ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಬಡವರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ಕೆ ಶ್ಲಾಘನೆ
Last Updated 8 ಜೂನ್ 2021, 2:06 IST
ಅಕ್ಷರ ಗಾತ್ರ

ದಾಡಗಿ (ಖಟಕಚಿಂಚೋಳಿ): ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಗ್ರಾಮೀಣ ಭಾಗದ ಬಡ ಕುಟುಂಬಗಳನ್ನು ಗುರುತಿಸಿ ಆಹಾರದ ಕಿಟ್ ನೀಡುವ ಮೂಲಕ ಅವರ ನೆರವಿಗೆ ನಿಂತಿರುವುದು ಶ್ಲಾಘನೀಯ ಕಾರ್ಯವಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಲೋಚನಾ ಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾಲ್ಕಿ ತಾಲ್ಲೂಕಿನ ದಾಡಗಿ ಗ್ರಾಮದ ಬಡ ಕುಟುಂಬಗಳಿಗೆ ಭಾನುವಾರ ಆಹಾರ ಧಾನ್ಯದ ಕಿಟ್ ವಿತರಿಸಿ ಅವರು ಮಾತನಾಡಿದರು.

‘ಸಂಸ್ಥೆಯು ಆರ್ಥಿಕ ಚಟುವಟಿಕೆ ಗಳೊಂದಿಗೆ ಸಂಕಷ್ಟದ ಸಮಯದಲ್ಲಿ ಸಮಾಜಮುಖಿ ಕಾರ್ಯದಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ’ ಎಂದರು.

ಮುಖಂಡ ಗುರಯ್ಯ ಸ್ವಾಮಿ, ಧರ್ಮಸ್ಥಳ ಸಂಸ್ಥೆಯ ತಾಲ್ಲೂಕು ಕೃಷಿ ಮೇಲ್ವಿಚಾರಕ ಸಂತೋಷ ರೆಡ್ಡಿ, ಒಕ್ಕೂಟದ ಅಧ್ಯಕ್ಷೆ ರಾಜೇಶ್ವರಿ, ಸೇವಾ ಪ್ರತಿನಿಧಿ ರೇಣುಕಾ ಇದ್ದರು.

ಬೆಳಕುಣಿಯಲ್ಲಿ ವಿತರಣೆ

ಕಮಲನಗರ: ತಾಲ್ಲೂಕಿನ ಬೆಳಕುಣಿ ಗ್ರಾಮದಲ್ಲಿ ಶನಿವಾರ ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ಗತಿಕರಿಗೆ ಆಹಾರಧಾನ್ಯದ ಕಿಟ್ ವಿತರಿಸಲಾಯಿತು.

ಪಿಎಸ್‍ಐ ರೇಣುಕಾ ಬಿ. ಮಾತನಾಡಿ, ‘ಧರ್ಮಸ್ಥಳದ ಧರ್ಮಾಧಿ ಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕೋವಿಡ್‌ 2ನೇ ಅಲೆಯ ಸಂಕಷ್ಟ ನಿವಾರಣೆ ಸಲುವಾಗಿ ಅನೇಕ ಸಮಾಜಮುಖಿ ಸೇವೆ ಶ್ಲಾಘನೀಯ’ ಎಂದು ಹೇಳಿದರು.

ತಾಲ್ಲೂಕಿನ ಠಾಣಾಕುಶನೂರು 16, ನಿಡೋದಾ 10, ಚಾಂದೂರಿ 11, ಸಂಗಮ 16, ಕೊರೆಕಲ್ 10, ಹಾಲಹಳ್ಳಿ 10 ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

ಸಂಸ್ಥೆಯ ತಾಲ್ಲೂಕು ಯೋಜನೆ ಅಧಿಕಾರಿ ಮಾಸ್ತಪ್ಪಾ, ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಘಟಕದ ಉಪಾಧ್ಯಕ್ಷ ಮಂಜುನಾಥ ಸ್ವಾಮಿ, ಗ್ರಾ.ಪಂ ಸದಸ್ಯರಾದ ಮಹಾನಂದಾ ವಲ್ಲೆಪೂರೆ, ಕರಬಸಪ್ಪಾ ಸೋರಾಳೆ, ದೌಲಪ್ಪಾ ಹಡಲಗಿ, ಪೊಲೀಸ್ ಸಿಬ್ಬಂದಿ ಶೆಫಿಕ್ ಜಮಾದಾರ, ಸೇವಾ ಪ್ರತಿನಿಧಿ ಸನಾ ಮತ್ತು ತರಬೇತಿ ಸಹಾಯಕ ಪ್ರವೀಣ ಕೋಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT