ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಸನ್ಮಾರ್ಗದ ಹಾದಿ ತೋರುವುದು; ಹಾವಗಿಲಿಂಗೇಶ್ವರ ಶಿವಾಚಾರ್ಯರು

Last Updated 17 ಏಪ್ರಿಲ್ 2022, 4:14 IST
ಅಕ್ಷರ ಗಾತ್ರ

ಭಾಲ್ಕಿ: ಧರ್ಮ, ಸತ್‌ ಚಿಂತನೆ, ಶರಣರ, ಸಂತರ ವಾಣಿ ಮಾನವರನ್ನು ಒಳ್ಳೆಯ ಮಾರ್ಗದಲ್ಲಿ ನಡೆಸುತ್ತವೆ ಎಂದು ಹಲಬರ್ಗಾದ ರಾಚೋಟೇಶ್ವರ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಜ್ಯಾಂತಿ ಗ್ರಾಮದಲ್ಲಿ ಶನಿವಾರ ನಡೆದ ಮಲ್ಲಿಕಾರ್ಜುನ ಮತ್ತು ಭ್ರಮರಾಂಬಿಕಾ ದೇವಸ್ಥಾನದ ಕಳಸಾರೋಹಣ, 73ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧಾರ್ಮಿಕ, ಸಭೆ, ಜಾತ್ರೆಗಳು ಗ್ರಾಮದ ಎಲ್ಲರನ್ನೂ ಒಗೂಡಿಸಿ ಸೌಹಾರ್ದಯುತ, ಸ್ನೇಹಮಯ ಭಾವನೆ ಬೆಳೆಸುತ್ತವೆ. ಜ್ಯಾಂತಿ ಗ್ರಾಮ ಇಂದು ಮಲ್ಲಿಕಾರ್ಜುನ ಮಯವಾಗಿದೆ. ದೇವರ ಮೇಲಿರುವ ನಿಮ್ಮ ಭಕ್ತಿ, ಶ್ರದ್ಧೆ ಮೆಚ್ಚುವಂತಹದ್ದು ಎಂದು ಅವರು ತಿಳಿಸಿದರು.

ಹುಡುಗಿಯ ವೀರೂಪಾಕ್ಷ ಶಿವಾಚಾ ರ್ಯರು, ರಾಜೇಶ್ವರ ಶಿವಾಚಾರ್ಯರು ಮಾತನಾಡಿದರು. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಪಂಡಿತಾ ರಾಧ್ಯ ಶಿವಾಚಾರ್ಯರು, ಶಂಕರಲಿಂಗ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು, ಬಸವಲಿಂಗ ಶಿವಾಚಾರ್ಯರು, ಮೃತ್ಯುಂಜಯ ಶಿವ ಯೋಗಿ ಶಿವಾಚಾರ್ಯರು, ಉದಯ ರಾಜ ಯೋಗೇಂದ್ರ ಶಿವಾಚಾರ್ಯರು, ಮಹಾತ್ಮ ಗಾಂಧಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ವೈಜಿನಾಥ ಪಾಟೀಲ ಇದ್ದರು.

ಹಾಸ್ಯ ಕಲಾವಿದ ನವಲಿಂಗ ಪಾಟೀಲ ನಿರೂಪಿಸಿ, ವಂದಿಸಿದರು.

ಭಾನುವಾರ ರಾತ್ರಿ 10.30ಕ್ಕೆ ರಥೋತ್ಸವ ನೆರವೇರಲಿದ್ದು, ಭಜನೆ ಸೇರಿ ನಾನಾ ಕಾರ್ಯಕ್ರಮಗಳು ಜರುಗಲಿವೆ.

ಪಲ್ಲಕ್ಕಿ ಮೆರವಣಿಗೆಯೂ ರಾಜೇಂದ್ರ ಪಾಟೀಲ ಮನೆಯಿಂದ ಆರಂಭವಾಗಿ ಲಕ್ಷ್ಮಿ ದೇವಸ್ಥಾನದ ಮಾರ್ಗವಾಗಿ ಮಲ್ಲಿಕಾರ್ಜುನ ದೇವಸ್ಥಾನ ತಲುಪಿತು. ತುಂಬಿದ ಕಳಸ ಹೊತ್ತಿದ್ದ ಮುತೈದೆಯರು ಮೆರವಣಿಗೆಯ ಪ್ರಮುಖ ಆಕರ್ಷಣೆ ಆಗಿದ್ದರು. ಕಳಸಾರೋಹಣ ಕಾರ್ಯಕ್ರಮದ ನಂತರ ಹೆಲಿಕಾಪ್ಟರ್‌ ಮೂಲಕ ದೇವಸ್ಥಾನಗಳ ಮೇಲೆ ಪುಷ್ಪವೃಷ್ಟಿಗೈಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT