ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ಕೊಡುಗೆ

Last Updated 15 ಜುಲೈ 2021, 12:59 IST
ಅಕ್ಷರ ಗಾತ್ರ

ಬೀದರ್: ರೋಟರಿ ಕ್ಲಬ್ ಬೀದರ್ ಐದು ಜನ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ಕೊಡುಗೆಯಾಗಿ ನೀಡಿದೆ.

ನಗರದ ಐ.ಎಂ.ಎ ಹಾಲ್‍ನಲ್ಲಿ ಆಯೋಜಿಸಿದ್ದ ವೈದ್ಯರ ಹಾಗೂ ಚಾರ್ಟರ್ಡ್ ಅಕೌಂಟೆಂಟ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.

ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ವೈದ್ಯರ ಪಾತ್ರ ಮಹತ್ವದ್ದಾಗಿದೆ. ಸೋಂಕಿತರ ಜೀವ ಉಳಿಸಲು ವೈದ್ಯರು ಹಗಲಿರುಳು ಶ್ರಮಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು ಹೇಳಿದರು.

ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಕಾರ್ಯದರ್ಶಿ ಶಿವಶಂಕರ ಕಾಮಶೆಟ್ಟಿ, ರೋಟರಿ ಕ್ಲಬ್ ಬೀದರ್ ಅಧ್ಯಕ್ಷ ಪ್ರಕಾಶ ಟೊಣ್ಣೆ, ನಿಕಟಪೂರ್ವ ಅಧ್ಯಕ್ಷ ಹಾವಶೆಟ್ಟಿ ಪಾಟೀಲ, ಉಪಾಧ್ಯಕ್ಷ ಸೋಮಶೇಖರ ಪಾಟೀಲ, ಕಾರ್ಯದರ್ಶಿ ಅನಿಲಕುಮಾರ ಔರಾದೆ, ಖಜಾಂಚಿ ಭಗವಂತಪ್ಪ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ವಕೀಲರಾದ ವಿಲಾಸರಾವ್ ಮೋರೆ, ದಾದಾರಾವ್ ಕೋಳೆಕರ್, ಎಂಜಿನಿಯರ್ ರವಿ ಮೂಲಗೆ, ಅನಿಲ್ ಖೇಣಿ, ರಂಜೀತ್ ಪಾಟೀಲ, ಶ್ರೀನಿವಾಸ ಸಾಳೆ, ವಸಂತ ಪಟೇಲ್, ಚಂದ್ರಕಾಂತ ಕಾಡಾದಿ, ಡಾ. ವಿದ್ಯಾಸಾಗರ ಕಾಮತಿಕರ್, ಡಾ. ವಿನೋದ ಸಾವಳಗಿ, ಡಾ. ವಸಂತ ಪಾಟೀಲ, ನಾಗೇಂದ್ರ ನಿಟ್ಟೂರೆ, ಚಾರ್ಟರ್ಡ್ ಅಕೌಂಟೆಂಟ್ ಕಮಲಕಿಶೋರ ಅಟ್ಟಲ್ ಇದ್ದರು.

ಇದೇ ವೇಳೆ ವೈದ್ಯರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT