ಬೀದರ್: ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಯ ಕಚೇರಿ ಅಧೀಕ್ಷಕ ಶ್ರೀನಿವಾಸ ಜಮಾದಾರ ಹಾಗೂ ಡಾ.ಜೈಸಿಂಗ್ ಡಿ., ಅವರು ಕಳೆದ 2021-222 ರಿಂದ ಇಲ್ಲಿಯವರೆಗೆ ನಿಯಮ ಬಾಹಿರವಾಗಿ ಕೆಲಸ ನಿರ್ವಹಿಸಿ ಬ್ರಿಮ್ಸ್ ಸಂಸ್ಥೆಗೆ ಕೋಟ್ಯಂತರ ನಷ್ಟ ಮಾಡಿದ್ದಾರೆ. ಇವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ' ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ ) ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ಬರೆದ ಮನವಿ ಪತ್ರವನ್ನು ಬ್ರಿಮ್ಸ್ ಆಡಳಿತಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಕರವೇ ಜಿಲ್ಲಾಧ್ಯಕ್ಷ ಪೀಟರ್ ಚಿಟಗುಪ್ಪ, ಸೈಯದ್ ನವಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಗದಲಕರ್, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ನಾಗೇಶ ರಾಯಕ್ಕೋರ್, ನಿಲೇಶ ರಾಠೋಡ್, ಮೊಸೀನ್ ಪಟೇಲ್, ಯೇಹಾನ್ ಮಿಸೇ, ಗಿರೀಶ್ ಓಂಕಾರ್, ಪ್ರಸಾದ್ ಗೋಡಂಪಳ್ಳಿಕರ್, ಸಾಗರ್ ಮೇತ್ರೆ ಹಾಗೂ ಕರಣ ರಾಠೋಡ್ ಇದ್ದರು.