ಗುರುವಾರ , ಆಗಸ್ಟ್ 18, 2022
24 °C
ಚುನಾವಣೆ ತಕರಾರು ಅರ್ಜಿ: ನಗರಸಭೆ ಸದಸ್ಯೆಗೆ ನೋಟಿಸ್

ಚುನಾವಣೆ ತಕರಾರು ಅರ್ಜಿ: ನಗರಸಭೆ ಸದಸ್ಯೆಗೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಚುನಾವಣೆ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಇಲ್ಲಿಯ ಹೆಚ್ಚುವರಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯವು ಬೀದರ್ ನಗರಸಭೆಯ ವಾರ್ಡ್ ಸಂಖ್ಯೆ 21ರ ಜೆಡಿಎಸ್ ಸದಸ್ಯೆ ಸಂತೋಷಕುಮಾರಿ ಅರುಣ ಅವರಿಗೆ ನೋಟಿಸ್ ನೀಡಿದೆ.

ಹೆಚ್ಚುವರಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಆರ್.ಪಿ. ಗೌಡ ಅವರು ಜೂನ್ 18 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸದಸ್ಯೆಗೆ ಸೂಚಿಸಿದ್ದಾರೆ ಎಂದು ಕಾಂಗ್ರೆಸ್‍ನ ಪರಾಜಿತ ಅಭ್ಯರ್ಥಿ ಸಂಗೀತಾ ಶ್ರೀಮಂತ ಧಬಾಲೆ ತಿಳಿಸಿದ್ದಾರೆ.

ವಾರ್ಡ್ ಸಂಖ್ಯೆ 21ರ ಚುನಾವಣೆಗೆ ಸಂಬಂಧಿಸಿದಂತೆ ಸಂಗೀತಾ ಶ್ರೀಮಂತ ಧಬಾಲೆ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಸಂತೋಷಕುಮಾರಿ ಅರುಣ ಬಸವನಗರ ನಿವಾಸಿಯಾಗಿದ್ದಾರೆ. ವಾರ್ಡ್ ಸಂಖ್ಯೆ 22 ರ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇದೆ. ಚುನಾವಣೆ ಘೋಷಣೆಯಾದ ನಂತರ ಅವರು ವಾರ್ಡ್ ಸಂಖ್ಯೆ 21 ರ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿದ್ದಾರೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರ ನಾಮಪತ್ರ ಸ್ವೀಕರಿಸಿರುವುದು ಕಾನೂನು ಬಾಹೀರವಾಗಿದೆ ಎಂದು ಆರೋಪಿಸಿದ್ದಾರೆ.

ಅರ್ಜಿದಾರರ ಪರ ವಕೀಲ ಅಶೋಕ ಮಾನೂರೆ ವಾದ ಮಂಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.