ಮಂಗಳವಾರ, ಜೂನ್ 28, 2022
20 °C

ಬಡವರಿಗೆ ಆಹಾರಧಾನ್ಯ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೋವಿಡ್ ಪ್ರಯುಕ್ತ ವಿಧಿಸಲಾದ ಲಾಕ್‍ಡೌನ್ ಕಾರಣ ಆರ್ಬಿಟ್ ಸಂಸ್ಥೆ, ವೀರಭದ್ರೇಶ್ವರ ಎಜುಕೇಶನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಹಾಗೂ ರೈಸಿಂಗ್ ಹ್ಯಾಂಡ್ ಯುತ್ ಆರ್ಗನೈಸೇಷನ್ ವತಿಯಿಂದ ನಗರದ ಅಕ್ಕ ಮಹಾದೇವಿ ಕಾಲೇಜು ಹಿಂದುಗಡೆ ಇರುವ ಅಕ್ಕ ಮಹಾದೇವಿ ಕಾಲೊನಿಯಲ್ಲಿ ಬಡವರಿಗೆ ಆಹಾರಧಾನ್ಯ ಕಿಟ್ ಉಚಿತವಾಗಿ ವಿತರಿಸಲಾಯಿತು.

ಕೋವಿಡ್ ಸಂಕಟದ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು ಆಹಾರ ಕಿಟ್ ವಿತರಣೆ, ಕೋವಿಡ್ ಸೋಂಕು, ಲಸಿಕೆ ಕುರಿತ ಜಾಗೃತಿ ಕಾರ್ಯಕ್ರಮಗಳ ಮೂಲಕ ಕೋವಿಡ್ ಮುಕ್ತ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿವೆ ಎಂದು ಕೇಂದ್ರ ಸರ್ಕಾರದ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.

ವೀರಭದ್ರೇಶ್ವರ ಎಜುಕೇಶನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಜಳಕೋಟೆ, ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಯೂರಕುಮಾರ ಗೋರ್ಮೆ, ಸತೀಶ್ ವಾಲಿ, ಕುಮಾರ ಸ್ವಾಮಿ, ಕಿಶೋರಕುಮಾರ, ಅಮರ ರಾಸೂರೆ ಇದ್ದರು.

ಚನ್ನಬಸವನಗರ: ಆರ್ಬಿಟ್ ಹಾಗೂ ಸಮರ್ಥ ಸೇವಾ ಸಂಸ್ಥೆ ವತಿಯಿಂದ ನಗರದ ಚನ್ನಬಸವನಗರದಲ್ಲಿ ಬಡವರಿಗೆ ಆಹಾರಧಾನ್ಯ ಕಿಟ್ ವಿತರಣೆ ಮಾಡಲಾಯಿತು.

ಗಾಂಧಿಗಂಜ್ ಠಾಣೆ ಪಿಎಸ್‍ಐ ಜಗದೀಶ್ ನಾಯ್ಕ್, ಎನ್‍ಜಿಒ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಪುನೀತ್ ಸಾಳೆ, ಸಮರ್ಥ ಸೇವಾ ಸಂಸ್ಥೆ ಅಧ್ಯಕ್ಷ ವೀರೇಶ ಸ್ವಾಮಿ, ಯುವ ಮುಖಂಡ ಗುರುನಾಥ ರಾಜಗೀರಾ, ಬಡಾವಣೆಯ ಪ್ರಮುಖರಾದ ರೇವಣಸಿದ್ದಯ್ಯ ಸ್ವಾಮಿ, ಜಗದೀಶ್ ಕಾಜಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.