ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಜಯಂತಿ: ಅರ್ಥಪೂರ್ಣ ಆಚರಣೆಗೆ ನಿರ್ಧಾರ

ಬೀದರ್‌ನಲ್ಲಿ ನಾಲ್ಕು ದಿನ ವಿವಿಧ ಕಾರ್ಯಕ್ರಮ
Last Updated 8 ಏಪ್ರಿಲ್ 2019, 16:02 IST
ಅಕ್ಷರ ಗಾತ್ರ

ಬೀದರ್: ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ಉತ್ಸವ ಸಮಿತಿಯ ವತಿಯಿಂದ ಏಪ್ರಿಲ್‌ 14ರಂದು ನಗರದಲ್ಲಿ ಬಾಬಾಸಾಹೇಬರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದ ಅಂಗವಾಗಿ ಸಮಿತಿಯು ಐದು ದಿನಗಳವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಏಪ್ರಿಲ್‌ 10 ರಂದು ಬೆಳಿಗ್ಗೆ 11.30ರಿಂದ ಸಂಜೆ 4 ಗಂಟೆಯ ವರೆಗೆ ಬೀದರ್‌ನ ಜನವಾಡ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ರಂಗೋಲಿ ಮತ್ತು ಚಿತ್ರಕಲಾ ಸ್ಪರ್ಧೆಗಳು ನಡೆಯಲಿವೆ.

ದಲಿತರು ಹಾಗೂ ಹಿಂದುಳಿದವರಲ್ಲಿ ಜಾಗೃತಿ ಮೂಡಿಸುವ ದಿಸೆಯಲ್ಲಿ 11 ರಂದು ಬೆಳಿಗ್ಗೆ 6 ಗಂಟೆಗೆ ಅಂಬೇಡ್ಕರ್‌ ಭವನದಿಂದ ಏಕತಾ ಓಟ ಆರಂಭವಾಗಲಿದೆ. ಈಗಾಗಲೇ ಮಾರ್ಗ ಗುರುತಿಸಲಾಗಿದ್ದು, ಅಂಬೇಡ್ಕರ್‌ ವೃತ್ತಕ್ಕೆ ಬಂದು ಸಮಾರೋಪಗೊಳ್ಳಲಿದೆ. ಯವಕರು ಹಾಗೂ ಮಕ್ಕಳು ಶ್ವೇತ ವರ್ಣದ ಬಟ್ಟೆಗಳನ್ನು ಧರಿಸಿ ಏಕತಾ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ.

12ರಂದು ಮಧ್ಯಾಹ್ನ 3 ಗಂಟೆಗೆ ಅಂಬೇಡ್ಕರ್ ಭವನದಿಂದ ಅಂಬೇಡ್ಕರ್ ವೃತ್ತದ ವರೆಗೆ ಬೈಕ್‌ ರ‍್ಯಾಲಿ ನಡೆಯಲಿದೆ. 13ರಂದು ಡಾ.ಅಂಬೇಡ್ಕರ್‌ ಭವನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ‘ಅಂಬೇಡ್ಕರ್ ಜೀವನ ಮತ್ತು ಹೋರಾಟ’ ಹಾಗೂ ‘ಭಾರತೀಯ ಸಂವಿಧಾನ’ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ.

14 ರಂದು ಬೆಳಿಗ್ಗೆ 9 ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಬಾಬಾಸಾಹೇಬರಿಗೆ ಸಾಮೂಹಿಕವಾಗಿ ಗೌರವ ಸಲ್ಲಿಸಲಾಗುವುದು. ಸಂಜೆ 5 ಗಂಟೆಗೆ ವೃತ್ತದ ಸಮೀಪ ವೇದಿಕೆಯಲ್ಲಿ ಬಹಿರಂಗ ಕಾರ್ಯಕ್ರಮ ನಡೆಯಲಿದೆ. ಆಣದೂರಿನ ಧಮ್ಮ ದರ್ಶನ ಭೂಮಿಯ ವರಜ್ಯೋತಿ ಭಂತೆ ಸಾನಿಧ್ಯ ವಹಿಸುವರು. ತಿಂಥಣಿ ಕಾಗಿನೆಲೆ ಕನಕ ಪೀಠದ ಶಿವಾನಂದ ಗುರು ಸ್ವಾಮೀಜಿ ಉದ್ಘಾಟಿಸುವರು. ಸಾಹಿತಿ ಕೆ.ಷರಿಫಾ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಡಾ.ಬಾಬಾಸಾಹೇಬ ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿಯ ಅಧ್ಯಕ್ಷ ಅರುಣ ಪಟೇಲ್, ಗೌರವಾಧ್ಯಕ್ಷ ನಾಗೇಂದ್ರ ದಂಡೆ, ಕಾರ್ಯಾಧ್ಯಕ್ಷ ವಿಜಯಕುಮಾರ ಸೋನಾರೆ, ಉಪಾಧ್ಯಕ್ಷ ರಮೇಶ ಕಟ್ಟಿತೊಗಾಂವ, ಸಲಹಾ ಸಮಿತಿ ಸದಸ್ಯರಾದ ಮಾರುತಿ ಬೌದ್ಧೆ, ಅನಿಲಕುಮಾರ ಬೆಲ್ದಾರ, ಬಾಬುರಾವ್ ಪಾಸ್ವಾನ, ಫರ್ನಾಂಡೀಸ್ ಹಿಪ್ಪಳಗಾಂವ, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜಕುಮಾರ ಮೂಲಭಾರತಿ, ರಾಜಕುಮಾರ ಬನ್ನೇರ, ಅರುಣ ಕುದುರೆ, ತುಕಾರಾಮ ಕುದುರೆ, ಶಾಲಿವಾನ್ ಬಡಿಗೇರ, ಕಲ್ಯಾಣರಾವ್ ಭೋಸ್ಲೆ, ಬಾಬುರಾವ್ ವಿಠಾರೆ, ಶಿವಕುಮಾರ ನೀಲಿಕಟ್ಟಿ, ಶ್ರೀಪತರಾವ್ ದೀನೆ, ಸುಬ್ಬಣ್ಣ ಕರಕನಳ್ಳಿ, ಮಹೇಶ ಗೋರನಾಳಕರ್, ಚಂದ್ರಕಾಂತ ನೀರಾಟೆ, ಎಂ.ಪಿ. ಮುದಾಳೆ, ಭರತನಾಗ ಕಾಂಬಳೆ, ರಾಜರತನ ಶಿಂಧೆ, ಓಂಪ್ರಕಾಶ ಭಾವಿಕಟ್ಟಿ, ರಘುನಾಥ ಗಾಯಕವಾಡ, ಗೋವಿಂದ ಪೂಜಾರಿ, ರಾಹುಲ ಡಾಂಗೆ, ಪ್ರದೀಪ ನಾಟೇಕರ್, ಪವನ ಗುನ್ನಳ್ಳಿಕರ್, ರಮೇಶ ಪಾಸ್ವಾನ, ರಮೇಶ ಡಾಕುಳಗಿ ಹಾಗೂ ಅಂಬದಾಸ ಗಾಯಕವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT