ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಗಣ್ಯರು, ಅಧಿಕಾರಿಗಳಿಂದ ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪಾರ್ಪಣೆ

ಜಿಲ್ಲೆಯ ವಿವಿಧೆಡೆ ಡಾ.ಬಿ.ಆರ್‌.ಅಂಬೇಡ್ಕರ್‌ ಮಹಾ ಪರಿನಿರ್ವಾಣ ದಿನ ಆಚರಣೆ
Last Updated 6 ಡಿಸೆಂಬರ್ 2022, 15:23 IST
ಅಕ್ಷರ ಗಾತ್ರ

ಬೀದರ್: ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 66ನೇ ಪರಿನಿರ್ವಾಣ ದಿನ ಆಚರಿಸಲಾಯಿತು. ಗಣ್ಯರು ಹಾಗೂ ಅಧಿಕಾರಿಗಳು ನಗರದಲ್ಲಿರುವ ಬಾಬಾ ಸಾಹೇಬರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಕೇಂದ್ರದ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಶಾಸಕರಾದ ಬಂಡೆಪ್ಪ ಕಾಶೆಂಪೂರ, ರಹೀಂ ಖಾನ್, ಅರವಿಂದಕುಮಾರ ಅರಳಿ, ರಾಜ್ಯ ಹಜ್‌ ಸಮಿತಿ ಅಧ್ಯಕ್ಷ ರೌಫೋದ್ದಿನ್‌ ಕಚೇರಿವಾಲೆ, ಬುಡಾ ಅಧ್ಯಕ್ಷ ಬಾಬು ವಾಲಿ ಪುಷ್ಪ ನಮನ ಸಲ್ಲಿಸಿದ ನಂತರ ಸಾರ್ವಜನಿಕರಿಗೆ ಹಣ್ಣು ಹಂಪಲು ವಿತರಿಸಿದರು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರ ಬಾಬು, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ, ತಹಶೀಲ್ದಾರ್ ಅಣ್ಣಾರಾವ್ ಪಾಟೀಲ, ವಿವಿಧ ಸಂಘಟನೆಗಳ ಮುಖಂಡರಾದ ಮಾರುತಿ ಬೌದ್ಧೆ, ಅನಿಲಕುಮಾರ ಬೆಲ್ದಾರ್, ಸುಬ್ಬಣ್ಣ ಕರಕನಳ್ಳಿ, ವಿಜಯಕುಮಾರ ಸೋನಾರೆ ಹಾಗೂ ಮಹೇಶ ಗೋರನಾಳಕರ್ ಪಾಲ್ಗೊಂಡಿದ್ದರು.

ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ: ಸಮತಾ ಸೈನಿಕ ದಳ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಅಂಬೇಡ್ಕರ್‌ ಅಭಿಮಾನಿಗಳು ಡಾ.ಬಾಬಾ ಸಾಹೇಬ ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಬಾಬಾ ಸಾಹೇಬರ ಅಭಿಮಾನಿಗಳು ಸೂರ್ಯೋದಯದ ವೇಳೆಗೆ ಪ್ರತಿಮೆ ಬಳಿ ಮೇಣದ ಬತ್ತಿಯನ್ನು ಬೆಳಗಿಸಿ ಗೌರವ ನಮನ ಸಲ್ಲಿಸಿದರು.

ಭಾರತೀಯ ಬೌದ್ಧ ಮಹಾಸಭಾದ ನೇತೃತ್ವದಲ್ಲಿ ಸಮತಾ ಸೈನಿಕ ದಳದ ಮಹಿಳಾ ಕಾರ್ಯಕರ್ತೆಯರು ಜನವಾಡ ರಸ್ತೆಯಲ್ಲಿರುವ ಬೌದ್ಧ ವಿಹಾರದಿಂದ ಡಾ.ಅಂಬೇಡ್ಕರ್‌ ವೃತ್ತದವರೆಗೆ ಪಥಸಂಚಲನ ನಡೆಸಿದರು. ನಂತರ ಗೌರವ ವಂದನೆ ಸಲ್ಲಿಸಿದರು.

