ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ, ಕಲಾ, ವಾಣಿಜ್ಯ ಪದವೀಧರರಿಗೆ ಬೇಡಿಕೆ

ವಿದ್ಯಾರ್ಥಿನಿಯರಿಗೆ ಕಾರ್ಯಾಗಾರ: ಪ್ರಾಚಾರ್ಯ ಪ್ರೊ. ಎಸ್.ಜಿ. ಹುಗ್ಗೆ ಪಾಟೀಲ ಹೇಳಿಕೆ
Last Updated 10 ಆಗಸ್ಟ್ 2019, 14:25 IST
ಅಕ್ಷರ ಗಾತ್ರ

ಬೀದರ್: ‘ಈಗ ವಿಜ್ಞಾನ ಕಲಾ ಹಾಗೂ ವಾಣಿಜ್ಯ ವಿಭಾಗದ ಪದವೀಧರರಿಗೆ ಬಹು ಬೇಡಿಕೆ ಇದೆ’ ಎಂದು ಅಕ್ಕ ಮಹಾದೇವಿ ಮಹಿಳಾ ಕಾಲೇಜು ಪ್ರಾಚಾರ್ಯ ಪ್ರೊ.ಎಸ್.ಜಿ. ಹುಗ್ಗೆ ಪಾಟೀಲ ಹೇಳಿದರು.

ಇಲ್ಲಿಯ ಅಕ್ಕ ಮಹಾದೇವಿ ಮಹಿಳಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಬಿ.ಎ, ಬಿ.ಕಾಂ, ಬಿ.ಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿನಿಯರ ಕಾರ್ಯಾಗಾರ ಹಾಗೂ ವಿದ್ಯಾರ್ಥಿನಿಯರ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ತಾಂತ್ರಿಕ ವಿಭಾಗದಲ್ಲಿ ನೌಕರಿಗಳ ಜತೆ ವೇತನವೂ ಕಡಿಮೆಯಾಗುತ್ತಿದೆ’ ಎಂದು ತಿಳಿಸಿದರು.
‘ಬಿ.ಎ, ಬಿ.ಎಸ್ಸಿ, ಬಿ.ಕಾಂ ನಂತರ ಎರಡು ವರ್ಷಗಳ ಸ್ನಾತಕೋತ್ತರ ಪದವಿ ಪೂರೈಸಿದರೆ ಉಜ್ವಲ ಭವಿಷ್ಯ ಇದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉಪನ್ಯಾಸಕರಾಗಿ ಆಯ್ಕೆಯಾದರೆ ಮಾಸಿಕ ₹ 80 ಸಾವಿರದಿಂದ ₹ 90 ಸಾವಿರ ವರೆಗೂ ವೇತನ ಪಡೆಯಬಹುದು. ಐದು ವರ್ಷ ಪರಿಶ್ರಮ ವಹಿಸಿದರೆ ಜೀವನವಿಡೀ ಸುಖವಾಗಿ ಇರಬಹುದು’ ಎಂದು ಹೇಳಿದರು.

‘ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಸೌಲಭ್ಯಗಳನ್ನು ಒದಗಿಸುತ್ತಿವೆ. ಅವುಗಳ ಪ್ರಯೋಜನ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕನ್ನಡ ವಿಭಾಗದ ಮುಖ್ಯಸ್ಥ ವಿಶ್ವನಾಥ ಬಿ. ಕಿವಡೆ, ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ವಿಜಯಕುಮಾರ ಬಿರಾದಾರ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ವಿಜಯಲಕ್ಷ್ಮಿ ಪಾಟೀಲ ಮಾತನಾಡಿದರು.

ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ವೀಣಾಕುಮಾರಿ, ಡಾ. ಗಂಗಾಂಬಿಕೆ ಪಾಟೀಲ, ಗಿರಿಜಾ ಪಾಟೀಲ, ಡಾ. ಸುನಂದಾ ಗಂಗೂ, ಶರಣಪ್ಪ ದುಬಲಗುಂಡೆ ಉಪಸ್ಥಿತರಿದ್ದರು. ಪ್ರೊ. ಓಂಕಾಂತ ಪಾಟೀಲ ನಿರೂಪಿಸಿದರು. ಡಾ. ಓಂಕಾಶ ಖಂಡ್ರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT