ಹುಲಸೂರ: ಭಾಲ್ಕಿ ತಾಲ್ಲೂಕಿನ ಮೆಹಕರ ಪೊಲೀಸ್ ಠಾಣೆಯ ವತಿಯಿಂದ ಸೋಮವಾರ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ಸವಾರನಿಗೆ ಪಿಎಸ್ಐ ಶಿವಕುಮಾರ ಬಳತೆ ಅವರು ಹೊಸ ಹೆಲ್ಮೆಟ್ ವಿತರಿಸಿ ಜಾಗೃತಿ ಮೂಡಿಸಿದರು.

ಹೆಲ್ಮೆಟ್ ಇದ್ದರೆ ನಿಮ್ಮ ಪ್ರಾಣಕ್ಕೆ ಯಾವುದೇ ಅಪಾಯ ಇರುವುದಿಲ್ಲ. ತಾವು ಯಾವುದೇ ರೀತಿಯ ಸಂಕೋಚವನ್ನು ಪಡೆದೆ ಹೆಲ್ಮೆಟ್ ಬಳಸಬೇಕು. ವಾಹನ ಸವಾರರು ಮಧ್ಯಪಾನ ಮಾಡಿ ಹಾಗೂ ಮೊಬೈಲ್ನಲ್ಲಿ ಮಾತನಾಡುತ್ತಾ ವಾಹನ ಚಲಿಸಬಾರದು. ಮಾತನಾಡುವ ಮಗ್ನದಲ್ಲಿ ಚಲಿಸುವ ವಾಹನ ದಾರಿ ತಪ್ಪಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದರು.

ಸಾರ್ವಜನಿಕರು ಜಾಗೃತರಾಗಬೇಕು. ನಿಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಪೊಲೀಸ್ ಇಲಾಖೆ ನಿಮಗೋಸ್ಕರ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವಂತೆ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಎಸ್ಐ ಚಂದ್ರಶೇಖರ್, ಮಹಾಂತೇಶ್ ಸೇರಿ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.