ಬೀದರ್: ಮಾಜಿ ಶಾಸಕ ಅಶೋಕ ಖೇಣಿ ಅವರಿಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ಸಂಭ್ರಮ ಆಚರಿಸಿದರು.

ತಾಲ್ಲೂಕಿನ ಹೊನ್ನಿಕೇರಿ ಸಿದ್ಧೇಶ್ವರ ದೇವಸ್ಥಾನ, ಬಾವಗಿಯ ಭದ್ರೇಶ್ವರ ಮಠ, ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನ, ಮುತ್ತಂಗಿ ರಾಚೋಟೇಶ್ವರ ದೇವಸ್ಥಾನ, ರೇಕುಳಗಿ ಮೌಂಟ್ನ ಬುದ್ಧ ವಿಹಾರ, ಕಮಠಾಣದ ಕಮಠಾಣ ಸಾಬ್ ದರ್ಗಾ, ಬಗದಲ್ ಸಾಹೇಬ್ ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಾಪುರ ಕ್ರಾಸ್ ಸಮೀಪದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಅಶೋಕ ಖೇಣಿ ಅವರ ಪರ ಘೋಷಣೆಗಳನ್ನು ಕೂಗಿದರು.
ಬೀದರ್ನ ರಾಂಪುರೆ ಕಾಲೊನಿಯಿಂದ ಹೊನ್ನಿಕೇರಿ, ಅತಿವಾಳ, ಆಣದೂರು, ಬಾವಗಿ, ಮಂದಕನಳ್ಳಿ, ಶಮಶೇರನಗರ, ಕಮಠಾಣ, ಬಗದಲ್, ರೇಕುಳಗಿ ಮೌಂಟ್, ಮನ್ನಾಎಖ್ಖೆಳ್ಳಿ, ಚಾಂಗಲೇರಾ, ಮನ್ನಳ್ಳಿ, ಅಮಲಾಪರ ಮಾರ್ಗವಾಗಿ ಮರಳಿ ಬೀದರ್ ವರೆಗೆ ಬೈಕ್ ರ್ಯಾಲಿ ನಡೆಸಿದರು.

ಬೀದರ್ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಚನಶೆಟ್ಟಿ, ಕರೀಂಸಾಬ ಕಮಠಾಣ, ಮುಖಂಡರಾದ ಗೋವರ್ಧನ್ ರಾಠೋಡ್, ಲೋಕೇಶ ಕನಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.