ಜಾನಪದ ಅಕಾಡೆಮಿ ಮಾಜಿ ಸದಸ್ಯ ವಿಜಯಕುಮಾರ ಸೋನಾರೆ, ಪರಿನಿರ್ವಾಣ ಆಯೋಜನಾ ಸಮಿತಿಯ ವಿನಯ್ ಮಾಳಗೆ, ಮಹೇಶ ಗೋರನಾಳಕರ್, ಸಂದೀಪ್ ಕಾಂಟೆ, ಡಾ.ಸುಜಾತಾ ಹೊಸಮನಿ, ಶ್ರೀ‍ಪತರಾವ್‌ ದೀನೆ, ಶಿವಕುಮಾರ ನೀಲಿಕಟ್ಟಿ, ಅರುಣ ಕುದರೆ, ಉಮೇಶ ಸ್ವಾರಳ್ಳಿಕರ್, ಕಲ್ಯಾಣರಾವ್ ಭೋಸಲೆ, ವಿನೋದ ಅಪ್ಟೆ, ಪ್ರದೀಪ ನಾಟೇಕರ್ ಹಾಗೂ ಮಲ್ಲಿಕಾರ್ಜುನ ಚಿಟ್ಟಾ ಪಾಲ್ಗೊಂಡಿದ್ದರು.

ಬಿಜೆಪಿ ಕಚೇರಿಯಲ್ಲಿ ಪರಿನಿರ್ವಾಣ ದಿನ

ಭಾಲ್ಕಿ: ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಎನ್ಎನ್ಎಸ್‌ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಪೂಜೆ ಸಲ್ಲಿಸಿದರು.

ನಂತರ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿ ದೇಶಕ್ಕೆ ಅವರು ನೀಡಿದ ಅನನ್ಯ ಸೇವೆ ಸ್ಮರಿಸಿದರು.

ಪ್ರಮುಖರಾದ ಪಂಡಿತ ಶಿರೋಳೆ, ದಿಂಗಬರ ಮಾನಕರಿ, ಡಾ.ದಿನಕರ ಮೋರೆ, ಸೂರಜ್ ಸಿಂಗ್ ರಜಪೂತ್, ಪ್ರಭುರಾವ್ ಧೂಪೆ, ವಿಶ್ವನಾಥ ಮೋರೆ, ಬಾಬುರಾವ್ ಧೂಪೆ, ಸುರೇಶ ಹುಬ್ಬಳಿಕರ್, ಸಂತೋಷ ಪಾಟೀಲ, ಸತೀಶ ಚಾಂದಿವಾಳೆ, ಪ್ರವೀಣ ಸವರೆ, ಸುರೇಶ, ಸಂಜೀವ ಶಿಂಧೆ, ಸುಭಾಷ್ ಮಾಶೆಟ್ಟೆ, ವಿನೋದ ಕಾರಾಮುಂಗೆ, ಬಿಬಿಶನ ಬಿರಾದರ, ಕೈಲಾಸ ಪಾಟೀಲ, ಶಿವಕಾಂತ ಮಾಶೆಟ್ಟೆ, ಸುನಿಲ್ ಶಿಂಧೆ ಹಾಗೂ ಶಾಹುರಾಜ ಪವಾರ್ ಇದ್ದರು.

‘ಅಂಬೇಡ್ಕರ್ ವಿಚಾರ ಅಳವಡಿಸಿಕೊಳ್ಳಿ’

ಖಟಕಚಿಂಚೋಳಿ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಡಿಯಲ್ಲಿ ಹೋಬಳಿಯಾದ್ಯಂತ ನಡೆಯುತ್ತಿರುವ ಪ್ರಗತಿ ಕೇಂದ್ರಗಳಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.

ಸಂಘದ ಪ್ರಮುಖ ರೇವಣಸಿದ್ಧ ಜಾಡರ್ ಹಾಲಹಳ್ಳಿ ಪ್ರಗತಿ ಕೇಂದ್ರದಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನಂತರ ಮಾತನಾಡಿ,‘ಅಂಬೇಡ್ಕರ್ ಅವರ ಆದರ್ಶ, ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ಅಂಬೇಡ್ಕರ್‌ ಅವರು ನೀಡಿರುವ ಕಾನೂನನ್ನು ಗೌರವಿಸುವುದು ಹಾಗೂ ಚಾಚು ತಪ್ಪದೇ ಪಾಲಿಸಬೇಕಾಗಿರುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ’ ಎಂದು ತಿಳಿಸಿದರು.

ಪ್ರಗತಿ ಕೇಂದ್ರದ ಸಂಯೋಜಕಿ ಶ್ರೀದೇವಿ ಮಾನಕಾರಿ ಹಾಗೂ ವಿದ್ಯಾರ್ಥಿಗಳು ಇದ್ದರು.

ಭಾವಚಿತ್ರಕ್ಕೆ ಪೂಜೆ

ಕಮಲನಗರ: ಪಟ್ಟಣದ ಪಂಚಶೀಲ ನಗರ ಬಡಾವಣೆಯಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಕಾರ್ಯಕ್ರಮ ನಡೆಯಿತು.

ಭಾವುರಾವ ಹೆಡೆ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ತಾ.ಪಂ.ಮಾಜಿ ಸದಸ್ಯ ನೀಲಕಂಠರಾವ ಕಾಂಬಳೆ, ರಾಜನ್ ಸೂರ್ಯವಂಶಿ ಹಾಗೂ ನರಸಿಂಗ ಕರಕರೆ ಮಾತನಾಡಿದರು.

ಡಿಎಸ್‍ಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದರಾವ ತಾಂದಳೆ ಅಧ್ಯಕ್ಷತೆ ವಹಿಸಿದ್ದರು.

ಮುಖಂಡ ಪ್ರವೀಣ ಕದಂ, ನಿಲೇಶ ಘಾಗರೆ, ಸಚಿನ್ ಅಗಾಳೆ, ಶಾಲಿವಾನ ಡೊಂಗರೆ, ರವಿ ತಪಸ್ಯಾಳೆ, ಸತೀಶ ಡೊಂಗರೆ ಮತ್ತು ಮಹಿಳೆಯರು ಇದ್ದರು.

ಗ್ಯಾನೋಬಾ ಕಾಂಬಳೆ ಸ್ವಾಗತಿಸಿದರು. ಎನ್.ಕರಕರೆ ನಿರೂಪಿಸಿ, ವಂದಿಸಿದರು.

‘ಸಾಮಾಜಿಕ ನ್ಯಾಯ ನೀಡಿದ ಅಂಬೇಡ್ಕರ್’

ಹುಲಸೂರ: ‘ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಭಾರತದಲ್ಲಿ ಎರಡು ಸ್ವಾತಂತ್ರ್ಯ ಹೋರಾಟಗಳನ್ನು ಮಾಡಬೇಕಾಗಿತ್ತು’ ಎಂದು ತಹಶೀಲ್ದಾರ್ ಶಿವಾನಂದ ಮೇತ್ರೆ ತಿಳಿಸಿದರು.

ಪಟ್ಟಣದ ಬುದ್ಧ ವಿಹಾರದ ಆವರಣದಲ್ಲಿ ಮಂಗಳವಾರ ನಡೆದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 66ನೇ ಮಹಾ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಬೇಕಾಗಿತ್ತು. ನಂತರ ಭಾರತದಲ್ಲಿ ಪರಿಶಿಷ್ಟರಿಗೆ ಸಮಾನತೆ ಕಲ್ಪಿಸಲು ಮತ್ತೊಂದು ಹೋರಾಟ ಮಾಡಬೇಕಾಗಿತ್ತು. ಅವರು ಸಂವಿಧಾನ ರಚಿಸುವ ಮೂಲಕ ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ನೀಡಿದರು ಎಂದು ತಿಳಿಸಿದರು.

ಬಿಎಸ್‌ಐ ತಾಲ್ಲೂಕು ಘಟಕದ ಅಧ್ಯಕ್ಷ ಧರ್ಮೇಂದ್ರ ಭೊಸಲೆ, ಗ್ರಾ.ಪಂ. ಅಧ್ಯಕ್ಷ ಸಂಜೀವ.ಪಿ.ಭೂಸಾರೆ, ಜಿ.ಪಂ. ಮಾಜಿ ಸದಸ್ಯೆ ಶಾಲುಬಾಯಿ ಬನಸೂಡೆ, ತಾ.ಪಂ. ಮಾಜಿ ಸದಸ್ಯ ರಾಮರಾವ್ ಮೊರೆ, ವಿನಾಯಕ ಪವಾರ, ಪಿಡಿಒ ಸಂದೀಪ್ ಬಿರಾದಾರ, ಹಣಮಂತ ಕುಸೆ, ಪ್ರಲ್ಹಾದ್ ಮೊರೆ, ವಿದ್ಯಾಸಾಗರ ಬನಸೂಡೆ, ಜಗದೀಶ್ ದೇಟ್ನೆ ಇದ್ದರು.

‘ಕೊಡುಗೆ ಅಪಾರ’

ಹುಮನಾಬಾದ್: ‘ದೇಶಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅಪಾರ’ ಎಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನ ರಚಿಸಿ ದೇಶದ ಸರ್ವ ಜನರಿಗೂ ಸಮಾನತೆಯ ಅವಕಾಶ ನೀಡಿದ ಶ್ರೇಯಸ್ಸು ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಬಿಜೆಪಿ ಮಂಡಲ ಅಧ್ಯಕ್ಷ ಪ್ರಭಾಕರ್ ನಾಗರಹಳೆ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಗೌತಮ ಸಾಗರ, ಡಾ.ಸಿದ್ದು ಪಾಟೀಲ, ಸಿ.ಎಂ.ಫಯಾಜ್, ಸೋಮನಾಥ ಪಾಟೀಲ, ಸತೀಶ ರಾಂಪೂರೆ, ಮಹೇಶ ಅಗಡಿ ಅವರು ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿದರು.

ಪುರಸಭೆ ಅಧ್ಯಕ್ಷೆ ನೀತು ಶರ್ಮಾ, ಧರ್ಮರಾಯ ಘಾಂಗ್ರೆ, ಜಿ.ಪಂ. ಮಾಜಿ ಉಪಾಧ್ಯಕ್ಷ ಲಕ್ಷ್ಮಣರಾವ ಬುಳ್ಳಾ, ಲಕ್ಷ್ಮಿಪುತ್ರ ಮಾಳಗೆ, ಸುರೇಶ ಘಾಂಗ್ರೆ, ಶ್ರೀಧರ್ ಹಿರೇಮನಿ, ಅಶೋಕ ಸೊಂಡೆ, ಪ್ರಶಾಂತ ಉದ್ದಾ, ಗೌತಮ ಪ್ರಸಾದ, ಅನಿಲ ದೊಡ್ಡಿ, ಮಲ್ಲಿಕಾರ್ಜುನ ಶರ್ಮಾ, ಪ್ರಭು ತಾಳಮಡಗಿ, ಅನಿಲ ಪಸಾರ್ಗಿ, ನಾಗಭೂಷಣ ಸಂಗಮ, ರಾಜು ಭಂಡಾರಿ ಹಾಗೂ ಗಣಪತಿ ಅಷ್ಟೂರೆ ಇದ್ದರು.

ಚಿಟಗುಪ್ಪ: ‘ಅಂಬೇಡ್ಕರ್‌ ವಿಚಾರಗಳು ಸರ್ವಕಾಲಿಕ’ ಎಂದು ಪುರಸಭೆ ಅಧ್ಯಕ್ಷೆ ಮಾಲಾಶ್ರೀ ಶಾಮರಾವ್‌ ಅಭಿಪ್ರಾಯಪಟ್ಟರು.

ಇಲ್ಲಿಯ ಪುರಸಭೆ ಕಚೇರಿಯಲ್ಲಿ ನಡೆದ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯಾಧಿಕಾರಿ ಹುಸಾಮೊದ್ದೀನ್‌ ಮಾತನಾಡಿ,‘ಅಂಬೇಡ್ಕರ್‌ ಅವರ ಆದರ್ಶ ಬದುಕು ಎಲ್ಲರಿಗೂ ಮಾದರಿಯಾಗಿದ್ದು, ಎಲ್ಲರೂ ಆಚರಣೆಗೆ ತರಬೇಕು’ ಎಂದರು.

ಉಪಾಧ್ಯಕ್ಷೆ ಸೌಭಾಗ್ಯವತಿ ಸ್ವಾಮಿ, ಸದಸ್ಯರಾದ ದಿಲೀಪಕುಮಾರ ಬಗದಲಕರ್‌, ರಹೇಮಾನ ಪಾಷಾ, ನಾಮನಿರ್ದೇಶಿತ ಸದಸ್ಯರಾದ ಪರಮೇಶ ಬಬಡಿ, ದತ್ತಾತ್ರೆಯ, ಪಟ್ಟಣದ ಗಣ್ಯರಾದ ಶಾಮರಾವ ಭೂತಾಳೆ, ಅಶೋಕ ಸ್ವಾಮಿ, ಭಗವಾನರಾವ್ ಡಾಂಗೆ, ಮೋಹನ್‌ಸಿಂಗ್, ಶಿವು ಶರ್ಮಾ ಪುರಸಭೆ ಮಾಜಿ ಸದಸ್ಯ ಮನೋಜಕುಮಾರ ಶರ್ಮಾ, ಪುರಸಭೆ ಸಿಬ್ಬಂದಿ ಪೂಜಾ, ರವಿಕುಮಾರ, ಚಿದಾನಂದ ಪತ್ರಿ, ಸಂತೋಷ ಬಿರಾದಾರ, ಕವಿತಾ, ಸರೋಜಿನಿ, ದಿಗಂಬರ್, ಪ್ರಶಾಂತ, ಮಹೆಬೂಬ್ ಸಾಬ್, ರಾಜಕುಮಾರ, ಶಿವಕುಮಾರ, ನಿತ್ಯಾನಂದ, ಸಂತೋಷ ಕುಮಾರ, ಬಸವರಾಜ ಬಿರಾದಾರ, ದಿಲೀಪ್, ರಾಜು ತೇಲಂಗ್, ಶೈಲೇಶ್, ನಥಾನಿಯೇಲ್, ಸಚಿನ್, ಮಂಜುಳಾ, ಅಶ್ವಿನಿ, ಇಲಾಹಿ ಹಾಗೂ ರವಿ ಶಾಖಾ ಬಕ್ಕಪ್ಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT