ಶುಕ್ರವಾರ, ಮೇ 27, 2022
31 °C
ಈದ್‌ ಉಲ್‌ ಫಿತ್ರ್ ಮಂಗಳವಾರ ಆಚರಣೆಗೆ ನಿರ್ಧಾರ

ಖರೀದಿ ಜೋರು: ಕಳೆಗಟ್ಟಿದ ಮಾರುಕಟ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಬೀದರ್‌: ಭಾನುವಾರ ಚಂದ್ರನ ದರ್ಶನವಾಗದ ಕಾರಣ ಜಿಲ್ಲೆಯ ಮುಸ್ಲಿಂರು ಮಂಗಳವಾರ ಈದ್‌ಉಲ್‌ ಫಿತ್ರ ಹಬ್ಬ ಆಚರಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಭಾನುವಾರ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆಯೂ ಜೋರಾಗಿತ್ತು.

ನಗರದ ಓಲ್ಡ್‌ಸಿಟಿ ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದಲೇ ಜನಜಂಗಳಿ ಇತ್ತು. ಸಂಜೆ ವೇಳೆ ಜನ ದಟ್ಟಣೆ ಇನ್ನೂ ಹೆಚ್ಚಾಗಿತ್ತು. ಮುಸ್ಲಿಂ ಮಹಿಳೆಯರು ಮಕ್ಕಳೊಂದಿಗೆ ಮಾರುಕಟ್ಟೆಗೆ ಬಂದು ಹೊಸ ಬಟ್ಟೆ, ಬಳೆ, ಸುಗಂಧ ದ್ರವ್ಯ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದರು. ಬಟ್ಟೆ ಅಂಗಡಿಗಳು ಗ್ರಾಹಕರಿಂದ ತುಂಬಿಕೊಂಡಿದ್ದವು.

ಹಬ್ಬದ ರಿಯಾಯಿತಿ ಘೋಷಿಸಿದ್ದ ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರು ಮುಗಿಬಿದ್ದಿದ್ದರು. ಮಕ್ಕಳಿಗೂ ಹೊಸ ಬಟ್ಟೆ ಖರೀದಿಸಿ ಸಂಭ್ರಮಿಸಿದರು. ಕೆಲವರು ಹೊಸ ಪಾದರಕ್ಷೆ ಹಾಗೂ ಅಲಂಕಾರಿಕ ಸಾಮಗ್ರಿಗಳನ್ನು ಖರೀದಿಸಿದರು.

ಹಬ್ಬದ ದಿನ 'ಸುರಕುಂಬಾ' ತಯಾರಿಸಲು ಬೇಕಾಗುವ ಸಾಮಗ್ರಿಗಳನ್ನು ಮಹಿಳೆಯರು ಖರೀದಿ ಮಾಡಿದರು.

ಸುರಕುಂಬಾಕ್ಕೆ ಬೇಕಾಗುವ ಬದಾಮಿ, ಗೋಡಂಬಿ, ಕಿಸಿಮಿಸಿ, ಒಣದ್ರಾಕ್ಷಿ, ಶಾವಿಗೆ ಬೆಲೆ ಕೊಂಚ ಹೆಚ್ಚಾಗಿರುವುದು ಗ್ರಾಹಕರಿಗೆ ಬಿಸಿ ಮುಟ್ಟಿಸಿತು.

2 ವರ್ಷ ಕೋವಿಡ್‌ ಕಾರಣ ಸಂಭ್ರಮದಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಎಲ್ಲ ನಿಬಂಧನೆಗಳನ್ನು ತೆಗೆದು ಹಾಕಲಾಗಿದೆ. ಮುಕ್ತವಾಗಿ ಹಬ್ಬ ಆಚರಿಸಲು ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಈದ್‌ಉಲ್‌ ಫಿತ್ರ ಹಬ್ಬದ ಮುನ್ನವೇ ನಗರದಲ್ಲಿ ವ್ಯಾಪಾರದ ಭರಾಟೆ ಕಂಡು ಬಂದಿತು. ಗವಾನ್‌ ಚೌಕ್‌ಗೆ ಸುತ್ತಲೂ ವಿದ್ಯತ್‌ ದೀಪಗಳ ಅಲಂಕಾರ ಮಾಡಲಾಗಿದೆ. ಮಸೀದಿಗಳಿಗೂ ಅಲಂಕಾರಿಕ ವಿದ್ಯುತ್‌ಗಳನ್ನು ಹಾಕಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.