ಗುರುವಾರ , ಡಿಸೆಂಬರ್ 1, 2022
20 °C

ಬೀದರ್: ಒಂದೇ ಕುಟುಂಬದ ನಾಲ್ವರು ನೀರು ಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನವಾಡ (ಬೀದರ್‌ ಜಿಲ್ಲೆ): ಬೀದರ್ ತಾಲ್ಲೂಕಿನ ಕಂಗಟಿ ಗ್ರಾಮದ ಕೆರೆಗೆ ಬಟ್ಟೆ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರು ಪಾಲಾಗಿದ್ದಾರೆ. ಮೂವರ ಶವ ದೊರೆಕಿದ್ದು, ಬಾಲಕನ ಶೋಧ ಕಾರ್ಯ ಮುಂದುವರಿದಿದೆ.

ಕಂಗಟಿ ಗ್ರಾಮದ ಆನಂದಾ ಸಂಜುಕುಮಾರ ಪರೀಟ (30), ಪ್ರಜ್ವಲ್‌ ಸಂಜುಕುಮಾರ ಪರೀಟ (12) ಹಾಗೂ ಸುನೀತಾ ಮಂಜುಕುಮಾರ ಪರೀಟ (25) ಅವರ ಶವಗಳು ದೊರೆಕಿವೆ. ನಾಗಶೆಟ್ಟಿ ಮಂಜುಕುಮಾರ ಪರೀಟ (10) ಅವರಿಗಾಗಿ ಹುಡುಕಾಟ ನಡೆದಿದೆ.

ಆನಂದಾ ಹಾಗೂ ಸುನೀತಾ ಬಟ್ಟೆ ತೊಳೆಯಲು ಹೋದಾಗ ಮಕ್ಕಳು ಈಜಲು ನೀರಿಗೆ ಇಳಿದ ಸಂದರ್ಭದಲ್ಲಿ ಕೆಸರಿನಲ್ಲಿ ಸಿಕ್ಕಿಕೊಂಡಿದ್ದರು. ಅವರನ್ನು ಮೇಲಕ್ಕೆತ್ತಲು ಹೋದ ತಾಯಂದಿರೂ ನೀರು ಪಾಲಾಗಿದ್ದಾರೆ. ಜನವಾಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಳುಗು ತಜ್ಞರನ್ನು ಕರೆಸಿ ಶವಗಳ ಶೋಧ ಕಾರ್ಯ ನಡೆಸಿದರು. ಮೂವರ ಶವ ಸಂಜೆ ಪತ್ತೆಯಾಗಿದೆ. ತಡ ರಾತ್ರಿವರೆಗೂ ಬಾಲಕ ಪತ್ತೆಯಾಗಿಲ್ಲ.

ನವರಾತ್ರಿ ಸಂದರ್ಭದಲ್ಲಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.