ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮಾತ್ರ ಮತಯಂತ್ರ ಬಳಕೆ

ಜಿಲ್ಲೆಯಲ್ಲಿ ಡಿ. 22, 27ರಂದು ಗ್ರಾ.ಪಂ ಚುನಾವಣೆ
Last Updated 30 ನವೆಂಬರ್ 2020, 14:20 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ 178 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಮೊದಲ ಹಂತದ ಮತದಾನ ಡಿ. 22ರಂದು ಬಸವಕಲ್ಯಾಣ, ಹುಲಸೂರ, ಹುಮನಾಬಾದ್‌, ಚಿಟಗುಪ್ಪ, ಭಾಲ್ಕಿಯಲ್ಲಿ ಹಾಗೂ ಎರಡನೇ ಹಂತದ ಮತದಾನ ಡಿ. 27ರಂದು ಬೀದರ್‌, ಔರಾದ್‌ ಹಾಗೂ ಕಮಲನಗರ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ನಡೆಯಲಿದೆ.

ಮೊದಲ ಹಂತದಲ್ಲಿ ಬಸವಕಲ್ಯಾಣದ 31, ಹುಲಸೂರಿನ 4, ಹುಮನಾಬಾದ್‌ನ 19, ಚಿಟಗುಪ್ಪದ 12, ಭಾಲ್ಕಿಯ 40 ಸೇರಿ ಒಟ್ಟು 106 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ ಬೀದರ್‌ ತಾಲ್ಲೂಕಿನ 33, ಔರಾದ್‌ ತಾಲ್ಲೂಕಿನ 33 ಹಾಗೂ ಕಮಲನಗರ ತಾಲ್ಲೂಕಿನ 18 ಗ್ರಾನ ಪಂಚಾಯಿತಿಗಳ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ.

ಎರಡೂ ಹಂತಗಳಲ್ಲಿ ನಡೆದ ಮತದಾನದ ಮತಗಳ ಎಣಿಕೆ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಡಿ 30ರಂದು ನಡೆಯಲಿದೆ ಎಂದು ರಾಜ್ಯ ಚುನಾವಣೆ ಆಯೋಗ ತಿಳಿಸಿದೆ.

ಜಿಲ್ಲೆಯ 8 ತಾಲ್ಲೂಕುಗಳ 178 ಗ್ರಾಮ ಪಂಚಾಯಿತಿಗಳ ಚುನಾವಣೆಗೆ 1153 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. 5,18,959 ಪುರುಷರು, 4,80,023 ಮಹಿಳೆಯರು ಹಾಗೂ 19 ಇತರೆ ಮತದಾರರು ಸೇರಿ ಒಟ್ಟು 9,99,001 ಮತದಾರರು ಜಿಲ್ಲೆಯಲ್ಲಿ ಇದ್ದಾರೆ.

ಡಿ.7ರಿಂದ ನಾಮಪತ್ರ ಸಲ್ಲಿಕೆ: ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಡಿ.7ರಿಂದ ಮತ್ತು ಎರಡನೇ ಹಂತದ ಮತದಾನಕ್ಕೆ ಡಿ.11ರಿಂದ ನಾಮಪತ್ರ ಸಲ್ಲಿಸಬಹುದಾಗಿದೆ. ಡಿ,11 ಮತ್ತು 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಡಿ.12 ಮತ್ತು 17ರಂದು ನಾಮಪತ್ರಗಳ ಪರಿಶೀಲನೆ ನಡೆಲಿದೆ. ನಾಮಪತ್ರ ವಾಪಸ್ ಪಡೆಯಲು ಕ್ರಮವಾಗಿ ಡಿ.14 ಮತ್ತು 19ರಂದು ಕೊನೆಯ ದಿನವಾಗಿವೆ.

ಚುನಾವಣೆ ಆಯೋಗ ಬೀದರ್‌ ಜಿಲ್ಲೆಯಲ್ಲಿ ಮಾತ್ರ ಮತಯಂತ್ರ(ಇವಿಎಂ) ಬಳಕೆ ಮಾಡಲು ನಿರ್ಧರಿಸಿದೆ.

ಮತದಾನದ ವೇಳೆ ಕೋವಿಡ್ ಹರಡದಂತೆ ಮುನ್ನೆಚ್ಚಕೆ ಕ್ರಮಗಳನ್ನು ಕೈಗೊಳ್ಳಲಿದೆ. ಕೋವಿಡ್‌ ಸೋಂಕಿತರಿಗೂ ಮತದಾನ ಮಾಡಲು ಕೊನೆಯ 1 ಗಂಟೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT