ಭಾನುವಾರ, ಆಗಸ್ಟ್ 14, 2022
23 °C

‘ಸಮರ್ಪಕವಾಗಿ ಪಡಿತರ ಧಾನ್ಯ ವಿತರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ಬೀದರ್‌ ಜಿಲ್ಲೆಯಲ್ಲಿರುವ ಪಡಿತರ ವಿತರಕರು ಬಡವರಿಗೆ ಸಮಸ್ಯೆಯಾಗದಂತೆ ಸಮರ್ಪಕವಾಗಿ ಪಡಿತರ ಧಾನ್ಯ ವಿತರಿಸಬೇಕು ಎಂದು ಭಾರತ ಸರ್ಕಾರ ಆಹಾರ ನಿಗಮದ ನೂತನ ಸದಸ್ಯ ಉಮೇಶ ಬಿರಬಿರ್ಟೆ ಅಟ್ಟೂರ್ ಸೂಚಿಸಿದರು.

ಜಯ ಕರ್ನಾಟಕ ಸಂಘಟನೆಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಲೆಗಳಿಗೆ ಆಹಾರ ಪೂರೈಕೆ ಹಾಗೂ ಪಡಿತರ ಧಾನ್ಯ ವಿತರಣೆಯಲ್ಲಿ ಗುಣಮಟ್ಟಕ್ಕೆ ಸಂಬಂಧಿಸಿದಂತೆ ದೂರಗಳಿದ್ದರೆ ಕೂಡಲೇ ಮಾಹಿತಿ ನೀಡಬೇಕು. ಮುಲಾಜಿಲ್ಲದೆ ಕ್ರಮ ವಹಿಸುತ್ತೇನೆ ಎಂದು ತಿಳಿಸಿದರು.

ಜಯ ಕರ್ನಾಟಕ ಸಂಘಟನೆ ನಾಡು ನುಡಿ ಜಲಕ್ಕಾಗಿ ಹೋರಾಟ ನಡೆಸಿಕೊಂಡು ಬರುವ ಮೂಲಕ ರಾಜ್ಯದಲ್ಲಿ ಹೆಸರು ವಾಸಿಯಾಗಿದೆ ಎಂದರು.

ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ನವೀನ ಬತಲಿ, ಸಂದೀಪ ಬತಲಿ, ರವಿ ಭಂಡಾರಿ, ಅವಿನಾಶ ಧುಮಾಳೆ, ಪ್ರವೀಣ ಗುತ್ತೆದಾರ, ರಾಜು ವಳಖೇನಡಿ, ಪವನ ಧುಮಾಳೆ, ಮಹೇಶ ಕಟ್ಟಿಮನಿ, ರಾಹುಲ ಪರಿಟ್, ಸೋಮು ಡಾಂಗೆ ಹಾಗೂ ಪವನ ಗಡವಂತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.