ಶುಕ್ರವಾರ, ಮೇ 29, 2020
27 °C
ಬಸವನವಾಡಿ: ಸಾಲ ತೀರಿಸಲಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ ಅನ್ನದಾತ

ಬೀದರ್ | ರೈತ–ಚಿಂತಾಕ್ರಾಂತ: ಹೊಲದಲ್ಲಿಯೇ ಕೊಳೆಯುತ್ತಿದೆ ಕಲ್ಲಂಗಡಿ

ಬಸವರಾಜ್ ಎಸ್.ಪ್ರಭಾ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ತಾಲ್ಲೂಕಿನ ಬಸವನವಾಡಿ ಗ್ರಾಮದ ರೈತ ಲಕ್ಷ್ಮಣರಾವ ಗೋರಕರಾವ ಅವರು ಬೆಳೆದ ಕಲ್ಲಂಗಡಿ ಹೊಲದಲ್ಲಿಯೇ ಕೊಳೆಯುತ್ತಿದೆ.

ಎರಡೂವರೆ ಎಕರೆಯಲ್ಲಿ ಅವರು ಕಲ್ಲಂಗಡಿ ಬೆಳೆದಿದ್ದರು. ಆದರೆ, ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಮಾರುಕಟ್ಟೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಕಲ್ಲಂಗಡಿ ಬೆಳೆಯಲ್ಲಿ ಉತ್ತಮ ಲಾಭ ಪಡೆಯಬಹುದು ಎಂದು ಸಾಲ ಮಾಡಿ ಎರಡೂವರೆ ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದೇನೆ. ₹2.5 ಲಕ್ಷ ಖರ್ಚು ಮಾಡಿದ್ದೇನೆ. ಕಲ್ಲಂಗಡಿ ಮಾರಾಟದಿಂದ ಕೈ ತುಂಬಾ ಸಂಪಾದನೆ ಮಾಡಿ ಸಾಲ ತೀರಿಸಿ ಉತ್ತಮ ಬದುಕು ನಡೆಸಬೇಕು ಎನ್ನುವಷ್ಟರಲ್ಲಿ ಕೊರೊನಾ ಬಂದು ನಮ್ಮ ಬದುಕನ್ನು ಬೀದಿಗೆ ತಳ್ಳಿತು’ ಎಂದು ರೈತ ಲಕ್ಷ್ಮಣರಾವ ಗೋರಕರಾವ
ಕಣ್ಣಿರಾದರು.

‘ಹನಿ ನೀರಾವರಿಗಾಗಿ ಖಾಸಗಿಯವರ ಬಳಿ ಸಾಲ ಮಾಡಿದ್ದರಿಂದ ಬೆಳೆ ನಷ್ಟ ನನ್ನನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ. ಸರ್ಕಾರ ನೆರವಿಗೆ ಬರಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು