ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬಕಾರಿ ಅಧಿಕಾರಿಗಳ ದಾಳಿ: ಅಕ್ರಮ ಮದ್ಯ ಜಪ್ತಿ

Last Updated 12 ಅಕ್ಟೋಬರ್ 2021, 3:16 IST
ಅಕ್ಷರ ಗಾತ್ರ

ಬಸವಕಲ್ಯಾಣ: ಅಬಕಾರಿ ಇಲಾಖೆ ಅಧಿಕಾರಿಗಳು ಸೋಮವಾರ ಎರಡು ಪ್ರತ್ಯೇಕ ಸ್ಥಳಗಳ ಮೇಲೆ ದಾಳಿ ನಡೆಸಿ ಮದ್ಯ ಸೇರಿ ₹4.85 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಭೂಷಣ ಕುಪ್ಪಣ್ಣ ಬಿರಾದಾರ ಕುಬಮೋಳ, ಶಿವಶರಣ ಶಾಮರಾವ ಬಗದೂರೆ ಶರಣನಗರ ಹಾಗೂ ಶಿವಕುಮಾರ ದತ್ತಾತ್ರಿ ಮುಡಬಿ ಬಂಧಿತರು.

ಅಬಕಾರಿ ಉಪ ಆಯುಕ್ತ ಸಂಗನಗೌಡ ನೇತೃತ್ವದಲ್ಲಿ ದಾಳಿ ನಡೆದಿದೆ.

ಗೋವಾ ರಾಜ್ಯದಲ್ಲಿ ಮಾರಾಟ ಮಾಡಲಾಗುವ 37.620 ಲೀಟರ್ ಮದ್ಯ, ಕರ್ನಾಟಕದಲ್ಲಿ ಮಾರಾಟಕ್ಕಿರುವ 25.020 ಲೀಟರ್ ಮದ್ಯ ಹಾಗೂ 35.550 ಲೀಟರ್ ಬೀಯರ್, ಇವುಗಳ ಸಾಗಾಟಕ್ಕೆ ಬಳಸಿದ ದ್ವಿಚಕ್ರ ವಾಹನ ಮತ್ತು ಒಂದು ರಿಟಿಗಾ ಕಾರು ಹಾಗೂ ₹600 ನಗದು ಜಪ್ತಿ ಮಾಡಿಕೊಳ್ಳಲಾಗಿದೆ.

ಅಬಕಾರಿ ನಿರೀಕ್ಷಕ ರವೀಂದ್ರ ಪಾಟೀಲ, ನಾಗನಗೌಡ ಕೇರೂರ ಅವರು ಆರೋಪಿಗಳ ಬಂಧನಕ್ಕೆ ಶ್ರಮಿಸಿದ್ದಾರೆ. ಆನಂದ ಉಕ್ಕಲಿ, ಸುರೇಶ ಶಂಕರ, ದಿಲೀಪಸಿಂಗ ಠಾಕೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT