ಶುಕ್ರವಾರ, ಆಗಸ್ಟ್ 12, 2022
23 °C
ಬಾಲಕನಿಗೆ ಉಚಿತ ವಸತಿ, ಶಿಕ್ಷಣ ಭರವಸೆ ನೀಡಿದ ಡಾ.ಚಂದ್ರಶೇಖರ ಪಾಟೀಲ

ದುಬಲಗುಂಡಿ: ಅನಾಥ ಮಕ್ಕಳಿಗೆ ₹35 ಸಾವಿರ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ತಾಲ್ಲೂಕಿನ ದುಬಲ ಗುಂಡಿ ಗ್ರಾಮದಲ್ಲಿ ಕೋವಿಡ್‌ ನಿಂದ ತಂದೆ ತಾಯಿಯನ್ನು ಕಳೆದುಕೊಂಡ ಸುಷ್ಮಾ, ಸಹನಾ ಹಾಗೂ ಗಗನ ಅವರ ಮನೆಗೆ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಭೇಟಿ ನೀಡಿ ಮಕ್ಕಳಿಗೆ ಧೈರ್ಯ ತುಂಬಿದರು.

ವೈಯಕ್ತಿಕವಾಗಿ ₹25 ಸಾವಿರ ನೆರವು ನೀಡಿದ ಅವರು, ಪಟ್ಟಣದ ಹೊರವಲದಲ್ಲಿರುವ ಶಂಕುತಲಾ ಪಾಟೀಲ ಶಿಕ್ಷಣ ಸಂಸ್ಥಯಲ್ಲಿ ಬಾಲಕ ಗಗನಗೆ ಉಚಿತ ವಸತಿ ಜತೆಗೆ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.

ಶಿವರಾಜ ಗಂಗಶೆಟ್ಟಿ, ಶಂಕರ ಗಂಗಾ ಪಾಟೀಲ, ಮಲ್ಲಿಕಾರ್ಜುನ ಕಾಶೆಂಪೂರ್, ಪ್ರದೀಪ್ ಪಸರಗೆ, ಅಶೋಕ್ ಚೆಳಕಾಪುರೆ, ಮಾಹಾದೇವ ಗಂಗಶೆಟ್ಟಿ ಇದ್ದರು.

ಸಿದ್ದು ಪಾಟೀಲ ಭೇಟಿ: ಬಿಜೆಪಿ ಮುಖಂಡ ಡಾ.ಸಿದ್ದು ಪಾಟೀಲ ಅವರು ಸೋಮವಾರ ದುಬಲಗುಂಡಿ ಗ್ರಾಮದ ಸುಷ್ಮಾ, ಸಹನಾ ಹಾಗೂ ಗಗನ ಅವರ ಮನೆಗೆ ಭೇಟಿ ನೀಡಿ, ವೈಯಕ್ತಿಕವಾಗಿ ₹10 ಸಾವಿರ ವಿತರಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಾಬು ಟೈಗರ್, ವೀರೇಶ್ ಸಜ್ಜನ್, ಅನೀಲ, ಗಿರೀಶ್ ತುಂಬಾ, ಶ್ರೀನಿವಾಸ್ ದೇವಣಿಗೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು