ಭಾನುವಾರ, ಸೆಪ್ಟೆಂಬರ್ 26, 2021
28 °C

ವಿದ್ಯುತ್ ತಂತಿ ಕಡಿದು ಮಾವಿನ ಮರಗಳು ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ತಾಲ್ಲೂಕಿನ ಮುತ್ತಂಗಿ ಗ್ರಾಮದ ಚನ್ನಯ್ಯ ಸ್ವಾಮಿ ಮಠ ಅವರ ತೋಟದಲ್ಲಿ ಹೈವೋಲ್ಟ್ ವಿದ್ಯುತ್ ತಂತಿ ಕಡಿದು ಬಿದ್ದು 4 ಎಕರೆ ಮಾವಿನ ಮರಗಳು ಸುಟ್ಟಿರುವ ಘಟನೆ ಬುಧವಾರ ಸಂಭವಿಸಿದೆ.

12 ಎಕರೆ ಭೂಮಿಯಲ್ಲಿ ಮಾವಿನ ಮರಗಳು ಬೆಳೆದಿದ್ದು ಸರ್ವೆ ನಂಬರ್‌ 119ರಲ್ಲಿ ಜೆಸ್ಕಾಂನ 90 ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಅವುಗಳಲ್ಲಿ ಕೆಲವು ಕಂಬಗಳ ತಂತಿ ಕಡಿದು ಬಿದ್ದಿದ್ದರಿಂದ 4 ಎಕರೆ ಮಾವಿನ ಮರಗಳು ಸುಟ್ಟು ಭಸ್ಮವಾಗಿದೆ.

ಹಾನಿ ಮೌಲ್ಯ ₹5 ಲಕ್ಷ ಎಂದು ಅಂದಾಜಿಸಲಾಗಿದೆ. ಸಕಾಲಕ್ಕೆ ಪಟ್ಟಣದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು