ಬುಧವಾರ, ಜೂನ್ 16, 2021
21 °C
ಗಣೇಶ ಮಹಾಮಂಡಳ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

ಗಣೇಶ ಉತ್ಸವ ಸರಳ ಆಚರಣೆಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಕೊರೊನಾ ಸೋಂಕಿನ ಕಾರಣ ನಗರದಲ್ಲಿ ಈ ಬಾರಿ ಗಣೇಶ ಉತ್ಸವವನ್ನು ಸರಳವಾಗಿ ಆಚರಿಸಲು ಗಣೇಶ ಮಹಾ ಮಂಡಳ ನಿರ್ಧರಿಸಿದೆ.

2019ನೇ ಸಾಲಿನ ಗಣೇಶ ಮಹಾಮಂಡಳಿಯನ್ನೇ ಈ ವರ್ಷವೂ ಮುಂದುವರೆಸಿಕೊಂಡು ಹೋಗಲು, ಮೆರವಣಿಗೆ ಕೈಬಿಟ್ಟು ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಆಡಳಿತದ ಮಾರ್ಗಸೂಚಿಯಂತೆ ಉತ್ಸವ ಆಚರಿಸಲು ತೀರ್ಮಾನಿಸಲಾಗಿದೆ.

2020ನೇ ಸಾಲಿನ ಗಣೇಶ ಮಹಾಮಂಡಳ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿ ಗುರುವಾರ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಸಲ್ಲಿಸಲಾಯಿತು. ಮಹಾ ಮಂಡಳದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿ ಬಾಬುವಾಲಿ, ಎನ್.ಆರ್. ವರ್ಮಾ, ರಜನೀಶ ವಾಲಿ ಇದ್ದರು.

ಗಣೇಶ ಮಹಾ ಮಂಡಳದ ಪದಾಧಿಕಾರಿಗಳು: ಪ್ರಭು ಚವಾಣ್ (ಗೌರವಾಧ್ಯಕ್ಷ), ಚಂದ್ರಶೇಖರ ಪಾಟೀಲ (ಅಧ್ಯಕ್ಷ), ಸೂರ್ಯಕಾಂತ ನಾಗಮಾರಪಳ್ಳಿ (ಕಾರ್ಯಾಧ್ಯಕ್ಷ), ಬಾಬುವಾಲಿ (ಪ್ರಧಾನ ಕಾರ್ಯದರ್ಶಿ), ಎನ್.ಆರ್. ವರ್ಮಾ (ಸ್ವಾಗತ ಸಮಿತಿ ಅಧ್ಯಕ್ಷ), ಸೂರ್ಯಕಾಂತ ಶೆಟಕಾರ್, ರೇವಣಸಿದ್ದಪ್ಪ ಜಲಾದೆ, ದೀಪಕ ವಾಲಿ, ಈಶ್ವರಸಿಂಗ್ ಠಾಕೂರ್, ರಾಜು ಚಿದ್ರಿ, ಮಹೇಶ ಪಾಲಂ, ಭರತ ಶೆಟಕಾರ, ಬಸವರಾಜ ಪವಾರ್, ಸತೀಶ ಮೊಟ್ಟಿ, ಭೂಷಣ ಪಾಠಕ್, ಸಚಿನ್ ನವಲಕಲೆ, ರಾಜಾರಾಮ ಚಿಟ್ಟಾ (ಉಪಾಧ್ಯಕ್ಷರು), ಸುಭಾಷ ಚೋಕರ, ಚಂದ್ರಶೇಖರ, ಮನೋಹರ ದಂಡೆ, ಸಾಯಿನಾಥ ಮುಧೋಳಕರ್, ಸುಭಾಷ ಮಡಿವಾಳ, ಪ್ರಶಾಂತ ಬಾವುಗಿ, ಸುರೇಶ ಮಾಶೆಟ್ಟಿ, ಶಿವಪುತ್ರ ವೈದ್ಯ, ಮಹೇಶ್ವರ ಸ್ವಾಮಿ, ಅರುಣ ಬಸವನಗರ, ಶಶಿ ಹೊಸಳ್ಳಿ, ರಾಜು ಬಿರಾದಾರ, ನಿಲೇಶ್ ರಕ್ಷಾಳ, ಅಂಬರೀಷ ಬಟನಾಪುರೆ, ವಿನೋದ ಪಾಟೀಲ, ವೀರೇಶ ಸ್ವಾಮಿ, ಶ್ರೀಮಂತ ಸಪಾಟೆ (ಕಾರ್ಯದರ್ಶಿಗಳು), ರಜನೀಶ ವಾಲಿ (ಖಜಾಂಚಿ), ವಿರೂಪಾಕ್ಷ ಗಾದಗಿ, ಶಶಿಕುಮಾರ ಪಾಟೀಲ, ಮಾಳಪ್ಪ ಅಡಸಾರೆ (ಪ್ರಚಾರ ಸಮಿತಿ), ಹಣಮಂತ ಬುಳ್ಳಾ (ಅಲಂಕಾರ ಸಮಿತಿ ಅಧ್ಯಕ್ಷ), ಮುನ್ನಾ ಆರ್ಯ, ಪ್ರಭಾಕರ ಪಾಟೀಲ ಗಾದಗಿ, ಬಸವರಾಜ ಮಲ್ಕಪ್ಪ, ಕಿರಣ ಪಾಲಂ, ರಾಜು ಜಮಾದಾರ್, ಪ್ರಕಾಶ ನಂದಗೌಳಿ, ಕೃಪಾಸಿದ್ಧ ಪಾಟೀಲ, ಸಂಜು ಘನತೆ, ಸಂಜು ಸ್ವಾಮಿ, ವಿನೋದ ಪಾಟೀಲ, ಗೋರಕ, ಗೋಪಾಲ್ ಕೃಷ್ಣ, ಅನಿಲ್ ರಾಜಗೀರಾ, ನರೇಶ ಗೌಳಿ ಮತ್ತು ಹಣಮಂತ ಕಾಮಟಿಕರ್ (ಕಾರ್ಯಕಾರಿ ಸಮಿತಿ ಸದಸ್ಯರು).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.