ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಮಟ್ಟದ ರಂಗೋಲಿ ಸ್ಪರ್ಧೆ

ಜಿಲ್ಲಾಮಟ್ಟದ ರಂಗೋಲಿ ಸ್ಪರ್ಧೆ
Last Updated 20 ಜನವರಿ 2021, 13:41 IST
ಅಕ್ಷರ ಗಾತ್ರ

ಬೀದರ್: ಸಂಕ್ರಾಂತಿ ನಿಮಿತ್ತ ಶ್ರೀ ವೈಷ್ಣೋದೇವಿ ಕಲ್ಚರಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಇಲ್ಲಿಯ ಲಕ್ಷ್ಮೀಬಾಯಿ ಕಮಠಾಣೆ ಕಾಲೇಜಿನಲ್ಲಿ ಜಿಲ್ಲಾಮಟ್ಟದ ರಂಗೋಲಿ ಸ್ಪರ್ಧೆ ನಡೆಯಿತು.

ಚುಕ್ಕೆ ಗುರುತಿನ ರಂಗೋಲಿ ವಿಭಾಗದಲ್ಲಿ ಗೋಕರ್ಣಾ ಉಮಾಕಾಂತ (ಪ್ರಥಮ), ಜಯಶ್ರೀ ಪಾಂಡುರಂಗ ಪಾಂಚಾಳ (ದ್ವಿತೀಯ), ವಿಜಯಲಕ್ಷ್ಮಿ ಗಣಪತಿ (ತೃತೀಯ), ಫ್ರೀ ಹ್ಯಾಂಡ್ ರಂಗೋಲಿ ವಿಭಾಗದಲ್ಲಿ ಸಂಗೀತಾ ಗಂಗಾರಾಮ (ಪ್ರಥಮ), ಪೂಜಾ ಪಾಂಚಾಳ (ದ್ವಿತೀಯ) ಮತ್ತು ರಾಧಾ ಜವಾಹರ್ (ತೃತೀಯ) ಬಹುಮಾನ ಗಳಿಸಿದರು.

ಬಹುಮಾನ ವಿತರಣೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಬೇಮಳಖೇಡ ಹಿರೇಮಠದ ಡಾ. ರಾಜಶೇಖರ ಶಿವಾಚಾರ್ಯರು ‘ಪ್ರತಿ ವರ್ಷ ಜಿಲ್ಲಾ ಆಡಳಿತ ವತಿಯಿಂದ ಸಂಕ್ರಾತಿ ಹಬ್ಬ ಆಚರಿಸಬೇಕು’ ಎಂದು ಹೇಳಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಸಾಳೆ, ಕೇಂದ್ರ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ, ಬಸವ ತತ್ವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೈಜಿನಾಥ ಕಮಠಾಣೆ. ರವಿರಾಜ ಕೋಡಗೆ, ಆನಂದ ಕಾರಬಾರಿ, ದತ್ತು ಬಾವಗೆ, ಪಾಂಡುರಂಗ ಪಾಂಚಾಳ, ಸಂತೋಷ ಬಿರಾದಾರ ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.

ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಯೋಗೀಶ ಚಿತ್ರಕಲಾ ಕಾಲೇಜಿನ ಕಾರ್ಯದರ್ಶಿ ಯೋಗೀಶ ಚ. ಮಠದ, ಸುನೀಲ್ ಸಾಗರ್ ನಿರ್ಣಾಯಕರಾಗಿದ್ದರು. ಶಿಕ್ಷಕ ಸುಭಾಷ ಬಿರಾದಾರ ಸ್ವಾಗತಿಸಿದರು. ಪ್ರಾಚಾರ್ಯ ಡಾ. ದಿಲೀಪ್ ಕಮಠಾಣೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT