ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾನ್ ಬೋಸ್ಕೊ ಶಾಲೆ ವಾರ್ಷಿಕೋತ್ಸವ

Last Updated 25 ಫೆಬ್ರುವರಿ 2023, 14:12 IST
ಅಕ್ಷರ ಗಾತ್ರ

ಬೀದರ್‌: ತಾಲ್ಲೂಕಿನ ಚಿಕ್ಕಪೇಟ ಗ್ರಾಮದ ಹೊರ ವಲಯದಲ್ಲಿ ಡಾನ್ ಬೋಸ್ಕೊ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ನಡೆಯಿತು.

ಶಾಸಕ ರಹೀಂ ಖಾನ್ ಮಾತನಾಡಿ, ‘ಭಾರತದ ಸಂವಿಧಾನದಲ್ಲಿ ಶಿಕ್ಷಣದ ಹಕ್ಕು ಕಲ್ಪಿಸಲಾಗಿದೆ. ಪ್ರತಿಯೊಬ್ಬರು ಶಿಕ್ಷಣ ಪಡೆಯುವ ಮೂಲಕ ಉತ್ತಮ ಪ್ರಜೆಗಳಾಗಬೇಕು’ ಎಂದು ಹೇಳಿದರು.


ಮುಖ್ಯ ಅತಿಥಿಯಾಗಿದ್ದ ಕಲಬುರಗಿಯ ಮದರ್ ತೆರೆಸಾ ಆಸ್ಪತ್ರೆ ನಿರ್ದೇಶಕ ಫಾದರ್ ವಿನ್ಸಂಟ್ ಪೆರಿಯಾರ್ ಮಾತನಾಡಿ, ‘ಶಿಕ್ಷಣದ ಒಂದು ಕದಿಯಲಾಗದ ವಸ್ತು. ಹೀಗಾಗಿ ಪ್ರತಿಯೊಬ್ಬರು ಸುಶಿಕ್ಷಿತರಾಗುವ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.


ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಶರತಕುಮಾರ ಅಭಿಮಾನ, ಮರಖಲ್‌ ಗ್ರಾಮ ಪಂಚಾಯಿತಿ ಅಧ್ಯಕ್ಷ ವೈಜಿನಾಥ ಕಾಂಬಳೆ, ಸದಸ್ಯರಾದ ಮೆಹಬೂಬ್. ಮಾಸುಲ್ದಾರ್ ಕವಿತಾ ಕಾಂಬಳೆ ಗಾದಗಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎಂ.ಕೆ.ಪವಾರ, ಬೀದರ್‌ ನಗರಸಭೆ ಮಾಜಿ ಉಪಾಧ್ಯಕ್ಷ ಫಿಲೊಮಿನ್ ರಾಜ್, ನಗರಸಭೆ ಸದಸ್ಯ ಮಹಮ್ಮದ್‌ ಗೌಸೋಧ್ದಿನ್, ಶ್ರೀಧರ, ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆಯ ಪ್ರಾಚಾರ್ಯ ಮಾಥ್ಯೂವ್ ಕೆ. ಇದ್ದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ, ಉತ್ತಮ ಪಾಲಕ ಹಾಗೂ ಪೋಷಕರಿಗೆ ವಿಶೇಷ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ರೇಣುಕಾ ಜೋಶ್ವಾ ನಿರೂಪಿಸಿದರು. ಪ್ರವೀಣ ಕೆ.ಜಿ. ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT