ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕಿತರಿಗೆ ಆಹಾರ ವಿತರಣೆ

ಗುರುದ್ವಾರ ಶ್ರೀ ನಾನಕ ಝೀರಾ ಸಾಹೇಬ ಪ್ರಬಂಧಕ ಕಮಿಟಿಯಿಂದ ಸೇವೆ
Last Updated 6 ಮೇ 2021, 4:22 IST
ಅಕ್ಷರ ಗಾತ್ರ

ಬೀದರ್: ಗುರುದ್ವಾರ ಶ್ರೀ ನಾನಕ ಝೀರಾ ಸಾಹೇಬ ಪ್ರಬಂಧಕ ಕಮಿಟಿಯು ನಗರದ ಬ್ರಿಮ್ಸ್ ಆಸ್ಪತ್ರೆ ಹಾಗೂ ಹಳೆಯ ನಗರದ ನೂರು ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರು ಹಾಗೂ ಅವರ ಸಂಬಂಧಿಕರಿಗೆ ಆಹಾರ ಪೂರೈಸುತ್ತಿದೆ.

ಕಮಿಟಿಯ ಅಧ್ಯಕ್ಷ ಡಾ. ಎಸ್. ಬಲಬೀರ್‌ಸಿಂಗ್ ಅವರ ನೇತೃತ್ವದಲ್ಲಿ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಚಪಾತಿ, ಅನ್ನ, ಎರಡು ಬಗೆಯ ಪಲ್ಯ, ಸಾಂಬಾರು ಒಳಗೊಂಡ ಆಹಾರ ಹಾಗೂ ಶುದ್ಧ ಕುಡಿಯುವ ನೀರಿನ ಪಾಕೇಟ್ ವಿತರಿಸಲಾಗುತ್ತಿದೆ.

‘ಬ್ರಿಮ್ಸ್ ಆಸ್ಪತ್ರೆಯಲ್ಲಿ 200 ಹಾಗೂ ನೂರು ಹಾಸಿಗೆಗಳ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ 100 ಜನರಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ’ ಎಂದು ಬಲಬೀರ್‌ಸಿಂಗ್ ತಿಳಿಸಿದ್ದಾರೆ.

‘ಕೋವಿಡ್ ಶುರುವಾದಾಗಿನಿಂದ ಆಹಾರ ವಿತರಿಸಲಾಗುತ್ತಿದೆ. ಕಮಿಟಿಯ ಪದಾಧಿಕಾರಿಗಳು, ಸ್ವಯಂ ಸೇವಕರು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರುವ ದಿನಗಳಲ್ಲಿಯೂ ಆಹಾರ ವಿತರಣೆ ಇರಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT