಕರ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT